ಪೊಲೀಸರಂತೆ ವಾಕಿಟಾಕಿಯಲ್ಲಿ ಮಾತಾಡ್ತಾ 50ರ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ದಾತ ಅರೆಸ್ಟ್!

ಬೆಂಗಳೂರು: ಪೊಲೀಸರಂತೆ ವಾಕಿಟಾಕಿಯಲ್ಲಿ ಮಾತನಾಡುತ್ತಾ ಬಂದು ವಯಸ್ಸಾದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಸೈಯದ್ ಅಬೂಬಕ್ಕರ್ ಬಂಧಿತ ಆರೋಪಿ. ಈತ ಮೈಮೇಲೆ ಪೊಲೀಸ್ ಡ್ರೆಸ್, ಕೈಯಲ್ಲಿ ವಾಕಿಟಾಕಿ ಹಿಡಿದುಕೊಂಡು 50 ವರ್ಷ ದಾಟಿದ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದನು. ಬಂಧಿತನಿಂದ 50 ಲಕ್ಷ ರೂಪಾಯಿ ಮೌಲ್ಯದ 40 ಚಿನ್ನದ ಚೈನ್ ಗಳ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಸೈಯದ್ ಕೆಎಸ್ ಆರ್ ಪಿ ಪೊಲೀಸರೊಬ್ಬರಿಂದ ಡ್ರೆಸ್, ಹಾಗೆಯೇ ಸೆಕ್ಯೂರಿಟಿ ಗಾರ್ಡ್ ಒಬ್ಬನಿಂದ ವಾಕಿಟಾಕಿ ಕಳ್ಳತನ ಮಾಡಿದ್ದನು. ಹೀಗೆ ಕಳವುಗೈದ ಬಳಿಕ ಅವುಗಳನ್ನು ಧರಿಸಿ ತನ್ನ ಕೆಲಸ ಮುಗಿಸುತ್ತಿದ್ದನು. ಪಕ್ಕದ ರೋಡ್‍ನಲ್ಲಿ ಸರಗಳ್ಳತನ ಆಗಿದೆ. ಚೈನ್ ತೆಗೆದು ಬ್ಯಾಗ್‍ನಲ್ಲಿ ಹಾಕಿಕೊಳ್ಳಿ ಎಂದು ಹೇಳುತ್ತಾನೆ. ವಾಕಿಟಾಕಿಯಲ್ಲಿ ಎಸ್ ಸರ್, ಎಸ್ ಸರ್ ಅಂತಾನೇ ಸರ ಕಸಿದು ಎಸ್ಕೇಪ್ ಆಗುತ್ತಾನೆ.

ಸದ್ಯ ಅಬೂಬಕ್ಕರ್ ನನ್ನು ಬೆಂಗಳೂರಿನ ಚಂದ್ರಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದು, ಇದೀಗ ಈತನ ಮೇಲೆ ಬರೋಬ್ಬರಿ ನಲವತ್ತು ಕೇಸ್ ಗಳು ಇರುವುದು ಬೆಳಕಿಗೆ ಬಂದಿದೆ.

Comments

Leave a Reply

Your email address will not be published. Required fields are marked *