ರಾಮಾಚಾರಿ ಸ್ಟೈಲಿನಲ್ಲಿ ಬರ್ತ್‌ಡೇ ಕೇಕ್‌ ಕ್ಯಾಂಡಲ್‌ ಹಚ್ಚಿದ ನಿವೇದಿತಾ

ಚಂದನದ ಗೊಂಬೆ ನಿವೇದಿತಾ ಗೌಡ (Niveditha Gowda) ಅವರು ಇತ್ತೀಚಿಗೆ ತಮ್ಮ ಹುಟ್ಟುಹಬ್ಬವನ್ನ ಆಚರಿಸಿದ್ದರು. ರಾಮಾಚಾರಿ ಸ್ಟೈಲಿನಲ್ಲಿಯೇ ನಿವೇದಿತಾ ಕೇಕ್ ಕ್ಯಾಂಡಲ್ ಹಚ್ಚಿದ್ದಾರೆ. ದುಬಾರಿ ಕಾರು ಮಾತ್ರವಲ್ಲ ಮತ್ತೊಂದು ದುಬಾರಿ ಉಡುಗೊರೆಯೊಂದನ್ನ ಚಂದನ್ ಶೆಟ್ಟಿ (Chandan Shetty) ಪತ್ನಿಗೆ ನೀಡಿದ್ದಾರೆ.

ಪತ್ನಿ ನಿವೇದಿತಾ ಹುಟ್ಟುಹಬ್ಬಕ್ಕೆ ಐಷಾರಾಮಿ ಕಾರೊಂದನ್ನ ಚಂದನ್ ಗಿಫ್ಟ್ ಮಾಡಿದ್ದರು. ನಿವೇದಿತಾ ಗೌಡ ಹುಟ್ಟುಹಬ್ಬವನ್ನ (ಮೇ.12) ಅದ್ದೂರಿಯಾಗಿ ಆಚರಿಸಿದ್ದಾರೆ. ಬೆಂಗಳೂರಿನ ಪಬ್‌ವೊಂದರಲ್ಲಿ ಚಂದನ್ ಫುಲ್ ಬಲೂನ್‌ಗಳಿಂದ ಅಲಂಕಾರ ಮಾಡಿದ್ದಾರೆ. ಬರ್ತ್‌ಡೇ (Birthday) ಕ್ಯಾಂಡಲ್‌ನ ಸಿಗರೇಟ್ ರೀತಿ ಹಚ್ಚಿದ ನಿವೇದಿತಾ, ಕೇಕ್‌ನ ಕತ್ತರಿಸಿ ಎಂಜಾಯ್ ಮಾಡಿದ್ದಾರೆ. ಬಳಿಕ ನಿವಿ ಕೈಗೆ ಒಂದು ಗಿಫ್ಟ್ ಕೊಟ್ಟು ಓಪನ್ ಮಾಡಲು ಹೇಳಿದ್ದಾರೆ. ತೆರೆಯುತ್ತಿದ್ದಂತೆ ಚಿನ್ನದ ಸರ ಕಾಣಿಸಿಕೊಂಡಿದೆ. ತಕ್ಷಣವೇ ಚಂದನ್ ಅದನ್ನು ನಿವಿ ಕೊರಳಿಗೆ ಎಲ್ಲರ ಎದುರು ಹಾಕಿದ್ದಾರೆ. ನನ್ನ ಡ್ರೆಸ್‌ಗೆ ಮ್ಯಾಚ್ ಆಗುತ್ತಿದೆ ನನಗೆ ಇಷ್ಟ ಆಯ್ತು ಎಂದು ಖುಷಿ ಪಟ್ಟಿದ್ದಾರೆ. ಸೃಜನ್ ಲೋಕೇಶ್, ಜಗಪ್ಪ, ಮಹಿತಾ, ಸುಶ್ಮಿತಾ, ಪ್ರಶಾಂತ್, ಜಾನವಿ, ವಿನೋದ್ ಗೊಬ್ಬರಗಾಲ, ನಿರಂಜನ್ ದೇಶಪಾಂಡೆ ಸೇರಿದಂತೆ ಹಲವರು ಭಾಗಿಯಾಗಿದ್ದರು.

ನನ್ನ ಬರ್ತಡೇ ಸೆಲೆಬ್ರೇಷನ್ ಅದ್ಧೂರಿಯಾಗಿ ನಡೆಯಿತು. ಬರ್ತಡೇ ಮುಗಿಯಿತು ಎಂದು ಬೇಜಾರ್ ಆಗುತ್ತಿದೆ. ನನ್ನ ಜೀವನದಲ್ಲಿ ಬೆಸ್ಟ್ ಹುಟ್ಟುಹಬ್ಬವನ್ನು ಈ ವರ್ಷ ಆಚರಿಸಿಕೊಂಡಿರುವೆ. ನನ್ನ ವೀಕ್ಷಕರು ನನಗೆ ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆ. ಇದೇ ರೀತಿ ಪ್ರೀತಿ ಕೊಡಿ ಎಂದು ನಿವಿ ಹೇಳಿದ್ದಾರೆ.

ಟಿಕ್ ಟಾಕ್ ಮಾಡುತ್ತಿದ್ದ ನಿವೇದಿತಾ ವೀಡಿಯೋಗಳು ಅಂದು ಭರ್ಜರಿ ವಿವ್ಸ್ ಗಳಿಸುತ್ತಿತ್ತು. ಇದರಿಂದಲೇ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯುವ ಅವಕಾಶ ಗಳಿಸಿದ್ರು. ಈ ಶೋ ಬಳಿಕ ಅವರ ಜನಪ್ರಿಯತೆ ಜಾಸ್ತಿಯಾಯಿತು. ಒಬ್ಬರನೊಬ್ಬರು ಪ್ರೀತಿಸಿ ಗುರುಹಿರಿಯರ ಸಮ್ಮುಖದಲ್ಲಿ ಚಂದನ್- ನಿವೇದಿತಾ ಮೈಸೂರಿನಲ್ಲಿ ಮದುವೆಯಾದರು.