ದೇಶ ದ್ರೋಹಿಗಳಂದ್ರೆ ಕಾಂಗ್ರೆಸ್ಸಿಗರು, ಕಾಂಗ್ರೆಸ್ ಅಂದ್ರೆನೆ ದೇಶ ದ್ರೋಹ: ಚೈತ್ರಾ ಕುಂದಾಪುರ

ಗದಗ: ದೇಶ ದ್ರೋಹಿಗಳಂದ್ರೆ ಕಾಂಗ್ರೆಸ್ಸಿಗರು, ಕಾಂಗ್ರೆಸ್ ಅಂದ್ರೆನೆ ದೇಶ ದ್ರೋಹ ಎಂದು ಹಿಂದೂ ಫೈಯರ್ ಬ್ಯಾಂಡ್ ಚೈತ್ರಾ ಕುಂದಾಪುರ ವಿವಾದಾತ್ಮಕ ಹೇಳಿಕೆ ನೀಡಿದರು.

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 995 ರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಬಹಿರಂಗ ಸಮಾವೇಶ ಭಾಷಣದಲ್ಲಿ ಮಾತನಾಡಿದ ಅವರು, ದೇಶ ದ್ರೋಹಕ್ಕೆ ಇನ್ನೊಂದು ಪರ್ಯಾಯ, ಸಮಾನಾರ್ಥಕ ಪದ ಇದ್ರೆ ಅದು ಕಾಂಗ್ರೆಸ್ ಮಾತ್ರ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಡಬಲ್ ಎಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ ಇದು: ಸಿದ್ದು ಕಿಡಿ

ಉಕ್ರೇನ್ ದೇಶದಿಂದ ಭಾರತಕ್ಕೆ ಆಗಮಿಸಿದ ವಿದ್ಯಾರ್ಥಿಗಳ ಪೈಕಿ ಕೆಲವು ವಿದ್ಯಾರ್ಥಿಗಳು ಭಾರತಕ್ಕೆ ಗಟ್ಸ್ ಇಲ್ಲ ಎಂಬ ಹೇಳಿಕೆಗೆ ಸಹ ಅಸಮಾಧಾನ ವ್ಯಕ್ತಪಡಿಸಿದರು. ಉಕ್ರೇನ್ ದೇಶದಲ್ಲಿ ಸಿಲುಕಿದ ವಿದ್ಯಾರ್ಥಿಗಳನ್ನು ಕಷ್ಟಪಟ್ಟು ಭಾರತಕ್ಕೆ ಕರೆತರಲಾಗ್ತಿದೆ. ನಮ್ಮ ಮಕ್ಕಳು ವಿದ್ಯೆ ಪಡೀದೆ ಖಾಲಿ ಕೂತರೂ ಪರವಾಗಿಲ್ಲ. ವಿದೇಶಿ ಅರ್ಧ ಡಿಗ್ರಿ ಪಡಿದು ರಾಷ್ಟ್ರಕ್ಕೆ ಕೃತಘ್ನರಾಗುವ ದೇಶದ್ರೋಹಿಗಳನ್ನು ಹುಟ್ಟಿಸಬಾರದು. ಏನೂ ಓದದವರು, ಲಾರಿ, ಆಟೋ ಚಾಲಕರು ತಮ್ಮ ವಾಹನದ ಮೇಲೆ ‘ಮೇರಾ ಭಾರತ್ ಮಹಾನ್’, ‘ಭಾರತ ಮಾತಾಕಿ ಜೈ’ ಎಂದು ಬರೆದುಕೊಂಡಿರುತ್ತಾರೆ ಎಂದು ವಿವರಿಸಿದರು.

Manipur elections 2022: Congress releases third list of candidates

ಜಗತ್ತಿನ ಯಾವುದೇ ಯೂನಿವರ್ಸಿಟಿ ಕಲಿಸದ ರಾಷ್ಟ್ರ ಪ್ರೇಮ ಅವರಲ್ಲಿದೆ. ಆದರೆ ಬೇರೆ ದೇಶಕ್ಕೆ ಹೋಗಿ ಅರ್ಧ ಡಿಗ್ರಿ ತೆಗೆದುಕೊಂಡು ಬಂದವರು ದೇಶ ಸರಿ ಇಲ್ಲ ಅಂತಿದ್ದಾರೆ. ತಾಯಿ ಭಾರತಿಗೆ ಕೃತಜ್ಞರಾಗಿರುವುದನ್ನ ಕಲೆತರೆ ಮಾತ್ರ ಶಿಕ್ಷಣಕ್ಕೆ ಬೆಲೆ ಇರುತ್ತೆ. ಅನ್ನ ಕೊಟ್ಟ ಭೂಮಿಯನ್ನ ಮಾರಿ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿದ್ದಾರೆ. ಹೀಗೆ ಶಿಕ್ಷಣ ಪಡೆದು ದೇಶಕ್ಕೆ ವಾಪಾಸ್ ಆಗುವ ಮಕ್ಕಳು ಭಾರತ ಸರಿ ಇಲ್ಲ ಅಂತಾರೆ. ನಮ್ಮ ಮಕ್ಕಳು ಡಿಗ್ರಿ ಪಡೆಯದಿದ್ರೂ ಪರವಾಗಿಲ್ಲ. ಇಂಥ ಮಕ್ಕಳನ್ನ ಹುಟ್ಟಿಸಬಾರದು ಎಂದು ಆಕ್ರೋಶ ಹೊರಹಾಕಿದರು.

ಶಿವಮೊಗ್ಗ ಹರ್ಷ ಹತ್ಯೆ ಬಗ್ಗೆ ಮಾತನಾಡಿದ ಅವರು, ಹರ್ಷ ಕೊಲೆ ಮಾಡಿದ ಸಮುದಾಯದ ಬಗ್ಗೆ ನಿಜವಾದ ಭಾವನೆ ಏನೆಂಬುದು ಈಗ ಸಮಾಜಕ್ಕೆ ಅರ್ಥವಾಗ್ತಿದೆ. ಹಿಂದೂ ರಕ್ತದ ಮೇಲೆ ಇರುವ ಸರ್ಕಾರವಿದು. ಆ ಹಿಂದೂ ರಕ್ತಕ್ಕೆ ಉತ್ತರ ಜೊತೆಗೆ ಸೂಕ್ತ ನ್ಯಾಯ ಕೊಡಿಸಬೇಕು. ಈ ಬಗ್ಗೆ ಗಂಡೆದೆ ತೋರಿಸಬೇಕು ಎಂದರು.

ಮುಸ್ಲಿಂರನ್ನು ಡಿಕೆಶಿ ಬ್ರದರ್ಸ್ ಅಂತಾರೆ, ಹಾಗಾಗಿ ಡಿಕೆಶಿ ಬದರ್ಸ್‍ಗಳೆ ಹರ್ಷನನ್ನು ಕೊಂದದ್ದು. ಡಿಕೆಶಿ ಬ್ರದರ್ಸ್ ಗಳ ಪಾಪದಲ್ಲಿ ಡಿಕೆಶಿಗೂ ಪಾಲಿದೆ ಎಂದು ಭಾವಿಸುತ್ತೇನೆ ಎಂದರು. ಇದನ್ನೂ ಓದಿ: ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು: ವಿದ್ಯಾರ್ಥಿನಿ ಅಕ್ಷಿತಾ

ಈ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಶಿವಾಜಿ ಸೇನೆ ಕಾರ್ಯಕರ್ತರು ಸೇರಿದಂತೆ ಅನೇಕ ಸಾರ್ವಜನಿಕರು ಪಾಲ್ಗೊಂಡಿದ್ದರು.

Comments

Leave a Reply

Your email address will not be published. Required fields are marked *