ಕಾಂಗ್ರೆಸ್‌ನವ್ರು ಗ್ಯಾರಂಟಿ ಹಣ ನೀಡದೇ ಜನರನ್ನು ಭಿಕ್ಷಕರು ಅನ್ಕೊಂಡಿದ್ದಾರೆ – ಛಲವಾದಿ

ಬೀದರ್: ಕಾಂಗ್ರೆಸ್‌ನವರು (Congress) ಗ್ಯಾರಂಟಿ ಹಣ ನೀಡದೇ ಜನರನ್ನು ಭಿಕ್ಷಕರು ಅಂದುಕೊಂಡಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.

ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರಂತ (CM Siddaramaiah) ಭ್ರಷ್ಟ ರಾಜಕಾರಣಿ ಮತ್ತೊಬ್ಬರಿಲ್ಲ. ಇಷ್ಟೊಂದು ನಾಚಿಕೆಗೆಟ್ಟ ವ್ಯಕ್ತಿ ನಾನು ಎಂದು ತೋರಿಸಿದ್ದು ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ ಇಂದು ಪಾಪರ್ ಸರ್ಕಾರ ಆಗಿದೆ. ಸರ್ಕಾರ ನಡೆಸಲು ಮೂರು ಕಾಸಿಲ್ಲ. ಬಂದಿರುವ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಗೊತ್ತಿಲ್ಲ. ಇಡೀ ದೇಶದಲ್ಲೇ ಕಾಂಗ್ರೆಸ್ ನಡೆಸಲು ಹಣವಿಲ್ಲ, ಆದ್ರೆ ಹೈಕಮಾಂಡ್ ರಾಜ್ಯ ಕಾಂಗ್ರೆಸ್‌ನ್ನು ಎಟಿಎಂ ಮಾಡಿಕೊಂಡಿದೆ ಎಂದರು.ಇದನ್ನೂ ಓದಿ: ಸೈಬರ್‌ ಪೊಲೀಸರ ಸೋಗಿನಲ್ಲಿ ಬ್ಲ್ಯಾಕ್‌ಮೇಲ್‌ – ಖರ್ತನಾಕ್‌ ಲೇಡಿ ಸೇರಿ 7 ಲಕ್ಷ ಸುಲಿಗೆ ಮಾಡಿದ್ದ ಐವರು ಅರೆಸ್ಟ್‌

ಯಾರಿಗಾದ್ರು ಗ್ಯಾರಂಟಿ ಸಿಗುತ್ತಿದೆಯಾ, ಮೂರು ನಾಲ್ಕು ತಿಂಗಳಾದರೂ ಗ್ಯಾರಂಟಿ ಹಣ ಬರುತ್ತಿಲ್ಲ, ಕೇಳಿದರೆ ನಾವು ತಿಂಗಳಿಗೆ ಸಂಬಳ ಕೊಡುತ್ತಿಲ್ಲಾ ಎಂದು ಹೇಳುತ್ತಾರೆ. ಜನರಿಗೆ ಮೋಸ ಮಾಡುವ ಜೊತೆಗೆ ಅಪಮಾನ ಕೂಡ ಮಾಡುತ್ತಿದ್ದೀರಿ, ಕಾಂಗ್ರೆಸ್‌ನವರು ಗ್ಯಾರಂಟಿ ಹಣ ನೀಡದೆ ಜನರನ್ನು ಭಿಕ್ಷಕರು ಎಂದುಕೊಂಡಿದ್ದಾರೆ ಎಂದು ಹೇಳಿದರು.

ಇನ್ನೂ ಬಿಜೆಪಿಯಲ್ಲಿ ಭಿನ್ನಮತಕ್ಕೆ ವಿಜಯೇಂದ್ರಗೆ ಹೈಕಮಾಂಡ್‌ನಿಂದ ಬುಲಾವ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಅಸಮಾಧಾನ ಎನ್ನುವ ಪ್ರಶ್ನೆ ಇಲ್ಲ. ಯಾರಿಗೆ ಬೇಕಾದರೂ ನಮ್ಮ ಹೈಕಮಾಂಡ್ ಬುಲಾವ್ ಕೊಡಬಹುದು. ಹೇಳೋದು, ಕೇಳೋದು, ವಿಚಾರ ವಿನಿಯಮ ಮಾಡೋದು ಇರುತ್ತದೆ. ಅದಕ್ಕಾಗಿ ವಿಜಯೇಂದ್ರರನ್ನು ಕರೆದಿದ್ದಾರೆ ಅಷ್ಟೇ. ಪಕ್ಷ ಹೇಗೆ ನಡೆಸಬೇಕು ಎಂದು ಸಲಹೆ, ಸೂಚನೆಗಾಗಿ ಕರೆದಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ಮುಂದೆ ರಾಮನಗರದಲ್ಲೇ ಚುನಾವಣೆಗೆ ನಿಲ್ಲುತ್ತೇನೆ – ನಿಖಿಲ್‌ ಕುಮಾರಸ್ವಾಮಿ