ಮನೆಗೆ, ಪಕ್ಷಕ್ಕೆ ಮಾತ್ರ ಸೀಮಿತವಲ್ಲ, ಆರೂವರೆ ಕೋಟಿ ಕನ್ನಡಿಗರಿಗೆ ಸಿಎಂ: ಚೆಲುವರಾಯಸ್ವಾಮಿ

ಬೆಂಗಳೂರು: ಕುಮಾರಸ್ವಾಮಿ ಅವರ ಮನೆಗೆ ಅಥವಾ ಪಕ್ಷಕ್ಕೆ ಮಾತ್ರ ಸೀಮಿತವಲ್ಲ. ಆರೂವರೆ ಕೋಟಿ ಕನ್ನಡಿಗರಿಗೆ ಸಿಎಂ ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಶಾಸಕ ಚಲುವರಾಯಸ್ವಾಮಿ, ಕುಮಾರಸ್ವಾಮಿ ಮೇಲಿನ ಮುನಿಸು ಇದೆ ಅನ್ನೋದನ್ನ ಪರೋಕ್ಷವಾಗಿ ನುಡಿದಿದ್ದಾರೆ. ಮೈತ್ರಿ ಬೆಂಗಳೂರಿಗೆ ಮಾತ್ರ ಸಿಮೀತ. ಮಂಡ್ಯಕ್ಕೆ ಅಲ್ಲ, 78 ಸ್ಥಾನ ಪಡೆದು ಸಿಎಂ ಸ್ಥಾನ ಬಿಟ್ಟುಕೊಟ್ಟಿಲವೇ..? ಮಾತನಾಡಿರೆ ಬಹಳ ಇದೆ. ಮಂಡ್ಯದ ಜೆಡಿಎಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ಯಾರೇ ಮುಖ್ಯಮಂತ್ರಿಯಾದರೂ ಅವರು ಕರ್ನಾಟಕ ಮುಖ್ಯಮಂತ್ರಿಯಾಗುತ್ತಾರೆ ಹೊರತು, ಅವರ ಮನೆಗೆ ಅಥವಾ ಅವರ ಪಕ್ಷಕ್ಕೆ ಸೀಮಿತ ಆಗಲ್ಲ. ಆದರೆ ನಮ್ಮ ಅವರ ಮಧ್ಯೆ ಇದ್ದಂತಹ ಸ್ನೇಹ ಇವತ್ತು ಇಲ್ಲ. ಆದರೆ ನನಗೂ ಅವರಿಗೂ ಯಾವುದೇ ವೈಯಕ್ತಿಕ ಸಂಬಂಧ ಇಲ್ಲ. ಮುಖ್ಯಮಂತ್ರಿ ಆಗಿದ್ದಾರೆ ಆದ್ದರಿಂದ ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಒಂದು ಪಕ್ಷದ ಸಿಎಂ ಅಲ್ಲ ರಾಜ್ಯದ ಆರು ಕೋಟಿ ಕನ್ನಡಿಗರಿಗೆ ಸಿಎಂ. ಜಮೀರ್, ಕುಮಾರಸ್ವಾಮಿ ಜೊತೆ ಮಾತನಾಡಿದ ಮಾತ್ರಕ್ಕೆ ಹಳೆಯದೆಲ್ಲ ಮರೆತಿದ್ದೇವೆ ಎಂದಲ್ಲ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಜೊತೆಗಿನ ಮುನಿಸು ಹಾಗೆ ಇದೆ ಅನ್ನೋದನ್ನ ಹೇಳಿದ್ದಾರೆ.

https://www.youtube.com/watch?v=ChN81eT3xzE

Comments

Leave a Reply

Your email address will not be published. Required fields are marked *