ಅಚ್ಚೇ ದಿನ್ ಕೊಡ್ತೀವಿ ಎಂದ ಕೇಂದ್ರ ನರಕ ದಿನ ತೋರಿಸುತ್ತಿದೆ: ಡಿಕೆಶಿ

DK SHIVAKUMAR

ಬೆಂಗಳೂರು: ಕೇಂದ್ರ ಸರ್ಕಾರ ಎಲ್ಲ ವರ್ಗದ ಮೇಲೆ ಗದಾಪ್ರಹಾರ ನಡೆಸುತ್ತಿದೆ. ಅಚ್ಚೇ ದಿನ್ ಕೊಡ್ತೀವಿ ಎಂದು ಹೇಳಿ ನಿತ್ಯ ನರಕದಿನ ತೋರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಕಿದ್ದಾರೆ.

ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಎಲ್ಲ ವರ್ಗದ ಜನರ ಮೇಲೆ ಬೆಲೆ ಏರಿಕೆಯ ಗದಾ ಪ್ರಹಾರ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸಿಲಿಂಡರ್ ದರವೂ ಏರಕೆಯಾಗುತ್ತಿದೆ. ಕಳೆದ 11 ದಿನಗಳಿಂದಲೂ ಜನರ ಹಣ ಪಿಕ್‌ಪಾಕೆಟ್ ಆಗುತ್ತಿದೆ. ತೆರಿಗೆ ಹಣದಲ್ಲಿ ಜನರನ್ನು ಲೂಟಿ ಮಾಡುತ್ತಿದೆ. ಅಚ್ಚೇ ದಿನ ಕೊಡ್ತೀವಿ ಅಂತೇಳಿ ನಿತ್ಯ ನರಕ ದಿನ ತೋರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ಮುಚ್ಚಿಹಾಕಲು ಹಲಾಲ್ ತರ್ತಾರೆ: ಸಿದ್ದರಾಮಯ್ಯ ಕಿಡಿ

DK SHIVAKUMAR

ಪಂಚರಾಜ್ಯ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತೆಂದು ಯಾರೂ ದೃತಿಗೆಡಬೇಕಿಲ್ಲ. ಜನರ ಪರವಾಗಿ ನಮ್ಮ ಹೋರಾಟ ಇದ್ದೇ ಇರುತ್ತದೆ. ಅವೈಜ್ಞಾನಿಕವಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ. ಬೇರೆ-ಬೇರೆ ವಿಚಾರಗಳು ನಮ್ಮ ಮುಂದೆ ಇದ್ದರೂ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕುಮಾರಸ್ವಾಮಿಗೆ ಬಹಳ ಶಕ್ತಿಯಿದೆ
`ಹಿಜಬ್, ಹಲಾಲ್ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ತಾಕತ್ತು ಇಲ್ಲ’ ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಗೆ ಗರಂ ಆದ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ದೊಡ್ಡವರು, ಅವರಿಗೆ ಬಹಳ ಶಕ್ತಿ ಇದೆ, ಅವರ ತಾಕತ್ತು ಅವರಿಗೆ, ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಅವರ ಮಾತನ್ನು ಕಡೆಗಣಿಸಿದ್ದಾರೆ. ಇದನ್ನೂ ಓದಿ: ಹಲಾಲ್ ಕಟ್ ಮಾಂಸ ಖರೀದಿ ಉತ್ತೇಜಿಸಲು ಅಭಿಯಾನ: ದೇವನೂರ ಮಹಾದೇವ ನೇತೃತ್ವ

ಇದೇ ವೇಳೆ ಕಳೆದ 2 ವರ್ಷಗಳಿಂದ ಜನ ನರಳಿದ್ದಾರೆ. ಅದನ್ನೆಲ್ಲ ತಪ್ಪಿಸಿ ಹೊಸ ವರ್ಷ ಪ್ರಾರಂಭವಾಗಲಿ. ಹಾಗೆಯೇ ರಂಜಾನ್ ಕೂಡ ಪ್ರಾರಂಭವಾಗಿದ್ದು, ಅವರವರ ನಂಬಿಕೆಗಳನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಶುಭ ಕೋರಿದ್ದಾರೆ.

Comments

Leave a Reply

Your email address will not be published. Required fields are marked *