2025ರ ವೇಳೆಗೆ ಭಾರತದಲ್ಲಿ ತಲೆ ಎತ್ತಲಿವೆ 220 ವಿಮಾನ ನಿಲ್ದಾಣ: ಸಿಂಧಿಯಾ

ನವದೆಹಲಿ: ನಾಗರಿಕ ವಿಮಾನಯಾನ ಉದ್ಯಮವು ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು, 2025ರ ವೇಳೆಗೆ ಕೇಂದ್ರ ಸರ್ಕಾರವು 220 ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಈ ಕುರಿತು ಅಧಿವೇಶನದಲ್ಲಿ ಮಾತನಾಡಿರುವ ಅವರು, ಕೋವಿಡ್ ಸಮಯದಲ್ಲೂ ಭಾರತ ದೇಶ-ವಿದೇಶದ ಪ್ರಯಾಣದಲ್ಲಿ ಮುನ್ನಡೆ ಸಾಧಿಸಿದೆ. ಇದು ಆರ್ಥಿಕತೆಯ ಭಾಗವೂ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಆರ್ಥಿಕತೆ ಬಲಪಡಿಸಲು 220 ವಿಮಾನ ನಿಲ್ದಾಣ ಸ್ಥಾಪನೆಯ ಗುರಿಯನ್ನು ಹೊಂದಲಾಗಿದೆ. ಜೊತೆಗೆ ಆಹಾರ ಪದಾರ್ಥಗಳ ಸಾಗಾಣಿಕೆಗೆ ಕಾರ್ಗೋ ವಿಮಾನಗಳ ಸಂಖ್ಯೆಯನ್ನು ಶೇ.30ರಷ್ಟು ಹೆಚ್ಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಾಲಿವುಡ್ ಗಲ್ಲಿ ಬಾಯ್ ಖ್ಯಾತಿಯ ರಾಪರ್ ಧರ್ಮೇಶ್ ಪರ್ಮಾರ್ ಇನ್ನಿಲ್ಲ

ವಿಶ್ವದಾದ್ಯಂತ ಎಲ್ಲ ರಾಷ್ಟ್ರಗಳಲ್ಲಿ ಒಟ್ಟು ಪೈಲಟ್‍ಗಳಲ್ಲಿ ಶೇ.5 ರಷ್ಟು ಮಾತ್ರ ಮಹಿಳೆಯರಿದ್ದಾರೆ. ಆದರೆ, ಭಾರತದಲ್ಲಿ ಶೇ.15 ರಷ್ಟು ಮಹಿಳೆಯರಿದ್ದಾರೆ. ಕಳೆದ 20-25 ವರ್ಷಗಳಲ್ಲಿ ಹೀಗೆ ಸಾಕಷ್ಟು ಬೆಳವಣಿಗೆಗಳಾಗಿವೆ. ಇದು ಮಹಿಳಾ ಸಬಲೀಕರಣಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಹಾಗಾಗಿ, ಕೇಂದ್ರ ಸರ್ಕಾರವು 33 ದೇಶಿಯ ಸರಕು ಟರ್ಮಿನಲ್‍ಗಳು, 15 ವಿಮಾನಯಾನ ತರಬೇತಿ ಶಾಲೆಗಳನ್ನು ಸ್ಥಾಪಿಸುವ ಮೂಲಕ ಮತ್ತಷ್ಟು ಉದ್ಯೋಗಾವಕಾಶ ಕಲ್ಪಿಸಲು ಮುಂದಾಗುತ್ತಿದೆ. ಇದನ್ನೂ ಓದಿ: ಕರ್ನಾಟಕದ ಗಣಿಗಾರಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ ರಚನೆ – ಸುಪ್ರೀಂಕೋರ್ಟ್

 

2018-19ರಲ್ಲಿ ವಾರ್ಷಿಕ ಪ್ರಯಾಣಿಕರ ಸಂಖ್ಯೆ 34.5 ಕೋಟಿ ಇತ್ತು. 2023-24ರ ವೇಳೆಗೆ ಈ ಸಂಖ್ಯೆಯನ್ನು 40 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ಎಲ್ಲ ಉದ್ದೇಶಗಳಿಂದಾಗಿ 220 ಇಮಾನ ನಿಲ್ದಾಣಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ ಎಂದು ವಿವರಿಸಿದ್ದಾರೆ.

Comments

Leave a Reply

Your email address will not be published. Required fields are marked *