ಬೀಜಿಂಗ್: ಇತ್ತೀಚೆಗೆ ಚೀನಾದ ಶಾಂಘೈನಲ್ಲಿ ಶತಮಾನದಷ್ಟು ಹಳೆಯದಾದ, ಸುಮಾರು 3,800 ಟನ್ ತೂಗುವ ಕಟ್ಟಡವನ್ನು ಅದರ ಮೂಲ ಸ್ಥಾನಕ್ಕೆ ಸ್ಥಳಾಂತರಿಸಲಾಯಿತು. ಈ ಕುತೂಹಲಕಾರಿ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಎಲ್ಲೆಡೆ ಹರಿದಾಡುತ್ತಿದೆ ಹಾಗೂ ನಡೆದಾಡುವ ಕಟ್ಟಡ ಎನ್ನಲಾಗುತ್ತಿದೆ.
ನಿಖರವಾದ ಅಳತೆ, ಲೆಕ್ಕಾಚಾರದ ಬಳಿಕ ಶಾಂಘೈನಲ್ಲಿ 3,800 ಟನ್ ತೂಗುವ ಕಟ್ಟಡವನ್ನು ಅದರ ಮೂಲ ಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ. ಕಟ್ಟಡವನ್ನು ಅದರ ಮೂಲ ಸ್ಥಾನಕ್ಕೆ ತಳ್ಳಲು ಸ್ಲೈಡಿಂಗ್ ಹಳಿಯನ್ನು ಬಳಸಲಾಗಿದೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ – ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ನಲ್ಲಿ ಕಾಣಿಸಿಕೊಂಡ ಧೋನಿ
3,800-ton century-old building slowly “walking” in Shanghaipic.twitter.com/fCeTbKpR7M
— Zhang Meifang张美芳 (@CGMeifangZhang) July 10, 2022
ವಾಕಿಂಗ್ ಮಷಿನ್ ಎಂದು ಕರೆಯಲಾಗುವ ತಂತ್ರಜ್ಞಾನದಿಂದ ಕಟ್ಟಡವನ್ನು ಮೇಲೆತ್ತಿ, ಸ್ಥಳಾಂತರಿಸಲಾಗಿದೆ. ಕಟ್ಟಡವನ್ನು ಸ್ಥಳಾಂತರಿಸುತ್ತಿರುವ ವೀಡಿಯೋದಲ್ಲಿ ಅದು ಚಲಿಸಿದಂತೆ ತೋರುತ್ತದೆ. ಇದಕ್ಕಾಗಿ ಕಟ್ಟಡವನ್ನು ಚಲಿಸುವ ಕಟ್ಟಡ ಎಂದು ಕರೆಯಲಾಗುತ್ತಿದೆ. ಈ ಕಟ್ಟಡ ನಗರದಲ್ಲೇ ಅತ್ಯಂತ ದೊಡ್ಡ ಹಾಗೂ ಭಾರವಾದ ಕಲ್ಲಿನ ರಚನೆಯಾಗಿದೆ. ಕುತೂಹಲ ಕೆರಳಿಸುವ ಇನ್ನೊಂದು ವಿಚಾರವೆಂದರೆ, ಕಟ್ಟಡವನ್ನು ಸ್ಥಳಾಂತರಿಸುವ ಸಂದರ್ಭ ಅದನ್ನು ಎಲ್ಲಿಯೂ ಭಾಗ ಮಾಡಲಾಗಿಲ್ಲ. ಸಂಪೂರ್ಣ ಒಂದೇ ತುಂಡನ್ನು ಸ್ಥಳಾಂತರಿಸಲಾಗಿದೆ.
Another Mind Boggling Engineering Feat ???? #China construction team just “lifted and moved” a massive school building in Shanghai over a 18 day period to a new location pic.twitter.com/yDdJgpFr9n
— StarBoy ???? (@StarboyHK) October 21, 2020
ಬೃಹತ್ ಕಟ್ಟಡಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಿಸುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಎಂಜಿನಿಯರ್‌ಗಳು ಸ್ಮಾರಕಗಳನ್ನು ಸಂರಕ್ಷಿಸಲು ಅಥವಾ ಇತರ ಯೋಜನೆಗಳಿಗೆ ಜಾಗ ಮಾಡಲು ಕಟ್ಟಡಗಳನ್ನು ಸ್ಥಳಾಂತರಿಸುವ ತಂತ್ರಜ್ಞಾನವನ್ನು ಬಳಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿವೆ. ಇದನ್ನೂ ಓದಿ: ಬಾಯಿಯಿಂದ ನೀರು ಉಗುಳಿ ಬಟ್ಟೆ ಇಸ್ತ್ರಿ – ವೃದ್ಧನ ವೀಡಿಯೋ ವೈರಲ್
https://twitter.com/splattne/status/1373698826880614402?ref_src=twsrc%5Etfw%7Ctwcamp%5Etweetembed%7Ctwterm%5E1373698826880614402%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Fworld%2Fstory%2Fcentury-old-building-shanghai-walks-to-its-new-location-1973911-2022-07-10
ಸ್ಟ್ರಕ್ಚರಲ್ ಮೂವಿಂಗ್ ಎನ್ನುವುದು ಸಂಪುರ್ಣ ಕಟ್ಟಡವನ್ನು ಅಡಿಪಾಯದಿಂದಲೇ ಮೇಲಕ್ಕೆತ್ತಿ, ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ. ಇದು ಐತಿಹಾಸಿಕ ಕಟ್ಟಡಗಳನ್ನು ಸಂರಕ್ಷಿಸಲು ಉಪಯೋಗವಾಗುವ ಸಾಮಾನ್ಯ ಮಾರ್ಗ. ಪ್ರವಾಹದ ಅಪಾಯದಲ್ಲೂ ಕಟ್ಟಡಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಇದೊಂದು ಉತ್ತಮ ಮಾರ್ಗವಾಗಿದೆ.

Leave a Reply