ಮತಗಳ್ಳತನದ ಬಗ್ಗೆ ಮಂಡ್ಯದ ಡಿಟೇಲ್ಸ್ ನೋಡಿ ಹೇಳ್ತೀನಿ: ಚಲುವರಾಯಸ್ವಾಮಿ

– ಮಂಡ್ಯದಲ್ಲಿ ಮೋದಿ ಮುಖ ನೋಡಿ ವೋಟ್ ಹಾಕಿದ್ದಾರೆ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನದ ಬಗ್ಗೆ ನನಗೆ ನಮ್ಮ ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಹೇಳಿದ್ದಾರೆ. ನಾನು ಮಂಡ್ಯದ (Mandya) ಡಿಟೇಲ್ಸ್ ನೋಡಿಲ್ಲ. ನೋಡಿದ ಮೇಲೆ ಹೇಳ್ತೀನಿ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ಹೇಳಿದ್ದಾರೆ.

ವಿಕಾಸಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಮತಗಳ್ಳತನದ ಬಗ್ಗೆ ಒಟ್ಟಾರೆಯಾಗಿ ಹೇಳಿದ್ದಾರೆ. ಜಿಲ್ಲಾವಾರು ಹೇಳಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತಗಳು ಬಿಜೆಪಿ ಅಭ್ಯರ್ಥಿ ಇಲ್ಲದ ಕಡೆ ಕಾಂಗ್ರೆಸ್, ಜೆಡಿಎಸ್‌ಗೆ ಹೋಗಬಹುದು. ಪಾರ್ಲಿಮೆಂಟ್ ಚುನಾವಣೆಯಲ್ಲಿ ಹಾಗೆ ಆಗಲ್ಲ. ಸಂಪೂರ್ಣವಾಗಿ ಬಿಜೆಪಿ ಮತದಾರರು ಪಾರ್ಲಿಮೆಂಟ್ ಚುನಾವಣೆಯಲ್ಲಿ ಮೋದಿ ಮುಖ ನೋಡಿ ಮತ ಹಾಕ್ತಾರೆ. ನಮ್ಮ ಮಂಡ್ಯದಲ್ಲಿ ಮತ ಹಾಕಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಮಹದಾಯಿಗೆ ಕೇಂದ್ರ ಅನುಮತಿ ನೀಡಲ್ಲ ಎಂದಿದ್ದು ಗೋವಾ ಸಿಎಂ ವೈಯಕ್ತಿಕ ಹೇಳಿಕೆ – ಜೋಶಿ ಸ್ಪಷ್ಟನೆ

ಕುಮಾರಸ್ವಾಮಿ (H D Kumaraswamy) ಇದನ್ನು ಒಪ್ತಾರೋ ಇಲ್ವೋ? ಚುನಾವಣೆ ಆಗಿದೆ, ಮಂತ್ರಿ ಆಗಿದ್ದಾರೆ. ನಮ್ಮ ನಾಯಕರು ತನಿಖೆ ನಡೆಸಿ ಹೇಳಿದ ಮೇಲೆ ನಮ್ದು ಅದೇ. ನಮಗೆ ಅನುಮಾನ ಇದೆ ಎಂದು ಹೇಳಿದ್ದಾರೆ.