ಮಹಿಳಾ ರೋಗಿಗಳ ಅಶ್ಲೀಲ ವಿಡಿಯೋ ರೆಕಾರ್ಡಿಂಗ್- ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ವೈದ್ಯ

ಚೆನ್ನೈ: ಚಿಕಿತ್ಸೆಗೆಂದು ಕ್ಲಿನಿಕ್ ಗೆ ಬರುತ್ತಿದ್ದ ಮಹಿಳಾ ರೋಗಿಗಳ ಅಶ್ಲೀಲ ವಿಡಿಯೋ ತೆಗೆಯುತ್ತಿದ್ದ ಕಾಮುಕ ವೈದ್ಯನೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಇಂತಹ ಆಘಾತಕಾರಿ ಘಟನೆ ಚೆನ್ನೈನ ಮೈಲಾಪೂರ್ ನಲ್ಲಿ ನಡೆದಿದ್ದು, ಆರೋಪಿ 64 ವರ್ಷದ ಡಾ. ಶಿವಗುರುನಾಥನ್ ಎಂದು ತಿಳಿದು ಬಂದಿದೆ.

ಘಟನೆಯ ವಿವರ?:
ಶುಕ್ರವಾರ ಎದೆ ನೋವಿನಿಂದ ಬಳಲುತ್ತಿದ್ದ ಪತ್ನಿಯನ್ನು ಪತಿ ಸಿವಗುರುನಾಥನ್ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆರೋಪಿ ವೈದ್ಯ ರೋಗಿಯನ್ನು ಪ್ರಶ್ನಿಸಿದ್ದು, ಬಳಿಕ ಚೆಕ್ ಅಪ್ ಮಾಡಬೇಕು ಎಂದು ಆಕೆಯ ಪತಿಯನ್ನು ಹೊರಗಡೆ ಕಳುಹಿಸಿದ್ದಾನೆ.

ಹೊರಗಡೆಯಿದ್ದ ಪತಿ ಕುತೂಹಲದಿಂದ ವೈದ್ಯ ಏನು ಪರಿಶೀಲನೆ ನಡೆಸುತ್ತಿದ್ದಾನೆ ಎನ್ನುವುದನ್ನು ಕಿಟಕಿ ಮೂಲಕ ನೋಡಿದ್ದಾರೆ. ಈ ವೇಳೆ ವೈದ್ಯ ಮಹಿಳಾ ರೋಗಿಗೆ ತನ್ನ ಬಟ್ಟೆಯನ್ನ ತೆಗೆಯಲು ಹೇಳಿದ್ದಾನೆ. ಆದರೆ ಅದಕ್ಕೂ ಮುನ್ನ ಆಕೆಗೆ ತಿಳಿಯದಂತೆ ತನ್ನ ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿಯಲು ಸಿದ್ಧನಾಗಿ ನಿಂತಿದ್ದ. ಈ ದೃಶ್ಯವನ್ನು ನೋಡಿ ಶಾಕ್ ಆದ ಪತಿ, ತಕ್ಷಣ ರೂಮಿನ ಒಳಗಡೆ ಬಂದು ವೈದ್ಯನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪತಿ ಪ್ರಶ್ನೆ ಕೇಳಲು ಆರಂಭಿಸಿದ ನಂತರ ಆರೋಪಿ ವೈದ್ಯ ವಿಡಿಯೋವನ್ನ ಡಿಲಿಟ್ ಮಾಡಲು ಮುಂದಾಗಿದ್ದಾನೆ. ಅದು ಸಾಧ್ಯವಾಗದೇ ಇದ್ದಾಗ ತನ್ನ ಮೊಬೈಲ್ ನಲ್ಲಿದ್ದ ಮೆಮೊರಿ ಕಾರ್ಡ್ ತೆಗೆದು ಎಸೆದಿದ್ದಾನೆ. ಈ ಘಟನೆ ನಡೆದ ಬಳಿಕ ಮಹಿಳೆ ಮತ್ತು ಪತಿ ಕೂಡಲೇ ಸ್ನೇಹಿತರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಆತನ ಕ್ಲಿನಿಕ್ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ವೈದ್ಯನ ಮತ್ತೊಂದು ಮೊಬೈಲ್ ನಲ್ಲಿ ಸುಮಾರು 30 ಕ್ಕೂ ಅಧಿಕ ಮಹಿಳಾ ರೋಗಿಗಳ ವಿಡಿಯೋ ಇರುವುದು ಪತ್ತೆಯಾಗಿದೆ.

ಸದ್ಯಕ್ಕೆ ಆರೋಪಿ ವೈದ್ಯನನ್ನು ಬಂಧಿಸಿದ್ದು, ಆತನ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಐಪಿಸಿ ಸೆಕ್ಷನ್ ವಿವಿಧ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Comments

Leave a Reply

Your email address will not be published. Required fields are marked *