ಕ್ವಾರಿಯಲ್ಲಿ ಗುಡ್ಡ ಕುಸಿತ- ಮೂವರ ವಿರುದ್ಧ ಕೇಸ್ ದಾಖಲು

ಚಾಮರಾಜನಗರ: ಗಣಿಗಾರಿಕೆ ನಡೆಯುತ್ತಿದ್ದ ಕ್ವಾರಿಯಲ್ಲಿ ಗುಡ್ಡ ಕುಸಿತ ಘಟನೆಗೆ ಸಂಬಂಧಿಸಿ ಗಣಿ, ಭೂ ವಿಜ್ಞಾನ ಇಲಾಖೆಯಿಂದ ಮೂವರ ವಿರುದ್ಧ ದೂರು ದಾಖಲಿಸಲಾಗಿದೆ.

ಗಣಿ ಗುತ್ತಿಗೆ ಪಡೆದಿದ್ದ ಮಹೇಂದ್ರಪ್ಪ, ಉಪಗುತ್ತಿಗೆ ಪಡೆದಿದ್ದ ಹಕೀಂ, ಗಣಿ ನೋಡಿಕೊಳ್ಳುತ್ತಿದ್ದ ನವೀದ್ ವಿರುದ್ಧ ಪ್ರಕರಣ ದಾಖಲಾಗಿದೆ. ಈಗಾಗಲೇ ಘಟನೆಗೆ ಸಂಬಂಧಿಸಿ ನವೀದ್‍ರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಮಹೇಂದ್ರಪ್ಪ, ಹಕೀಂಗಾಗಿ ಹುಡುಕಾಟ ನಡೆಸಲಾಗಿದೆ. ಸೆಕ್ಷನ್ 308 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಶುಕ್ರವಾರ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಗುಮ್ಮಕಲ್ಲು ಗುಡ್ಡದಲ್ಲಿ, ಗುಡ್ಡ ಕುಸಿತ ಉಂಟಾಗಿತ್ತು. ಜೆಸಿಬಿ, ಟಿಪ್ಪರ್ ವಾಹನ, ಟ್ರ್ಯಾಕ್ಟರ್‌ಗಳು ನಜ್ಜುಗುಜ್ಜುಗಿದ್ದವು. ಅಷ್ಟೇ ಅಲ್ಲದೇ ದೊಡ್ಡ ಬಂಡೆಗಳು ಉರುತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಅನೇಕರಿಗೆ ಗಂಭೀರ ಗಾಯಗಳಾಗಿವೆ.

ಗಾಯಾಳುಗಳನ್ನು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರಪ್ರದೇಶ ಮೂಲದ ಸರ್ಫರಾಜ್, ಮೀರಜ್ ಹಾಗು ಅಜ್ಮುಲ್ಲ ಅಲಿಯಾಸ್ ಬಬ್ಲು ಎಂಬ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕಾರ್ಮಿಕರೇ ಬಂಡೆಯಲ್ಲಿ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಗುಂಡ್ಲುಪೇಟೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಗುಡ್ಡ ಕುಸಿತ – ಇಬ್ಬರು ಗಣಿ ಕಾರ್ಮಿಕರು ಸಾವು?

ನಿತ್ಯವೂ ಶ್ರೀರಾಮ ಗುಡ್ಡದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಈ ಗುಡ್ಡದಲ್ಲಿ 30ಕ್ಕೂ ಹೆಚ್ಚು ಜನರು ಕಾರ್ಯನಿರ್ವಹಿಸುತ್ತಿದ್ದರು. ಕೇರಳ, ತಮಿಳುನಾಡು ಸೇರಿ ಇತರ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಭಾರತದ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ: ಎಂಇಎ

Comments

Leave a Reply

Your email address will not be published. Required fields are marked *