ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶಬ್ ಮತ್ತೊಂದು ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ನಟಸಲಿದ್ದಾರೆ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ದರ್ಶನ್ ಅವರ ಮತ್ತೊಂದು ಸಿನಿಮಾಗೆ ಅಡ್ವಾನ್ಸ್ ಮಾಡಿದ್ದು, ಈ ಚಿತ್ರವನ್ನು ಸಹ ನಿರ್ದೇಶಕ ತರುಣ್ ಸುಧೀರ್ ನಿರ್ದೇಶನ ಮಾಡಲಿದ್ದಾರೆ. ದರ್ಶನ್ ಅವರ ಜೊತೆ ಐತಿಹಾಸಿಕ ಸಿನಿಮಾವನ್ನು ಮಾಡಬೇಕೆಂದು ಪ್ಲ್ಯಾನ್ ಮಾಡಿದ್ದೇನೆ. ದರ್ಶನ್ ಅವರು ಹೇಗೆ ನಿರ್ಧರಿಸುತ್ತಾರೋ, ಹಾಗೆ ನಡೆಯುತ್ತೆ ಎಂದು ನಿರ್ಮಾಪಕ ಉಮಾಪತಿ ಅವರು ತಿಳಿಸಿದ್ದಾರೆ.

ದರ್ಶನ್ ಅವರು ಎರಡು ಕಮರ್ಷಿಯಲ್ ಸಿನಿಮಾ ಮಾಡಬೇಕೆಂದು ಪ್ಲ್ಯಾನ್ ಮಾಡುತ್ತಿದ್ದಾರೆ. ಎರಡು ಕಮರ್ಷಿಯಲ್ ಸಿನಿಮಾ ಮಾಡಿ ಆದ್ಮೇಲೆ ಐತಿಹಾಸಿಕ ಅಂದರೆ ಸ್ವಾತಂತ್ರ್ಯ ಹೋರಾಟಗಾರನ ಸಿನಿಮಾವನ್ನು ಶುರು ಮಾಡಲಿದ್ದೇವೆ. ಸದ್ಯ ಆ ಕತೆ ಈಗ ಬೇರೆಯವರ ಒಡೆತನದಲ್ಲಿದೆ. ನಾವು 6 ತಿಂಗಳವರೆಗೂ ಅವರ ಬಳಿ ಮನವಿ ಮಾಡಿಕೊಂಡಿದ್ದೇವೆ. ಈಗ ಅವರು ಆ ಕತೆಯನ್ನು ಕೊಡಲು ಒಂದು ಮಟ್ಟಕ್ಕೆ ಒಪ್ಪಿಕೊಂಡಿದ್ದಾರೆ. ಆ ಕತೆ ಬಂದರೆ ಸೆಟ್ ಹಾಕದೇ ಲೈವ್ ಲೊಕೇಶನ್‍ಗೆ ಹೋಗಿ ಚಿತ್ರೀಕರಣ ಮಾಡಲಿದ್ದೇವೆ ಎಂದರು.

ಸುರಪುರ ಶಾಸಕ ರಾಜುಗೌಡ ಅವರು ಆ ಚಿತ್ರದ ಕತೆಯನ್ನು ಕೊಡಿಸುತ್ತಿದ್ದಾರೆ. ದರ್ಶನ್ ಅವರು ಕನ್ನಡದ್ದು ಏನೇ ಇದ್ದರೂ ತಲೆ ಕೆಡಿಸಿಕೊಳ್ಳುತ್ತಾರೆ. ಬೇರೆ ಭಾಷೆ ಇದ್ದರೆ ಅಷ್ಟು ತಲೆಕೆಡಿಸಿಕೊಳ್ಳುವುದಿಲ್ಲ, ಅದನ್ನು ಪಕ್ಕಕ್ಕೆ ತಳ್ಳುತ್ತಾರೆ. ಒಟ್ಟಿನಲ್ಲಿ ಇದೊಂದು ಸ್ವಾತಂತ್ರ್ಯ ಹೋರಾಟಗಾರನ ಚಿತ್ರ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

Leave a Reply