NEET-UG ಪ್ರಶ್ನೆಪತ್ರಿಕೆ ಸೋರಿಕೆ ಕೇಸ್‌ – ಮಾಸ್ಟರ್‌ ಮೈಂಡ್‌, ಇಬ್ಬರು ಎಂಬಿಬಿಎಸ್‌ ವಿದ್ಯಾರ್ಥಿಗಳು ಅರೆಸ್ಟ್‌

ನವದೆಹಲಿ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ NEET-UG Paper Leak Case) ಮಾಸ್ಟರ್‌ ಮೈಂಡ್‌ಗಳಲ್ಲಿ ಒಬ್ಬ ಹಾಗೂ ʻಪರಿಹಾರಕʼರಾಗಿ (Solvers) ಕಾರ್ಯನಿರ್ವಹಿಸಿದ್ದ‌ ಇಬ್ಬರು ಎಂಬಿಬಿಎಸ್‌ ವಿದ್ಯಾರ್ಥಿಗಳನ್ನ ಕೇಂದ್ರೀಯ ತನಿಖಾ ದಳ (CBI) ಶನಿವಾರ ಬಂಧಿಸಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತ ಇಬ್ಬರು ʻಸಾಲ್ವರ್ʼ ಗಳನ್ನು ರಾಜಸ್ಥಾನ ಭರತ್‌ಪುರ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರ್ ಮಂಗಳಂ ಬಿಷ್ಣೋಯ್ ಮತ್ತು ದೀಪೇಂದರ್ ಕುಮಾರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: 24 ಗಂಟೆ ವಿದ್ಯುತ್‌ ಉಚಿತ, ಯುವಕರಿಗೆ ಉದ್ಯೋಗ ಖಚಿತ, ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. – ʻಕೇಜ್ರಿವಾಲ್‌ ಕಿ ಗ್ಯಾರಂಟಿʼ ಘೋಷಣೆ!

ನೀಟ್‌-ಯುಜಿ ಪರೀಕ್ಷೆ ದಿನದಿಂದ ಇವರಿಬ್ಬರು ಹಜಾರಿಬಾಗ್‌ನಲ್ಲಿ ಹಾಜರಿದ್ದರು ಎಂಬುದನ್ನು ಸಿಸಿಟಿವಿ ದೃಢಪಡಿಸಿದೆ. ಆರೋಪಿತ ಮಾಸ್ಟರ್ ಮೈಂಡ್ ಪಂಕಜ್‌ ಕುಮಾರ್‌ ʻಬಿ.ಟೆಕ್ʼ ಪದವೀಧರ ಎಂದು ಹೇಳಲಾಗಿದೆ. ಪಂಕಜ್‌ ಕುಮಾರ್‌ ಕದ್ದಿದ್ದ ಪ್ರಶ್ನೆ ಪತ್ರಿಕೆಯನ್ನು ಮಂಗಳಂ ಬಿಷ್ಣೋಯ್ ಮತ್ತು ದೀಪೇಂದರ್ ಕುಮಾರ್ ಪರಿಹರಿಸಿದ್ದರು ಎಂದು ಸಿಬಿಐ ಹೇಳಿದೆ. ಸದ್ಯ ಮಾಸ್ಟರ್‌ ಮೈಂಡ್‌ ಹಾಗೂ ಇಬ್ಬರು ಸಾಲ್ವರ್‌ಗಳನ್ನ ಸಿಬಿಐ ಬಂಧಿಸಿದ್ದು, ಬಂಧಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ನೀಟ್ ಹಗರಣದ ಗದ್ದಲ ಮುಂದುವರಿದ ಹೊತ್ತಿನಲ್ಲೇ ಸುಪ್ರೀಂ ಕೋರ್ಟ್ ಆದೇಶದನ್ವಯ ಕೇಂದ್ರವಾರು ಮತ್ತು ನಗರವಾರು ನಿಟ್-ಯುಜಿ ಫಲಿತಾಂಶವನ್ನು ಎನ್‌ಟಿಎ ಪ್ರಕಟಿಸಿದೆ. ಇದನ್ನೂ ಓದಿ: `Public TV’ ಇಂಪ್ಯಾಕ್ಟ್‌: ಪ್ರವಾಹ ಪೀಡಿತ ಪ್ರದೇಶ ಕರಡಿಗೋಡು ಗ್ರಾಮಕ್ಕೆ ಸಚಿವ ಬೋಸರಾಜು ಭೇಟಿ

ವಿದ್ಯಾರ್ಥಿಗಳ ಗುರುತು ಪತ್ತೆಯಾಗದಂತೆ ಎನ್‌ಟಿಎ ಮುಂಜಾಗ್ರತೆ ವಹಿಸಿದೆ. ಈ ದತ್ತಾಂಶದ ಪ್ರಕಾರ, ಮೊದಲಿಗೆ ಒಂದು ಪರೀಕ್ಷಾ ಕೇಂದ್ರದಲ್ಲಿ ಆರು ಮಂದಿಗೆ 720ಕ್ಕೆ 720 ಅಂಕ ಬಂದಿದ್ದವು. ಈ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. 1,563 ಮಂದಿಗೆ ಗ್ರೇಸ್ ಮಾರ್ಕ್ಸ್ ನೀಡಿದ್ದು ಇದಕ್ಕೆ ಕಾರಣ ಎಂದು ಗುರುತಿಸಿ ಅವರಿಗೆ ಮರುಪರೀಕ್ಷೆ ನಡೆಸಲಾಗಿತ್ತು. ಈ ಫಲಿತಾಂಶದ ನಂತ್ರ ಆ ಕೇಂದ್ರದಲ್ಲಿ ಬಂದ ಗರಿಷ್ಠ ಅಂಕ 682 ಎಂಬುದು ಗಮನಾರ್ಹ. ಅದು ಕೂಡ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಅಂಕ ಬಂದಿತ್ತು. ಕೇಂದ್ರವಾರು ಫಲಿತಾಂಶದ ವಿಶ್ಲೇಷಣೆ ಮುಂದುವರೆದಿದೆ. ಇದನ್ನೂ ಓದಿ:  NEET ಪರೀಕ್ಷಾ ಅಕ್ರಮ ಕೇಸ್:‌ ʻಸಾಲ್ವರ್‌ ಗ್ಯಾಂಗ್‌ʼ ಕೆಲಸ ಏನಾಗಿತ್ತು? ಮಾಸ್ಟರ್‌ ಮೈಂಡ್‌ ಮಾಫಿಯಾಗೆ ಸಿಲುಕಿದ್ದು ಹೇಗೆ?