CBSE 2025: 10, 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ (CBSE) 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿದೆ. 2025 ರ ಬೋರ್ಡ್ ಪರೀಕ್ಷೆಗಳು ಫೆ.15 ರಿಂದ ಪ್ರಾರಂಭವಾಗಲಿವೆ.

CBSE ಇತ್ತೀಚೆಗೆ 10 ಮತ್ತು 12 ನೇ ತರಗತಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವುದರ ಕುರಿತು ವಿವರಗಳನ್ನು ಬಿಡುಗಡೆ ಮಾಡಿತ್ತು. 10 ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗಳು 2025ರ ಜ.1 ರಿಂದ ನಡೆಯಲಿದೆ. ಆದರೆ 12 ನೇ ತರಗತಿಯ ಪರೀಕ್ಷೆಗಳು ಫೆ.15 ರಂದು ಪ್ರಾರಂಭವಾಗುತ್ತವೆ ಎಂದು ತಿಳಿಸಿತ್ತು.

ವೇಳಾಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ?
ಸ್ಟೆಪ್‌ 1: cbse.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ.
ಸ್ಟೆಪ್‌ 2: ಮುಖಪುಟದಲ್ಲಿ, “Main Website” ಲಿಂಕ್ ಅನ್ನು ಕ್ಲಿಕ್ ಮಾಡಿ.
ಸ್ಟೆಪ್‌ 3: ಹೊಸ ಪುಟ ತೆರೆದುಕೊಳ್ಳುತ್ತದೆ. ಆಗ, ಬೋರ್ಡ್‌ ಪರೀಕ್ಷೆಗಳಿಗಾಗಿ X ಮತ್ತು XII ತರಗತಿಯ ದಿನಾಂಕದ ವೇಳಾಪಟ್ಟಿ 2025 (7.65 MB) 20/11/2024New_img ಮೇಲೆ ಕ್ಲಿಕ್ ಮಾಡಿ.
ಸ್ಟೆಪ್‌ 4: ಪಿಡಿಎಫ್‌ ತೆಗೆದುಕೊಳ್ಳುವಂತೆ ಸೂಚಿಸುತ್ತದೆ.
ಸ್ಟೆಪ್‌ 5: CBSE ಬೋರ್ಡ್ ಪರೀಕ್ಷೆಯ ವೇಳಾಪಟ್ಟಿ ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿಕೊಳ್ಳಿ.