ಸೇನೆಯಲ್ಲಿ 4 ವರ್ಷ ಮಾತ್ರ ಸೇವೆ – ಶೀಘ್ರವೇ ಅಗ್ನಿಪಥ್‌ಗೆ ಅನುಮೋದನೆ

ARMY

ನವದೆಹಲಿ: ಭಾರತೀಯ ಸೇನೆ ಸೇರುವ ಮಂದಿಗೆ ಗುಡ್‌ನ್ಯೂಸ್‌. ಸೇನೆಯಲ್ಲಿ 4 ವರ್ಷಗಳ ಕಾಲ ಸೇವೆ ಸಲ್ಲಿಸುವ ವಿನೂತನ ʼಅಗ್ನಿಪಥ್‌ʼ ಯೋಜನೆಗೆ ಶೀಘ್ರವೇ ಕೇಂದ್ರ ಕ್ಯಾಬಿನೆಟ್‌ ಒಪ್ಪಿಗೆ ನೀಡುವ ಸಾಧ್ಯತೆಯಿದೆ.

ಟೂರ್ ಆಫ್ ಡ್ಯೂಟಿ ಪ್ರವೇಶ ಯೋಜನೆಯ ಅಡಿ ಮೂರು ಸೇನೆಗೆ ಯುವ ಜನತೆ ಸೇರಬಹುದಾಗಿದೆ. ಈ ಯೋಜನೆಯ ಅಡಿ ಸೈನಿಕರನ್ನು ಅಲ್ಪಾವಧಿಯ ಒಪ್ಪಂದದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ತರಬೇತಿ ನೀಡಿದ ಬಳಿಕ ವಿವಿಧ ಕ್ಷೇತ್ರಗಳಲ್ಲಿ ನಿಯೋಜಿಸಲಾಗುತ್ತದೆ.  ಇದನ್ನೂ ಓದಿ: ಭಾರತೀಯ ಸೇನೆ ಹೊಸ ಸಮವಸ್ತ್ರ ಅನಾವರಣ – ಏನಿದರ ವಿಶೇಷತೆ?

ಹೇಗಿರಲಿದೆ ಈ ಯೋಜನೆ?
ಆಯ್ಕೆಗೊಂಡ ಅಭ್ಯರ್ಥಿಗಳಿಗೆ 6 ತಿಂಗಳು ತರಬೇತಿ ನೀಡಲಾಗುತ್ತದೆ. ಸೈನ್ಯಕ್ಕೆ ಸೇರ್ಪಡೆಯಾದವರ ಪೈಕಿ ಶೇ. 20-25ರಷ್ಟು ಅಭ್ಯರ್ಥಿಗಳನ್ನು ಮುಂದುವರಿಸಲಾಗುತ್ತದೆ. 4 ವರ್ಷ ಪೂರ್ಣಗೊಂಡ ಬಳಿಕ ಬಿಡುಗಡೆಯಾಗುತ್ತಿರುವ ಸೈನಿಕರಿಗೆ 10 -12 ಲಕ್ಷ ರೂ. ಪ್ಯಾಕೇಜ್‌ ನೀಡಲಾಗುತ್ತದೆ.

ಈಗಾಗಲೇ ಸಿದ್ಧಪಡಿಸಿದ ಪ್ಲ್ಯಾನ್‌ ನಿಗದಿಯಂತೆ ನಡೆದರೆ ಮುಂದಿನ ಮೂರು ತಿಂಗಳಿನಲ್ಲಿ ನೇಮಕಾತಿ ಪ್ರಕ್ರಿಯೆ  ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್‌ 19 ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಎರಡು ವರ್ಷಗಳಿಂದ ಭಾರತೀಯ ಸೈನ್ಯ ಸ್ಥಗಿತಗೊಳಿಸಿದೆ.

Comments

Leave a Reply

Your email address will not be published. Required fields are marked *