ಪಾಕಿಸ್ತಾನಕ್ಕೆ 14 ಕೋಟಿ ರೂ.: ಭಾರತ ಮತ್ತು ಉಳಿದ ತಂಡಗಳಿಗೆ ಎಷ್ಟು ನಗದು ಬಹುಮಾನ?

ದುಬೈ: ಈ ಬಾರಿಯ ಐಸಿಸಿ ಚಾಂಪಿಯನ್ ಟ್ರೋಫಿ ವಿಜೇತ ಪಾಕಿಸ್ತಾನ ತಂಡಕ್ಕೆ 2.2 ದಶಲಕ್ಷ ಡಾಲರ್ ಹಣ(ಅಂದಾಜು 14 ಕೋಟಿ ರೂ.) ನಗದು ಬಹುಮಾನ ಸಿಕ್ಕಿದೆ.

ಈ ಟೂರ್ನಿಗೆ ಒಟ್ಟು 4.5 ದಶಲಕ್ಷ ಡಾಲರ್(ಅಂದಾಜು 28 ಕೋಟಿ ರೂ.) ನಗದು ಬಹುಮಾನ ನೀಡುವುದಾಗಿ ಐಸಿಸಿ ತಿಳಿಸಿದ್ದು, ದ್ವಿತೀಯ ಸ್ಥಾನಿ ಭಾರತಕ್ಕೆ 1.1 ದಶಲಕ್ಷ ಡಾಲರ್(ಅಂದಾಜು 7ಕೋಟಿ ರೂ.) ಬಹುಮಾನ ಸಿಕ್ಕಿದೆ.

ಸೆಮಿಫೈನಲ್‍ನಲ್ಲಿ ಸೋತ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶಕ್ಕೆ 4.50 ಲಕ್ಷ ಡಾಲರ್(ಅಂದಾಜು 2.8 ಕೋಟಿ ರೂ.) ಸಿಕ್ಕಿದರೆ, ಗುಂಪಿನಲ್ಲಿ ಮೂರನೇ ಸ್ಥಾನವನ್ನು ಪಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಗೆ 90 ಸಾವಿರ ಡಾಲರ್(ಅಂದಾಜು 57 ಲಕ್ಷ ರೂ.), ಗುಂಪಿನಲ್ಲಿ ಕೊನೆಯ ಸ್ಥಾನವನ್ನು ಪಡೆದ ಶ್ರೀಲಂಕಾ ಮತ್ತು ನ್ಯೂಜಿಲೆಂಡ್‍ಗೆ 60 ಸಾವಿರ ಡಾಲರ್( ಅಂದಾಜು 38 ಲಕ್ಷ ರೂ.) ಬಹುಮಾನ ಸಿಕ್ಕಿದೆ.

2013ರ ಟೂರ್ನಿಗೆ ಹೋಲಿಸಿದರೆ ಈ ಬಾರಿಯ ಐಸಿಸಿ ಬಹುಮಾನದ ಮೊತ್ತವನ್ನು ಹೆಚ್ಚಿಸಿದ್ದು, ಒಟ್ಟು 5 ಲಕ್ಷ ಡಾಲರ್(ಅಂದಾಜು 3 ಕೋಟಿ ರೂ.) ಹೆಚ್ಚಿನ ಅನುದಾನವನ್ನು ನೀಡಿತ್ತು. ಜೂನ್1 ರಿಂz ಆರಂಭಗೊಂಡ ಟೂರ್ನಿ ಜೂನ್ 18ರವರೆಗೆ ಇಂಗ್ಲಡಿನಲ್ಲಿ ನಡೆದಿತ್ತು.

2013ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ಚಾಂಪಿಯನ್ಸ್ ಟ್ರೋಪಿ ಪಂದ್ಯಾಟದಲ್ಲಿ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು 5 ರನ್ ಗಳಿಂದ ಸೋಲಿಸಿ ಭಾರತ ಚಾಂಪಿಯನ್ ಪಟ್ಟವನ್ನು ಆಲಂಕರಿಸಿತ್ತು.

 

Comments

Leave a Reply

Your email address will not be published. Required fields are marked *