ಜೆಡಿಎಸ್ ಮುಖಂಡನ ಮರ್ಡರ್ ಕೇಸ್ – ಕೊಲೆಗೈದ ಸ್ಥಳದಲ್ಲಿ ಹೊಂಚು ಹಾಕಿದ್ದ ಹಂತಕರು

-ಸಿಸಿಟಿವಿಯಲ್ಲಿ ಆರೋಪಿಗಳ ಚಲನವಲನ ಸೆರೆ

ಮಂಡ್ಯ: ಜಿಲ್ಲೆಯ ಮದ್ದೂರಲ್ಲಿ ನಡೆದಿದ್ದ ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಹತ್ಯೆಗೈದ ಆರೋಪಿಗಳು ಕೊಲೆಗೆ ಹೊಂಚು ಹಾಕಿದ್ದ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಖಾಸಗಿ ಹೊಟೇಲ್‍ನ ಸಿಸಿಟಿವಿಯಲ್ಲಿ ಆರೋಪಿಗಳ ಚಲನವಲನ ದೃಶ್ಯ ಸೆರೆಯಾಗಿದೆ. ಆರೋಪಿಗಳು ಕೊಲೆ ಮಾಡುವ ಮುನ್ನ ಹೊಟೇಲ್ ಬಳಿ ಬಂದು ಸ್ಥಳ ವೀಕ್ಷಣೆ ಮಾಡಿದ್ದು, ಮದ್ದೂರಿನ ಟಿವಿ ವೃತ್ತದಲ್ಲಿರುವ ಖಾಸಗಿ ಹೋಟೆಲ್ ನಲ್ಲಿರುವ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಕೊಲೆಗೂ ಮುನ್ನ ಹೋಟೆಲ್ ಮುಂಭಾಗದಲ್ಲಿ ಕೊಲೆ ಮಾಡಿದ ದಿನ ಆರೋಪಿಗಳ ಚಲನವಲನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಜೆಡಿಎಸ್ ಮುಖಂಡನ ಹತ್ಯೆ ಪ್ರಕರಣ- ನಾಲ್ವರು ಆರೋಪಿಗಳ ಬಂಧನ

ಮೊದಲು ಇಬ್ಬರು ಆರೋಪಿಗಳು ನಡೆದುಕೊಂಡು ಬಂದು ಸ್ಥಳ ವೀಕ್ಷಣೆ ಮಾಡಿದ್ದಾರೆ. ನಂತರ 3 ಬೈಕ್ ನಲ್ಲಿ 5 ಜನರು ಬಂದು ಪ್ರಕಾಶ್ ಗಾಗಿ ಕಾಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇವರೇ ಪ್ರಕಾಶ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ಸಿಸಿಟಿವಿ ದೃಶ್ಯ ಆಧರಿಸಿ ಶಂಕಿಸಲಾಗಿದೆ.

ಕೊಲೆ ಮಾಡಿದ ದಿನ ಮದ್ದೂರಿನ ಪ್ರವಾಸಿ ಮಂದಿರದಿಂದ ಪ್ರಕಾಶ್ ಹೊರಡುತ್ತಿದ್ದಂತೆಯೇ ಆರೋಪಿಗಳು ಅಲರ್ಟ್ ಆಗಿದ್ದು, ಪ್ರವಾಸಿ ಮಂದಿರದಿಂದ 100 ಮೀಟರ್ ಅಂತರದಲ್ಲಿನ ಅಂಗಡಿಯಲ್ಲಿ ಕಾರ್ ನ ಸೀಟ್ ಹೊಲಿಸಲು ಪ್ರಕಾಶ್ ಕಾರ್ ನಿಲ್ಲಿಸಿದ್ದರು. ಕಾರ್ ನಿಲ್ಲಿಸುತ್ತಿದ್ದಂತೆ ಬೈಕ್ ನಲ್ಲಿ ತೆರಳಿದ ಐವರು ಆರೋಪಿಗಳು ಕೊಲೆ ಮಾಡಿ ಅದೇ ಬೈಕ್ ನಲ್ಲಿ ಬೆಂಗಳೂರು ಕಡೆಗೆ ಪರಾರಿಯಾಗಿದ್ದಾರೆ.

ಪ್ರಕಾಶ್ ಕೊಲೆ ಸಂಬಂಧ 8 ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇತರ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 143(ಅಕ್ರಮ ಕೂಟ), 146(ದೊಂಬಿ), 148(ಮಾರಕಾಸ್ತ್ರಗಳಿಂದ ಹಲ್ಲೆ), 341(ಅಕ್ರಮವಾಗಿ ಬಂಧಿಸುವುದು), 307(ಕೊಲೆ ಯತ್ನ), 302 (ಕೊಲೆಗೆ ದಂಡನೆ), 120ಬಿ(ಕ್ರಿಮಿನಲ್ ಪಿತೂರಿ) ಹಾಗೂ 114(ಅಪರಾಧ ನಡೆದಾಗ ದುಷ್ಪ್ರೇರಕನ ಹಾಜರಿ) ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.

https://www.youtube.com/watch?v=_TY3AJ71wY0

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *