ಭಯೋತ್ಪಾದನೆ, ಕತ್ತೆ ರಫ್ತು ಇವೆರಡೇ ಪಾಕ್‍ಗೆ ಗೊತ್ತಿರೋದು: ಸೂಲಿಬೆಲೆ ಕಿಡಿ

ಬೀದರ್: ಮಾನವ ಹಕ್ಕುಗಳ ಹೆಸರಿನಲ್ಲಿ ಬೀದಿಗೆ ಬರುವ ಕೇಲ ಅಯೋಗ್ಯರಿಂದಲೇ ಇಂದು ಕಾಶ್ಮೀರ ಹಾಳಾಗಿದೆ ಇದು ದುರ್ದೈವದ ಸಂಗತಿಯಾಗಿದೆ. ಅದರಲ್ಲೂ ಗಿರೀಶ್ ಕಾರ್ನಾಡ್, ಪ್ರಕಾಶ್ ರೈ ಹಾಗೂ ಗೌರಿ ಲಂಕೇಶ್ ಇವರೆಲ್ಲರೂ ಸೇರಿಕೊಂಡು ಮಾನವ ಹಕ್ಕುಗಳ ಹೆಸರಿನಲ್ಲಿ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದು ನಿಜಕ್ಕೂ ದುರ್ದೈವದ ಸಂಗತಿ ಎಂದು ಖ್ಯಾತ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ.

ಬೀದರ್‍ ನ ಫಾರ್ಮಸಿ ಕಾಲೇಜು ಆವರಣದಲ್ಲಿ ನಡೆದ “ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು” ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೂಲಿಬೆಲೆ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಒಂದು ನಿಮಿಷ ಮೌನಚರಣೆ ಮಾಡಿದ್ರು. ಇದನ್ನೂ ಓದಿ: ಆರ್ಥಿಕ ದಿವಾಳಿ ಸರಿದೂಗಿಸಲು ಕತ್ತೆಗಳ ಮೊರೆ ಹೋದ ಪಾಕಿಸ್ತಾನ

ಬಳಿಕ ಮಾತನಾಡಿದ ಅವರು, ಪಾಪಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನ ಬೀಕಾರಿ ದೇಶವಾಗಿದ್ದು, ಕತ್ತೆ ರಫ್ತು ಮಾಡುವ ದಯನೀಯ ಸ್ಥಿತಿಗೆ ಬಂದಿದೆ. ಭಯೋತ್ಪಾದನೆ ಮತ್ತು ಚೀನಾಕ್ಕೆ ಕತ್ತೆ ರಫ್ತು ಮಾಡುವುದು ಇವರೆಡೇ ಪಾಕಿಸ್ತಾನಕ್ಕೆ ಗೊತ್ತಿರುವುದು. ಮುಂದೆ ಭಾರತ ಒಬ್ಬ ಯೋಧನನ್ನು ಕಳೆದುಕೊಳ್ಳಬಾರದು. ಪಾಕಿಸ್ತಾನದ ಒಬ್ಬರನ್ನು ಬಿಡಬಾರದು ಎಂದು ಹುತಾತ್ಮ ಯೋಧರು ಸಾವನ್ನಪ್ಪಿದ ಕ್ಷಣಗಳನ್ನು ಹಂಚಿಕೊಳ್ಳುತ್ತಾ ಭಾವುಕರಾದರು.

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಕುಟುಂಬದ ರಾಜಕೀಯ ಬಗ್ಗೆ ಕಿಡಿಕಾರಿದ್ದು, ತಂದೆ ಪ್ರಧಾನಿಯಾಗಿದ್ದ ಪ್ರಭಾವದಿಂದ ಮಗ ಸಿಎಂ, ಮಗ ಸಿಎಂ ಎನ್ನುವ ಕಾರಣಕ್ಕೆ ಅಣ್ಣ ಮಂತ್ರಿ, ಸಿಎಂ ಪತ್ನಿ ಶಾಸಕಿ, ಸಿಎಂ ಪತ್ನಿ ಶಾಸಕಿಯಾಗಿದ್ದರಿಂದ ನಾನು ಯಾಕೆ ಶಾಸಕಿಯಾಗಬಾರದು ಎಂದು ಅಣ್ಣನ ಪತ್ನಿ ಗಲಾಟೆ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಗಾಗಿ ಸಿಎಂ ಹಾಗೂ ಅಣ್ಣನ ಮಕ್ಕಳಲ್ಲಿ ಪೈಪೋಟಿ ಇದೆ. ಇವರಿಗೆ ಪರಿವಾರವೇ ದೇಶವಾಗಿದೆ. ಆದರೆ ಮೋದಿಗೆ ದೇಶವೇ ಪರಿವಾರ ಎಂದು ಮಾಜಿ ಪ್ರಧಾನಿ ಎಚ್.ಡಿ.ಡಿ ಹಾಗೂ ಸಿಎಂ ಎಚ್.ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು.

https://www.youtube.com/watch?v=uqZadi6yn30

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *