ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್‌ಗೆ ಮದುವೆ ಪ್ರಪೋಸಲ್

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ (Salman Khan) ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ 25ರ ಸುಂದರಿಯೊಬ್ಬರು ಮದುವೆ ಪ್ರಪೋಸಲ್ ಇಟ್ಟಿದ್ದಾರೆ. ನಿಮಗೆ ಯಾವ ರೀತಿ ಹುಡುಗ ಬೇಕು ಎಂದು ಸಲ್ಮಾನ್ ಕೇಳಿದ್ರೆ, ನೀವೇ ನನ್ನ ಮದುವೆ (Wedding) ಮಾಡಿಕೊಳ್ಳಿ ಎಂದು ಸ್ಪರ್ಧಿ ಚಾಹತ್ ಪಾಂಡೆ (Chahat Pandey) ಮನವಿ ಮಾಡಿದ್ದಾರೆ. ಇದನ್ನೂ ಓದಿ:ಪ್ರೀತಿಸಿ ಮದುವೆಯಾಗೋಕೆ ನನಗೆ ಸಮಯವಿಲ್ಲ: ಸುನೈನಾ

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಚಾಹತ್ ಪಾಂಡೆ ಅವರು ಬಿಗ್ ಬಾಸ್ ಹಿಂದಿ 18ರಲ್ಲಿ (Bigg Boss Hinid 18) ಸ್ಪರ್ಧಿಯಾಗಿ ಕಾಣಿಸಿಕೊಳ್ತಿದ್ದಾರೆ. ಇತ್ತೀಚಿನ ವೀಕೆಂಡ್ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಅವರು ನಿಮಗೆ ಯಾವ ರೀತಿಯ ಹುಡುಗ ಬೇಕು ಎಂದು ಚಾಹತ್‌ರನ್ನು ಪ್ರಶ್ನಿಸಿದರು. ಅದಕ್ಕೆ, ಸ್ಪರ್ಧಿ ಕರಣ್ ವೀರ್ ಮೆಹ್ತಾ ರೀತಿ ಜಿಮ್‌ಗೆ ಹೋಗಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವವರು, ಅವಿನಾಶ್ ಹಾಗೆ ಡ್ಯಾನ್ಸ್ ಮಾಡುವವರು, ವಿವಿನ್ ತರ ಹೇರ್ ಸ್ಟೈಲ್ ಇರುವವರು ಬೇಕು ಎಂದಿದ್ದಾರೆ.

ಆ ನಂತರ ಸರ್ ನೀವೇ ನನ್ನಾ ಮದುವೆ ಮಾಡಿಕೊಳ್ಳಿ ಎಂದು ಸಲ್ಮಾನ್‌ಗೆ ಚಾಹತ್ ಹೇಳಿದ್ದಾರೆ. ಅದಕ್ಕೆ ನೀವು ಹೇಳಿದ ಯಾವುದೇ ಗುಣಗಳು ನನ್ನಲ್ಲಿ ಇಲ್ಲ ಎಂದು ನಟ ಪ್ರತಿಯುತ್ತರ ನೀಡಿದ್ದಾರೆ. ಈ ಮೂಲಕ ಚಾಹತ್ ಮದುವೆ ಪ್ರಪೋಸಲ್‌ಗೆ ನಟ ಬ್ರೇಕ್ ಹಾಕಿದ್ದಾರೆ. ಸದ್ಯ ಈ ಸಂಚಿಕೆಯ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇನ್ನೂ ಸಲ್ಮಾನ್‌ಗೆ ಇರುವ ಜೀವ ಬೆದರಿಕೆಯ ನಡುವೆಯೂ ರಶ್ಮಿಕಾ ಮಂದಣ್ಣ (Rashmika Mandanna) ಜೊತೆಗಿನ ‘ಸಿಖಂದರ್’ (Sikandar) ಸಿನಿಮಾ ಮತ್ತು ಬಿಗ್ ಬಾಸ್ ಹಿಂದಿ 18ರ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಸಲ್ಮಾನ್‌ಗೆ ಬಿಗಿ ಭದ್ರತೆ ನೀಡಲಾಗಿದೆ.