ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಗೆಳೆಯ ಯಶಸ್ ಸೂರ್ಯ ಅವರ ಚಿತ್ರಕ್ಕೆ ಕಂಠದಾನ ನೀಡಿದ್ದಾರೆ.
ತಮ್ಮದೇ ಗೆಳೆಯರ ಬಳಗದಲ್ಲಿದ್ದ ಯಶಸ್ ಸೂರ್ಯ ಅವರು ‘ರಾಮಧಾನ್ಯ’ ಚಿತ್ರದಲ್ಲಿ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಳೆಯನ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ಧ್ವನಿ ನೀಡುವ ಮೂಲಕ ಯಶಸ್ ಸೂರ್ಯ ಅವರಿಗೆ ಸಹಾಯ ಮಾಡಿದ್ದಾರೆ.
ಯಶಸ್ ಸೂರ್ಯ ನಟಿಸುತ್ತಿರುವ ರಾಮಧಾನ್ಯ ಚಿತ್ರದ ಮೊದಲೊಂದು ನಿಮಿಷ ಹಾಗೂ ಕೊನೆಯ ಒಂದು ನಿಮಿಷಕ್ಕೆ ದರ್ಶನ್ ಧ್ವನಿ ನೀಡಿದ್ದಾರೆ. ಈ ಚಿತ್ರದ ಆಶಯವನ್ನು ತಿಳಿಸಲು ದರ್ಶನ್ ತನ್ನ ಗೆಳೆಯನಿಗೆ ಸಹಾಯ ಮಾಡಿದ್ದಾರೆ.

ದರ್ಶನ್ ಮೊದಲು ರಾಮಧಾನ್ಯ ಸಿನಿಮಾದ ಟೀಸರ್ ನೋಡಿ ಅದನ್ನು ಇಷ್ಟಪಟ್ಟು ತಮ್ಮ ಧ್ವನಿ ನೀಡಿದ್ದಾರೆ. ಇನ್ನು ಚಿತ್ರದ ಆಡಿಯೋ ಮೇ 9ಕ್ಕೆ ಬಿಡುಗಡೆಯಾಗಲಿದ್ದು, ದರ್ಶನ್ ಅವರೇ ಆಡಿಯೋ ಬಿಡುಗಡೆ ಮಾಡಲಿದ್ದಾರೆ.
ರಾಮಧಾನ್ಯ ಚಿತ್ರದಲ್ಲಿ ನಟ ಯಶಸ್ ಸೂರ್ಯ ಸಾಫ್ಟ್‍ವೇರ್ ಇಂಜಿನಿಯರ್, ರಾಮ, ಕನಕದಾಸ ಸೇರಿದಂತೆ ನಾಲ್ಕು ವಿಭಿನ್ನ ಶೇಡ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಈ ಚಿತ್ರವನ್ನು ನಾಗೇಶ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ.

Leave a Reply