ಸ್ವಾತಂತ್ರ್ಯ ದಿನವೇ ಭಾರತದ ಗುಂಡೇಟಿಗೆ ಮೂವರು ಪಾಕ್ ಸೈನಿಕರು ಬಲಿ

ನವದೆಹಲಿ: ಸ್ವಾತಂತ್ರ್ಯ ದಿನದಂದು ಪಾಕ್ ಸೇನೆಯ ಮೂವರು ಸೈನಿಕರು ಭಾರತ ಸೇನಾ ಪಡೆಗಳ ಗುಂಡಿನ ದಾಳಿಗೆ ಸಾವನ್ನಪ್ಪಿದ್ದಾರೆ.

ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದಕ್ಕೆ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಕರಾಳ ದಿನವನ್ನಾಗಿ ಆಚರಿಸುತ್ತಿರುವ ಪಾಕ್ ಸೇನೆ ಇಂದು ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸಲು ಆರಂಭಿಸಿತ್ತು. ಈ ದಾಳಿಗೆ ಭಾರತ ಸೈನಿಕರು ಪ್ರತಿದಾಳಿ ನಡೆಸಿ ಗುಂಡಿನ ಸುರಿಮಳೆಗೈದಿದ್ದರು. ಪರಿಣಾಮ ಭಾರತದ ಸೈನಿಕರ ಗುಂಡೇಟಿಗೆ ಮೂವರು ಪಾಕ್ ಸೈನಿಕರು ಮೃತಪಟ್ಟಿದ್ದಾರೆ.

ಪಾಕಿಸ್ತಾನ ಡಿಜಿಐಸ್‍ಪಿಆರ್ ಅಬ್ದುಲ್ ಗಫೂರ್ ಸೈನಿಕರು ಮೃತಪಟ್ಟ ವಿಚಾರವನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ. ಭಾರತ ಕದನ ವಿರಾಮವನ್ನು ಉಲ್ಲಂಘಿಸಿ ದಾಳಿ ನಡೆಸಿದ್ದು, ನಮ್ಮ ಮೂವರು ಸೈನಿಕರು ಮೃತಪಟ್ಟಿದ್ದಾರೆ. ನಾವು ನಡೆಸಿದ ಪ್ರತಿ ದಾಳಿಗೆ ಭಾರತದ ಐವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ ಸೈನಿಕರು ಯಾರೂ ಮೃತಪಟ್ಟಿಲ್ಲ ಭಾರತ ಸೈನ್ಯದ ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನ ಉಗ್ರರನ್ನು ಭಾರತಕ್ಕೆ ಗಡಿಯಲ್ಲಿ ಕಳುಹಿಸಲು ಸದಾ ಸಿದ್ಧವಾಗಿರುತ್ತದೆ. ಈ ಸಂದರ್ಭದಲ್ಲಿ ಒಂದು ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿ ಭಾರತದ ಸೈನಿಕರ ಗಮನವನ್ನು ಸೆಳೆದು ಉಗ್ರರಿಗೆ ನುಸುಳಲು ಸಹಾಯ ಮಾಡುತ್ತದೆ. ಪಾಕಿಸ್ತಾನ ಈ ಕುತಂತ್ರ ಭಾರತಕ್ಕೆ ಗೊತ್ತಾಗಿದ್ದು ಗಡಿಯಲ್ಲಿ ಹೆಚ್ಚಿನ ಸಂಖ್ಯೆ  ಸೈನಿಕರನ್ನು ನಿಯೋಜನೆ ಮಾಡಿ ಉಗ್ರರ ಜೊತೆ ಪಾಕ್ ಸೈನಿಕರನ್ನು ಹತ್ಯೆ ಮಾಡಿ ತಿರುಗೇಟು ನೀಡುತ್ತಿದೆ. ಇದನ್ನೂ ಓದಿ: ಉಗ್ರರ ಜೊತೆ ಸೈನಿಕರ ಹೆಣ ಬಿದ್ದಿದೆ. ಶ್ವೇತ ಬಾವುಟ ತೋರಿಸಿ,ಶವಗಳನ್ನು ತೆಗೆದುಕೊಂಡು ಹೋಗಿ-ಪಾಕಿಸ್ತಾನಕ್ಕೆ ಭಾರತದ ಸಂದೇಶ

Comments

Leave a Reply

Your email address will not be published. Required fields are marked *