ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಗಳೂರಿನ ದೇವಾಲಯವೊಂದಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ.
ನಗರದ ಚಾಮರಾಜಪೇಟೆಯಲ್ಲಿರುವ ಬಂಡಿ ಮಹಾ ಕಾಳಿಯಮ್ಮ ದೇವಾಲಯಕ್ಕೆ ಸ್ಯಾಂಡಲ್‍ವುಡ್ ತಾರೆಯರು ಆಗಾಗ ಭೇಟಿ ನೀಡುತ್ತಿರುತ್ತಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ದರ್ಶನ್ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನವನ್ನು ಪಡೆದಿದ್ದಾರೆ. ಇದೇ ವೇಳೆ ದೇವಾಲಯಕ್ಕಾಗಿ ಚೀನಿ ಜಾತಿಯ ಎರಡು ನಾಯಿ ಮರಿಗಳನ್ನು ಆ ದೇವಾಲಯದ ಅರ್ಚಕರಿಗೆ ನೀಡಿದ್ದಾರೆ.

ಪ್ರಾಣಿ ಪಕ್ಷಿಗಳನ್ನು ತುಂಬಾನೇ ಇಷ್ಟಪಡುವ ದರ್ಶನ್ ಮೈಸೂರಿನ ತನ್ನ ಫಾರ್ಮ್ ಹೌಸ್‍ನಲ್ಲಿ ಸಾಕಷ್ಟು ಪ್ರಾಣಿಗಳನ್ನು ಸಾಕಿದ್ದಾರೆ. ಪ್ರಾಣಿಗಳ ಮೇಲಿರುವ ಪ್ರೀತಿಯನ್ನು ಕಂಡು ದರ್ಶನ್ ಮೈಸೂರು ಮೃಗಾಲಯದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದರು.
ದರ್ಶನ್ ತಮ್ಮದೇ ಫಾರ್ಮ್‍ನಲ್ಲಿ ಹಲವಾರು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅಲ್ಲದೇ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹುಲಿ ಮತ್ತು ಆನೆ ಪ್ರಾಣಿಗಳನ್ನು ದತ್ತು ಪಡೆದು ಆ ಪ್ರಾಣಿಗಳ ಪಾಲನೆಗೆ ಸಹಾಯ ಮಾಡುತ್ತಿದ್ದಾರೆ.



Leave a Reply