ಬೆಂಗಳೂರು: ವೀಕೆಂಡ್ ಮತ್ತಿನಲ್ಲಿದ್ದ ಸಿಲಿಕಾನ್ ಸಿಟಿ ಜನರಿಗೆ ಸಿಸಿಬಿ ಪೊಲೀಸರು ತಡರಾತ್ರಿ ಶಾಕ್ ನೀಡಿದ್ದಾರೆ.
ನಗರದಲ್ಲಿ ಅನಧಿಕೃತವಾಗಿ ನಿಯಮ ಉಲಂಘನೆ ಮಾಡಿ ನಡೆಸುತ್ತಿದ್ದ ಹುಕ್ಕಾ ಬಾರ್ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಕೋರಮಂಗಲ, ಹೆಚ್ಎಸ್ಆರ್ ಲೇಔಟ್, ಎಂ.ಜಿ ರೋಡ್, ಸೆಂಟ್ ಮಾರ್ಕ್ಸ್ ರಸ್ತೆ, ರಾಜಾಜಿನಗರ ಓರಾಯನ್ ಮಾಲ್ ಸೇರಿದಂತೆ ನಗರದ 10 ಕಡೆ ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದ 12 ತಂಡಗಳು ದಾಳಿ ನಡೆಸಿವೆ.

ಹುಕ್ಕಾ ಬಾರ್ಗಳಲ್ಲಿ ಸ್ಮೋಕಿಂಗ್ ಜೊನ್ ಇರಬೇಕು. ಊಟವನ್ನ ಸರಬರಾಜು ಮಾಡುವಂತಿಲ್ಲ.ಅಲ್ಲದೇ ಅಪ್ರಾಪ್ತರಿಗೆ ಹುಕ್ಕಾ ಬಾರ್ಗಳಲ್ಲಿ ಪ್ರವೇಶ ಇಲ್ಲ. ಇವೆಲ್ಲ ನಿಯಮಗಳನ್ನು ಉಲಂಘನೆ ಮಾಡಿ ಹುಕ್ಕಾ ಬಾರ್ಗಳನ್ನ ನಡೆಸುತ್ತಿದ್ದರು. ಹೀಗಾಗಿ ದಾಳಿ ವೇಳೆ ಒಟ್ಟು 10 ಜನ ಮಾಲೀಕರು, ಬಾರ್ ಮ್ಯಾನೇಜರ್ಗಳನ್ನು ಬಂಧಿಸಲಾಗಿದೆ.
50ಕ್ಕೂ ಹೆಚ್ವು ಹುಕ್ಕಾಗಳನ್ನು ಜಪ್ತಿ ಮಾಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply