ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಈಗ ಬಾಟಲ್ ಕ್ಯಾಪ್ ಚಾಲೆಂಜ್ ಸದ್ದು ಮಾಡುತ್ತಿದೆ. ಹಲವು ಕಲಾವಿದರು ಈ ಚಾಲೆಂಜ್ ಸ್ವೀಕರಿಸುತ್ತಿದ್ದು, ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪುತ್ರ ವಿನೀಶ್ ಕೂಡ ಈ ಚಾಲೆಂಜ್‍ನಲ್ಲಿ ಗೆದಿದ್ದಾರೆ.
ಹೌದು. ಇತ್ತೀಚೆಗೆ ದರ್ಶನ್ ಅವರ ಪುತ್ರ ವಿನೀಶ್ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ್ದಾರೆ. ಈ ಚಾಲೆಂಜ್ ಮಾಡಿ ಅವರು ಗೆದ್ದಿದ್ದಾರೆ. ವಿನೀಶ್ ಬಾಟಲ್ ಚಾಲೆಂಜ್ ಮಾಡಿದ ವಿಡಿಯೋವನ್ನು ಅವರ ತಾಯಿ ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

ವಿಜಯಲಕ್ಷ್ಮಿ ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋ ಹಾಕಿ, ಬಾಟಲ್ ಕ್ಯಾಪ್ ಚಾಲೆಂಜ್, ವಿನೀಶ್ ಎಂದು ಹ್ಯಾಶ್‍ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋಗೆ ಇದುವರೆಗೂ 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 479 ರೀ-ಟೀಟ್ ಪಡೆದುಕೊಂಡಿದೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮೊದಲಿಗೆ ಈ ಬಾಟಲ್ ಕ್ಯಾಪ್ ಚಾಲೆಂಜ್ ಪ್ರಾರಂಭಿಸಿದ್ದರು. ಇದೀಗ ಸ್ಯಾಂಡಲ್‍ವುಡ್‍ಗೂ ಈ ಚಾಲೆಂಜ್ ಲಗ್ಗೆ ಇಟ್ಟಿದ್ದು, ನಟ ಅರ್ಜುನ್ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ನಟಿ ರಚಿತಾ ರಾಮ್ ಈ ಚಾಲೆಂಜ್ ಸ್ವೀಕರಿಸಿ ಗೆದ್ದಿದ್ದರು.
https://twitter.com/vijayaananth2/status/1147752015558148096
ಏನಿದು ಚಾಲೆಂಜ್?
ಒಂದು ಟೇಬಲ್ ಮೇಲೆ ಒಂದು ಬಾಟಲಿ ಇಡಬೇಕು. ಅದರ ಮುಚ್ಚಳವನ್ನು ಬಾಟಲ್ ಮೇಲೆ ಸಡಿಲವಾಗಿ ತಿರುಗಿ ಇಡಬೇಕು. ನಂತರ ಚಾಲೆಂಜ್ ಸ್ವೀಕರಿಸಿದವರು ಸ್ವಲ್ಪ ದೂರದಲ್ಲಿ ನಿಂತು ಒಂದು ಸುತ್ತು ತಿರುಗಿ ಕಾಲಿನಿಂದ ಬಾಟಲಿ ಕ್ಯಾಪನ್ನು ಒದಿಯಬೇಕು. ಈ ಪ್ರಕ್ರಿಯೆಯಲ್ಲಿ ಬಾಟಲಿ ಕೆಳಗೆ ಬೀಳಬಾರದು. ಹೀಗೆ ಬಾಟಲ್ ಬೀಳದಂತೆ ಕ್ಯಾಪ್ ಮಾತ್ರ ಕೆಳಗೆ ಬೀಳಿಸಿದರೆ ಈ ಚಾಲೆಂಜ್ ಗೆದ್ದಂತೆ.
Wanted to do a #bottlecapchallenge Yaaasssss I did it..!!!😎✌🏻 pic.twitter.com/45mPHSDu4D
— Rachita Ram (@RachitaRamDQ) July 5, 2019

Leave a Reply