ಕುಮಾರಸ್ವಾಮಿ-ಅಶೋಕ್‌ರಿಂದ ಮಂಡ್ಯದಲ್ಲಿ ಬೆಂಕಿ ಹಚ್ಚಲು ಸಾಧ್ಯವಿಲ್ಲ: ಚೆಲುವರಾಯಸ್ವಾಮಿ

– ಸುಮಲತಾ ಬಿಜೆಪಿಯಿಂದ ಟಿಕೆಟ್‌ ಪಡೆಯೋಕೆ ಪರವಾಗಿ ಮಾತಾಡ್ತಿದ್ದಾರೆ ಎಂದ ಸಚಿವ

ಬೆಂಗಳೂರು: ಬಿಜೆಪಿ-ಜೆಡಿಎಸ್‌ನವರು ಮಂಡ್ಯಕ್ಕೆ ಬೆಂಕಿ ಹಚ್ಚೋ ಪ್ರಯತ್ನ ಮಾಡ್ತಿದ್ದಾರೆ. ಆದರೆ ಮಂಡ್ಯದಲ್ಲಿ ಬೆಂಕಿ ಹಚ್ಚೋಕೆ ಸಾಧ್ಯವಿಲ್ಲ ಅಂತ ಸಚಿವ ಚೆಲುವರಾಯಸ್ವಾಮಿ (Chaluvaraya Swamy) ತಿರುಗೇಟು ನೀಡಿದ್ದಾರೆ.

ಕೆರಗೋಡು ಹನುಮಧ್ವಜ ವಿವಾದ (Hanuman Flag Controversy) ಘಟನೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವು ಹಿಂದೂ ವಿರೋಧಿ ಅಲ್ಲ, ಯಾವುದೇ ಧ್ವಜದ ವಿರೋಧಿಗಳೂ ಅಲ್ಲ. ಪಂಚಾಯತಿಯಲ್ಲಿ ರಾಷ್ಟ್ರ ಧ್ವಜ, ನಾಡ ಧ್ವಜಕ್ಕೆ ಅನುಮತಿ ಕೊಟ್ಟಿದ್ದರು, ಆದ್ರೆ ಬೇರೆ ಧ್ವಜ ಹಾರಿಸಿದ್ದಾರೆ. ಪಂಚಾಯತಿಯಲ್ಲಿ ನಿರ್ಣಯವನ್ನ ವಜಾ ಮಾಡಿದ್ದಾರೆ. ಜ.26ರಂದು ರಾಷ್ಟ್ರಧ್ವಜ ಹಾರಿಸಿ ಸಂಜೆ ಇಳಿಸಿದ್ದಾರೆ. ಮಂಡ್ಯದಲ್ಲಿ ಅನೇಕ ಜನರು ಶಾಂತಿ ಹಾಳುಮಾಡೋಕೆ ಬರೋದು ಬೇಡ, ಮಂಡ್ಯದ ನೆಮ್ಮದಿ ಹಾಳು ಮಾಡಬೇಡಿ ಅಂತ ಕೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಗ್ರಾಮದ ಮುಖಂಡರೊಂದಿಗೆ ಮಾತುಕತೆ ನಡೆಸಲು ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್ ಅವರು ಜನರನ್ನ ಪ್ರವೋಕ್ ಮಾಡ್ತಿದ್ದಾರೆ. ಕುಮಾರಸ್ವಾಮಿ (HD Kumaraswamy) ಮತ್ತು ಅಶೋಕ್ (R Ashok) ತೀಟೆ ಮಾಡೋಕೆ ಹೋಗ್ತಿದ್ದಾರೆ. ಮಂಡ್ಯದಲ್ಲಿ ಇದು ನಡೆಯಲ್ಲ. ಬಂದ್ ಬೇಡ ಅಂತ ಜನರೇ ಮನವಿ ಮಾಡಿದ್ದಾರೆ. ಮಂಡ್ಯಕ್ಕೆ ಬೆಂಕಿ ಹಚ್ಚೋಕೆ ಯಾರಿಂದಲೂ ಸಾಧ್ಯವಿಲ್ಲ ಅಂತ ಕುಮಾರಸ್ವಾಮಿ, ಅಶೋಕ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೆರಗೋಡು ಹನುಮ ಧ್ವಜ ತೆರವಿಗೆ ಆಕ್ರೋಶ- ಮಂಡ್ಯದಲ್ಲಿ ಕಲ್ಲು ತೂರಾಟ, ಲಾಠಿಚಾರ್ಜ್

ತಾಲೂಕು ಪಂಚಾಯ್ತಿ ಇಒ, ದಾಖಲಾತಿ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ. ಗೊಂದಲಗಳು ಆದಾಗ EO ದಾಖಲಾತಿ ತೆಗೆದುಕೊಂಡು ಹೋಗಿದ್ದಾರೆ. ಅವರು ತಮ್ಮ ಕಚೇರಿಗೇ ದಾಖಲಾತಿ ಪುಸ್ತಕ ತೆಗೆದುಕೊಂಡು ಹೋಗಿದ್ದಾರೆ, ಮನೆಗೆ ತೆಗೆದುಕೊಂಡು ಹೋಗಿಲ್ಲ ಎಂದು ಸಿಟ್ಟಾಗಿ ಹಾರಿಕೆ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಜಾತಿ, ಧರ್ಮಗಳ ನಡುವೆ ಕಿತ್ತಾಟ ನಡೆಯುವಂತಹ ವಾತಾವರಣ ಸೃಷ್ಟಿಸಿರೋದು ಬೇಸರ: ಸುಮಲತಾ

ಕೆರಗೋಡು ಘಟನೆ ಒಬ್ಬ ವ್ಯಕ್ತಿಯ ಪ್ರತಿಷ್ಠೆಗೆ ಆಗ್ತಿದೆ ಎಂಬ ಸಂಸದೆ ಸುಮಲತಾರ ಹೇಳಿಕೆ ವಿಚಾರಕ್ಕೆ ‌ಪ್ರತಿಕ್ರಿಯಿಸಿ, ಸುಮಲತಾ ಅವರು ಮಂಡ್ಯ ಜನರಿಗೆ ಸಲಹೆ ಮಾಡೋದು ಬೇಡ. ಬಿಜೆಪಿಯಿಂದ ಟಿಕೆಟ್ ಪಡೆಯೋಕೆ ಬಿಜೆಪಿ ಪರವಾಗಿ ಮಾತಾಡ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕೆರಗೋಡಿನಲ್ಲಿ ತಾರಕಕ್ಕೇರಿದ ಹನುಮ ಧ್ವಜ ಸಂಘರ್ಷ- ಫೆ.9ಕ್ಕೆ ಮಂಡ್ಯ ಬಂದ್‍ಗೆ ಕರೆ

ದೇವೇಗೌಡರಿಂದ ಬೆಳೆದು ದೇವೇಗೌಡರ ವಿರುದ್ಧ ಮಾತಾಡೋದು ಸರಿಯಲ್ಲ ಎಂಬ ಪುಟ್ಟರಾಜು ಹೇಳಿಕೆಗೆ ಉತ್ತರಿಸಿದ ಸಚಿವರು, ನನ್ನ ಇತಿಹಾಸವನ್ನ ಅವನು ಓದೋಕೆ ಹೇಳಿ ಮೊದಲು. ನಾನು ಹೇಗೆ ಬಂದೆ ಅಂತ ಅವನು ತಿಳಿದುಕೊಳ್ಳಲಿ. ಮಂಡ್ಯಕ್ಕೆ ದೇವೇಗೌಡರ ಕೊಡುಗೆ ಏನು? ದೇವೇಗೌಡರಿಗೆ ಮಂಡ್ಯದ ಕೊಡುಗೆ ಏನು? ಅಂತ ತಿಳಿದುಕೊಳ್ಳಲಿ ಎಂದು ಪುಟ್ಟರಾಜು ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.