ಸನ್ನಿ ಅಭಿಮಾನಿಗಳಿಗೆ ನಿರಾಸೆ-ಭೂಮಿ ಸಿನಿಮಾದಿಂದ ಟ್ರಿಪ್ಪಿ ಟ್ರಿಪ್ಪಿ ಸಾಂಗ್ ಕಟ್

ಮುಂಬೈ: ಬಾಲಿವುಡ್‍ನ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ತನ್ನದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಭೂಮಿ ಸಿನಿಮಾ ಪ್ರಚಾರಕ್ಕಾಗಿ ಕೊಚ್ಚಿಗೆ ತೆರೆಳಿದ್ದಾಗ ಸಾವಿರಾರು ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು. ಆದರೆ ಅಂತಹ ಸಾವಿರಾರು ಅಭಿಮಾನಿಗಳಿಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿಬಿಎಫ್‍ಸಿ) ನಿರಾಸೆಯನ್ನುಂಟು ಮಾಡಿದೆ.

ಸನ್ನಿ ಲಿಯೋನ್ ಭೂಮಿ ಸಿನಿಮಾದಲ್ಲಿ ಟ್ರಿಪ್ಪಿ ಟ್ರಿಪ್ಪಿ ಎಂಬ ಐಟಂ ಸಾಂಗ್‍ಗೆ ಡ್ಯಾನ್ಸ್ ಮಾಡಿದ್ದಾರೆ. ಆದರೆ ಈ ಸಾಂಗ್‍ನ ಕೆಲವು ದೃಶ್ಯಗಳನ್ನು ಸಿಬಿಎಫ್‍ಸಿ ಮಂಡಳಿ ಕಟ್ ಮಾಡಿ ಸನ್ನಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಭೂಮಿಯಲ್ಲಿ ನಟ ಸಂಜಯ್ ದತ್ ನಟಿಸುತ್ತಿದ್ದಾರೆ. ಸಂಜಯ್‍ಗೆ ಜೊತೆಯಾಗಿ ಅದಿತಿ ರಾವ್ ಹೈದರಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದ ಹಾಡೊಂದರಲ್ಲಿ ಸನ್ನಿ ಲಿಯೋನ್ `ಟ್ರಪ್ಪಿ ಟ್ರಿಪ್ಪಿ’ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದರು. ಆದರೆ ಈ ಹಾಡಿನ ಕೆಲವೊಂದು ಸೀನ್‍ಗಳನ್ನು ಸೆನ್ಸಾರ್ ಬೋರ್ಡ್ ತೆಗೆದು ಹಾಕಿದೆ.

ಇದನ್ನೂ ಓದಿ: ಕನ್ನಡದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಸನ್ನಿ ಲಿಯೋನ್ ಮಿಂಚಿಂಗ್!

ಟ್ರಿಪ್ಪಿ ಟ್ರಿಪ್ಪಿ ಸಾಂಗ್‍ನಲ್ಲಿ ಮಾತ್ರವಲ್ಲದೆ, ಸಿನಿಮಾದಲ್ಲಿ ನಟಿಯ ಮೇಲೆ ಆಗುವ ಅತ್ಯಾಚಾರದ ದೃಶ್ಯಗಳಿಗೆ ಸಹ ಕತ್ತರಿ ಹಾಕಿದ್ದಾರೆ. ಅಷ್ಟೆ ಅಲ್ಲದೆ ಸಾಲಿ, ಅಸಾರಾಂ, ಗಂಡಾ ಪಾನಿ, ಚುಂಬನ ದೃಶ್ಯವನ್ನು ತೆಗೆದು ಹಾಕಿದ್ದಾರೆ. ಸಿನಿಮಾದ ಕೆಲವು ಸಂಭಾಷಣೆಯ ಪದಗಳನ್ನು ಬದಲಾಯಿಸುವಂತೆ ಸಿಬಿಎಫ್‍ಸಿ ತಿಳಿಸಿದೆ. ಒಟ್ಟಾರೆ ಭೂಮಿ ಸಿನಿಮಾದಲ್ಲಿ 12 ಸೀನ್‍ಗಳಿಗೆ ಕತ್ತರಿ ಹಾಕಲಾಗಿದೆ.

ಇದನ್ನೂ ಓದಿ: ದೇವರನಾಡು ಕೇರಳದಲ್ಲಿ ಸಮೂಹ `ಸನ್ನಿ’ – ಸನ್ನಿ ಲಿಯೋನ್ ನೋಡಲು ಮುಗಿಬಿದ್ದ ಲಕ್ಷ-ಲಕ್ಷ ಜನ-ಫೋಟೋಗಳನ್ನು ನೋಡಿ

ಸಿಬಿಎಫ್‍ಸಿ ಹಲವು ದೃಶ್ಯಗಳನ್ನು ಕಟ್ ಮಾಡಿರುವುದು ನನಗೆ ಆಶ್ಚರ್ಯವೇನು ಆಗಿಲ್ಲ. ಯಾಕೆಂದರೆ ಇದೊಂದು ಸೂಕ್ಷ್ಮದ ವಿಷಯವಾಗಿದೆ ನನಗೆ ಮೊದಲೇ ತಿಳಿದಿತ್ತು. ಈ ಸಿನಿಮಾ ತುಂಬಾ ಹಿಂಸೆಯಾದುದ್ದು, ಆದ್ದರಿಂದ ಕೆಲವೊಂದು ದೃಶ್ಯಗಳನ್ನು ಬದಲಾಯಿಸಲಾಗಿದೆ ಎಂದು ನಿರ್ದೇಶಕ ಓಮುಂಗ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ವಿವಾದಕ್ಕೆ ಕಾರಣವಾಗಿದೆ ಸನ್ನಿ ಮತ್ತು ಮಗುವಿನ ಫೋಟೋ!

Comments

Leave a Reply

Your email address will not be published. Required fields are marked *