BBK 11: ಬೆನ್ನಿಗೆ ಚೂರಿ ಹಾಕಿದ ಚೈತ್ರಾ ವಿರುದ್ಧ ಗುಡುಗಿದ ಶಿಶಿರ್

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಂಡು ಮುನ್ನುಗ್ಗುತ್ತಿದೆ. ಇನ್ನೂ ಈ ವಾರ ಹೊಸ ಟಾಸ್ಕ್‌ನಲ್ಲಿ ಚೈತ್ರಾ ವರಸೆ ಬದಲಿಸಿದ್ದಾರೆ. ಅಣ್ಣ ಅಂತಲೇ ಶಿಶಿರ್‌ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಚೈತ್ರಾ ಆಡಿದ ಆಟಕ್ಕೆ ಈ ವಾರ ಟಾಸ್ಕ್‌ನಿಂದಲೇ ಶಿಶಿರ್‌ (Shishir) ಹೊರಗೆ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ:ಪರಶುರಾಮನ ಅವತಾರದಲ್ಲಿ ವಿಕ್ಕಿ ಕೌಶಲ್- ಫಸ್ಟ್ ಲುಕ್ ಔಟ್

ಈ ವಾರ ಬಿಗ್ ಬಾಸ್ ಹೊಸದೊಂದು ಟಾಸ್ಕ್ ಕೊಟ್ಟಿದ್ದು, ಮನೆಯ ಕ್ಯಾಪ್ಟನ್ ತ್ರಿವಿಕ್ರಮ್‌ನ ಹೊರತುಪಡಿಸಿ ಒಟ್ಟು 6 ಜೋಡಿಗಳಾಗಿ ವಿಂಗಡಣೆ ಮಾಡಿದ್ದರು. ಇದೀಗ ತ್ರಿವಿಕ್ರಮ್‌ಗಾಗಿ ಶಿಶಿರ್ ಅನ್ನೇ ಚೈತ್ರಾ ಕೈಬಿಟ್ಟಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಜೋಡಿಗಳ ಪೈಕಿ ಒಬ್ಬರು ಮಾತ್ರ ನಾಮಿನೇಟ್ ಆಗಬೇಕಿರುತ್ತೆ. ಅದನ್ನು ಖುದ್ದು ಆಯಾ ಜೋಡಿಗಳೇ ನಿರ್ಧಾರ ಮಾಡಲು ಬಿಗ್‌ ಬಾಸ್‌ ಆದೇಶ ನೀಡಿರುತ್ತಾರೆ. ಈ ಪ್ರಕ್ರಿಯೆಯಲ್ಲಿ ಚೈತ್ರಾ (Chaithra Kundapura) ಹಾಗೂ ಶಿಶಿರ್ ಜೋಡಿ ಪರಸ್ಪರ ಚರ್ಚೆ ನಡೆಸುವಾಗ, ನಾನು ಏನೆಂದು ಪ್ರೂವ್ ಮಾಡಿಕೊಳ್ಳಬೇಕು. ನನ್ನ ತಾಯಿ ಬಿಗ್ ಬಾಸ್ ಮನೆಗೆ ಬರಬೇಕು ಅವರು ತಲೆ ಎತ್ತಿ ನಿಲ್ಲಬೇಕು. ಇದನ್ನೂ ನಾನು ನೋಡಬೇಕು. ಹಾಗಾಗಿ ನಾನು ಈ ವಾರ ನಾಮಿನೇಟ್ ಆಗಬಾರದು ಎಂದು ಶಿಶಿರ್ ಬಳಿ ಚೈತ್ರಾ ಕೇಳಿಕೊಳ್ತಾರೆ. ಆಗ ಶಿಶಿರ್ ಇದಕ್ಕೆ ಒಪ್ಪಿಗೆ ಸೂಚಿಸಿ ತಾವೇ ನಾಮಿನೇಟ್ ಆಗುತ್ತಾರೆ. ಈ ಮೂಲಕ ಅವರು ಚೈತ್ರಾ ಬೆಂಬಲಕ್ಕೆ ನಿಲ್ಲುತ್ತಾರೆ.

ಆದರೆ ಇದೀಗ ರಿಲೀಸ್ ಆದ ಇಂದಿನ ಪ್ರೋಮೋದಲ್ಲಿ ಶಿಶಿರ್ ಹಾಗೂ ಚೈತ್ರಾ ನಡುವೆ ಕಿರಿಕ್‌ ಆಗಿದೆ. ಶಿಶಿರ್ ವೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಇದಕ್ಕೆ ಕಾರಣ ಬಿಗ್ ಬಾಸ್ ಕೊಟ್ಟ ಆಫರ್. ಕನ್ಫೆಷನ್ ರೂಂಗೆ ಸ್ಪರ್ಧಿಗಳನ್ನು ಕರೆದಿರೋ ಬಿಗ್ ಬಾಸ್, ತ್ರಿವಿಕ್ರಮ್ ಜೊತೆ ಯಾರಾದ್ರೂ ಜೋಡಿಯಾಗಲು ಇಚ್ಛೆ ಇದ್ದವರು ತಮ್ಮ ಜೋಡಿಯನ್ನು ಬದಲಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪಿಕೊಂಡಿರೋ ಚೈತ್ರಾ ಶಿಶಿರ್‌ ಬಿಟ್ಟು ತ್ರಿವಿಕ್ರಮ್‌ ಪರ ಬ್ಯಾಟ್‌ ಬೀಸಿದ್ದಾರೆ. ತ್ರಿವಿಕ್ರಮ್‌ ಬೆಸ್ಟ್‌ ಎಂದು ಹೇಳಿರುವ ಚೈತ್ರಾ ಮಾತು ಕೇಳಿ ಶಿಶಿರ್‌ ಕೆಂಡಕಾರಿದ್ದಾರೆ.

ಕೃತಜ್ಞತೆಯೂ ಇಲ್ಲದ ಚೈತ್ರಾ ನಡವಳಿಕೆ ಕಂಡು ಶಿಶಿರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟನೆಯಲ್ಲಿ 12 ವರ್ಷ ಅನುಭವ ಇರುವ ನಾನಲ್ಲ ನಟ, ಚೈತ್ರಾ ಕುಂದಾಪುರ ರಿಯಲ್ ನಟಿ ಅಂತ ಕಿರುಚಾಡಿದ್ದಾರೆ. ಇನ್ನೂ ಪ್ರೋಮೋ ನೋಡಿದ ವೀಕ್ಷಕರು ಕೂಡ ಚೈತ್ರಾ ನಿರ್ಧಾರವನ್ನ ತೀವ್ರವಾಗಿ ಖಂಡಿಸಿದ್ದಾರೆ.