ಯಜಮಾನ್ರು ರೆಸ್ಟ್ ತಗೋತಿದಾರೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ಬಿಡುವಿಲ್ಲದೆ ಚಿತ್ರೀಕರಣ ನಡೆಸುತ್ತಿದೆ. ಮೈಸೂರಿನಲ್ಲಿ ಕಲಾ ನಿರ್ದೇಶಕ ಶಶಿಧರ ಅಡಪ ಅವರು ನಿರ್ಮಿಸುತ್ತಿರುವ ವಿಶೇಷ ಸೆಟ್ ನಲ್ಲಿ ಮನಕಲಕುವ ದೃಶ್ಯಗಳನ್ನು ನಿರ್ದೇಶಕ ಪೊನ್ನು ಕುಮಾರ್ ಚಿತ್ರೀಕರಿಸಿಕೊಂಡಿದ್ದಾರೆ.

ಮಾರುಕಟ್ಟೆ ಸೆಟ್ ನಿರ್ಮಿಸಿ ಅಲ್ಲಿ ವಾರಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು. ಇದೇ ಜಾಗದಲ್ಲಿ ಮಾರುಕಟ್ಟೆ ಸೆಟ್ ತೆಗೆದು ಬೇರೆ ಬಗೆಯ ಸೆಟ್ ನಿರ್ಮಿಸಬೇಕಿರುವುದರಿಂದ ಕಲಾವಿದರಿಗೆ ಒಂಚೂರು ರಿಲ್ಯಾಕ್ಸ್ ಪಡೆಯಲು ಅವಕಾಶ ಸಿಕ್ಕಂತಾಗಿದೆ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಬೆಂಗಳೂರಿನ ಕಡೆ ಆಗಮಿಸಿದ್ದಾರಂತೆ. ಮೈಸೂರಿನಲ್ಲಿ ಕೆಂಡದಂಥಾ ಉರಿಬಿಸಿಲಿನಲ್ಲೂ ಗ್ಯಾಪು ತೆಗೆದುಕೊಳ್ಳದೆ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ದರ್ಶನ್ ಅವರಿಗೆ ಬಲು ಆಯಾಸವಾಗಿತ್ತಂತೆ. ಸಿಕ್ಕ ಸಣ್ಣ ಗ್ಯಾಪ್ ಕೂಡಾ ದರ್ಶನ್ ಅವರ ಪಾಲಿಗೆ ನಿಟ್ಟುಸಿರು ಬಿಡುವಂತಾಗಿದ್ದು ಬೆಂಗಳೂರಿಗೆ ಬಂದು ತಂಪು ತಂಪು ಕೂಲ್ ಕೂಲ್ ಎನ್ನುತ್ತಿದ್ದಾರಂತೆ. ಇದನ್ನೂ ಓದಿ: ಸಿನಿಮಾ ಸೆಟ್ ನ ಮೊದಲ ದಿನವೇ ಯಜಮಾನನಾಗಿ ಬಂದ ಚಾಲೆಂಜಿಂಗ್ ಸ್ಟಾರ್!

ಸಾಮಾನ್ಯವಾಗಿ ಒಂದು ಸಿನಿಮಾ ಆದ ನಂತರ ಸಾಕಷ್ಟು ಗ್ಯಾಪ್ ತೆಗೆದುಕೊಂಡು ಮತ್ತೊಂದು ಸಿನಿಮಾವನ್ನು ಒಪ್ಪಿಕೊಳ್ಳೋದು ದರ್ಶನ್ ಅವರ ರೀತಿಯಾಗಿತ್ತು. ಆದರೆ ಚಕ್ರವರ್ತಿ ಸಿನಿಮಾದ ನಂತರ ವರ್ಷಕ್ಕೆರಡು ಸಿನಿಮಾದಲ್ಲಿ ನಟಿಸಬೇಕು ಅಂತಾ ತೀರ್ಮಾನಿಸಿರೋದರಿಂದ ಒಂದರ ಹಿಂದೆ ಒಂದು ಸಿನಿಮಾ ಬಂದರೂ ಸಮಯ ತೆಗೆದುಕೊಳ್ಳದೇ ಹೊಸಾ ಸಿನಿಮಾಗಳನ್ನು ಒಪ್ಪಿಕೊಂಡು ಶೂಟಿಂಗ್ ಗೆ ಹಾಜರಾಗುತ್ತಿದ್ದಾರೆ. ಚಕ್ರವರ್ತಿ ರಿಲೀಸಾದ ಬೆನ್ನಿಗೇ ತಾರಕ್ ಮುಗಿಸಿದ್ದ ದರ್ಶನ್ ನಂತರ ಕುರುಕ್ಷೇತ್ರದ ಚಿತ್ರೀಕರಣಕ್ಕೆ ಹೊರಟು ನಿಂತಿದ್ದರು. ಈಗ ಕುರುಕ್ಷೇತ್ರದಂಥಾ ಮೆಗಾ ಪ್ರಾಜೆಕ್ಟ್ ಮುಗಿಸಿ ಒಂಚೂರೂ ಸುಧಾರಿಸಿಕೊಳ್ಳದೇ ಇಮೀಡಿಯೆಟ್ಟಾಗಿ ಯಜಮಾನ ಸೆಟ್ ಗೆ ಹಾಜರಾದರು. ಇದೇ ಸ್ಪೀಡಿನಲ್ಲಿಯೇ ಮುಂದುವರೆದರೆ ದರ್ಶನ್ ಅವರ ಅಭಿಮಾನಿಗಳಿಗೆ ವರ್ಷಕ್ಕೆರಡು ಸಿನಿಮಾ ಕೊಡುಗೆಯಾಗೋದರಲ್ಲಿ ಯಾವ ಡೌಟೂ ಇಲ್ಲ. ಇದನ್ನೂ ಓದಿ: Exclusive: ನೋಡಿದಿರಾ ‘ಯಜಮಾನ’ನ ವೈಭೋಗವ!

Comments

Leave a Reply

Your email address will not be published. Required fields are marked *