ಇಬ್ಬರದು ಬರ್ತ್ ಡೇ ಅಲ್ಲ, ಆದ್ರೂ ಕೇಕ್ ಕಟ್ ಮಾಡಿ ಚಂದನ್, ನಿವೇದಿತಾ ಸಂಭ್ರಮಿಸಿದ್ದು ಯಾಕೆ?

ಬೆಂಗಳೂರು: ಬಿಗ್‍ಬಾಸ್ ವಿನ್ನರ್ ಹಾಗೂ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ಬೊಂಬೆ ನಿವೇದಿತಾ ಗೌಡ ಇಬ್ಬರ ಸ್ನೇಹ 1 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

ಬಿಗ್‍ಬಾಸ್ ವೇದಿಕೆಯಿಂದ ಚಿರಪರಿಚಿತರಾಗಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಒಂದು ವರ್ಷದ ಸಂಭ್ರಮಾಚರಣೆಯಲ್ಲಿದ್ದಾರೆ. ಸ್ವತಃ ಇಬ್ಬರೂ ಸೇರಿ ಒಂದೇ ಕೇಕ್ ಕಟ್ ಮಾಡುವ ಮೂಲಕ ತಮ್ಮ 1 ವರ್ಷದ ಸ್ನೇಹದ ಆಚರಣೆ ಮಾಡಿದ್ದಾರೆ. ಈ ಬಗ್ಗೆ ಇಬ್ಬರು ಕೂಡ ಇನ್‍ಸ್ಟಾಗ್ರಾಮ್‍ನಲ್ಲಿ ಸ್ನೇಹದ ಸಂಭ್ರಮಾಚರಣೆಯ ಫೋಟೋವನ್ನು ಪ್ರಕಟಿಸಿದ್ದಾರೆ.

https://www.instagram.com/p/Bo6SOuhBAyb/?taken-by=niveditha__gowda

ನಿವೇದಿತಾ ಗೌಡ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ,”ಇಂದಿಗೆ ನಾನು ನಿಮ್ಮನ್ನು ಬಿಗ್‍ಬಾಸ್‍ನಲ್ಲಿ ಭೇಟಿಯಾಗಿ ಒಂದು ವರ್ಷ ಕಳೆಯಿತು. ದಿನದಿಂದ ದಿನಕ್ಕೆ ನಮ್ಮ ಸ್ನೇಹದ ಬಂಧ ಹೆಚ್ಚುತ್ತಾ ಹೋಗುತ್ತಿದೆ. ನಮ್ಮ ಬಗ್ಗೆ ಇಡೀ ಜಗತ್ತು ಏನೇ ಹೇಳಿದರೂ, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲರಿಗಿಂತ ನನಗೆ ಚೆನ್ನಾಗಿ ಗೊತ್ತು ನೀನು ಏನು ಅಂತ. ಅಲ್ಲದೇ ನಾನು ಏನು ಎಂಬುದಾಗಿ ನಿನಗೂ ಚೆನ್ನಾಗಿ ಗೊತ್ತು. ನಮ್ಮ ಸ್ನೇಹಕ್ಕೆ ಇದುವೆ ಮುಖ್ಯ” ಎಂದು ಬರೆದುಕೊಂಡಿದ್ದಾರೆ.

ಚಂದನ್ ಕೂಡ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ,”ನಿಜವಾದ ಸ್ನೇಹಿತರು ಎಂದಿಗೂ ದೂರವಾಗುವುದಿಲ್ಲ. ನೀನು ಎಷ್ಟೇ ದೂರದಲ್ಲಿದ್ದರೂ ನನ್ನ ಹೃದಯದಲ್ಲಿ ಸದಾ ಇರುತ್ತೀಯಾ. ನನ್ನ ಜೀವನದಲ್ಲೇ ನೀನು ನನ್ನ ಅತ್ಯುತ್ತಮ ಸ್ನೇಹಿತೆ ಎಂದು ಹೇಳಲು ನನಗೆ ತುಂಬಾ ಸಂತೋಷವಾಗುತ್ತದೆ. ಇಂದಿಗೆ ನಮ್ಮ ಸ್ನೇಹ ಒಂದು ವರ್ಷದ ಸಂಭ್ರಮ ಆಚರಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.

https://www.instagram.com/p/Bo6g_nuh9Mt/?taken-by=chandanshettyofficial

ಕೆಲ ದಿನಗಳ ಹಿಂದೆ ಚಂದನ್ ಶೆಟ್ಟಿಯವರು ಗೆಳತಿ ನಿವೇದಿತಾ ಗೌಡ ಅವರಿಗೆ “ನೀನೇ ನನ್ನ ಮೊದಲ ಗೆಳತಿ” ಎಂಬ ಹಾಡನ್ನು ಬರೆದಿದ್ದರು. ಅಲ್ಲದೇ ಹಾಡನ್ನು ಇಬ್ಬರೂ ಒಟ್ಟಿಗೆ ಹಾಡಿದ್ದರು. ಮೊದಲಿಗೆ ಚಂದನ್, “ನೀನೇ ನನ್ನ ಫಸ್ಟ್ ಗರ್ಲ್ ಫ್ರೆಂಡ್, ಈ ಫ್ರೆಂಡ್‍ಶಿಪಿಗಿಲ್ಲ ಡೆಡ್ ಎಂಡ್” ಎಂದು ಹಾಡಿನ ಸಾಲುಗಳನ್ನು ಪ್ರಾರಂಭಿಸಿದ್ದರು, ನಂತರ ನಿವೇದಿತಾ ಗೌಡ, “ನೀನೆ ನನ್ನ ಫಸ್ಟ್ ಬಾಯ್ ಫ್ರೆಂಡ್, ಈ ಫ್ರೆಂಡ್ ಶಿಪಿಗಿಲ್ಲ ಡೆಡ್ ಎಂಡ್” ಎಂದು ಹಾಡಿದ್ದರು.

https://www.instagram.com/p/BnQx5dRnUpr/?utm_source=ig_embed&utm_campaign=embed_loading_state_control

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *