ಮಕ್ಕಳಿಗೆ ಐಸ್ ಕ್ರೀಂ ನೀಡದ್ದಕ್ಕೆ ಅಂಗಡಿ ಮೇಲೆ ದಾಳಿ ಮಾಡಿದ ತಂದೆ

ಮುಂಬೈ: ಅಂಗಡಿಯವರು ಐಸ್ ಕ್ರೀಂ ಕೊಡಲು ನಿರಾಕರಿಸಿದರೆ ಜನರು ಏನು ಮಾಡಬಹುದು? ಸುಮ್ಮನೆ ಹೋಗುತ್ತಾರೆ ಅಥವಾ ಬೇರೆ ಅಂಗಡಿಯನ್ನು ಹುಡುಕುತ್ತಾರೆ. ಆದರೆ ಇಲ್ಲೊಬ್ಬ ತಂದೆ ತನ್ನ ಮಕ್ಕಳಿಗೆ ಐಸ್ ಕ್ರೀಂ ಕೊಡಲಿಲ್ಲ ಎಂದು ಅಂಗಡಿ ಮೇಲೆ ದಾಳಿ ಮಾಡಿರುವ ಆಫಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈ ಉಪನಗರ ವಸಾಯಿಯಲ್ಲಿ ವ್ಯಕ್ತಿಯೊಬ್ಬರು ಮಧ್ಯರಾತ್ರಿ ಎರಡು ಗಂಟೆಗೆ ಐಸ್‍ಕ್ರೀಂ ನೀಡುವಂತೆ ಮಾರಾಟ ಮಾಡುವ ಮಾಲೀಕನನ್ನು ಕೇಳಿದ್ದಾನೆ. ಆದರೆ ಈ ವೇಳೆ ಅವರು ಕೊಡಲು ನಿರಾಕರಿಸಿದ್ದು, ಪರಿಣಾಮ ಆ ವ್ಯಕ್ತಿ ಅಂಗಡಿಯ ಸಂಪೂರ್ಣ ಐಸ್ ಕ್ರೀಮ್ ಸ್ಟಾಕ್‍ನ ಫ್ರೀಜರ್ ಅನ್ನು ಒಡೆದು ಹಾನಿಗೊಳಿಸಿರುವ ಆಫಾತಕಾರಿ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಇದನ್ನೂ ಓದಿ: ಕೊರೊನಾ ವಾರಿಯರ್ಸ್‍ಗೆ 4 ತಿಂಗಳಿನಿಂದ ಸಿಕ್ಕಿಲ್ಲ ಸಂಬಳ

ಡಿಸೆಂಬರ್ 19 ರಂದು ನಸುಕಿನ ಜಾವ 2:11 ರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವ್ಯಕ್ತಿಯೊಬ್ಬ ಐಸ್ ಕ್ರೀಂ ಅಂಗಡಿ ಮಾಲೀಕರೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತೆ. ಆ ವ್ಯಕ್ತಿಯ ಹಿಂದೆ ಹುಡುಗಿ ಮತ್ತು ಚಿಕ್ಕ ಮಗು ನಿಂತಿರುರುವುದನ್ನು ದೃಶ್ಯದಲ್ಲಿ ನೋಡಬಹುದು.

ಆ ವ್ಯಕ್ತಿ ನಂತರ ಮಕ್ಕಳನ್ನು ಪಕ್ಕಕ್ಕೆ ಹೋಗುವಂತೆ ಸೂಚಿಸಿ ವೆಲ್‍ನೆಸ್ ಮೆಡಿಕಲ್ ಸ್ಟೋರ್‍ನ ಹೊರಗೆ ಇರಿಸಲಾಗಿರುವ ಮೂರು ಐಸ್‍ಕ್ರೀಂ ಫ್ರೀಜರ್‍ಗಳನ್ನು ಸಮೀಪಿಸುತ್ತಾನೆ. ಇದರಿಂದ ಮಕ್ಕಳು ಏನು ತಿಳಿಯದೆ ಅಲ್ಲಿಂದ ಸುಮ್ಮನೆ ಹೋಗುತ್ತಾರೆ. ಕೊನೆಯದಾಗಿ ಆ ವ್ಯಕ್ತಿ ಅಂಗಡಿಯವರಿಗೆ ಎಚ್ಚರಿಕೆಯನ್ನು ನೀಡುತ್ತಾನೆ. ಅಲ್ಲೇ ಇದ್ದ ರಾಡ್ ಅನ್ನು ತೆಗೆದುಕೊಂಡು ಮೂರು ಫ್ರೀಜರ್‍ನ ಗಾಜನ್ನು ಆ ರಾಡಿನಿಂದ ಒಡೆದು ಹಾಕುತ್ತಾನೆ. ನಂತರ ಅಲ್ಲಿಂದ ಆ ರಾಡ್ ಅನ್ನು ಎಸೆದು ಕೋಪದಿಂದ ಹೊರಟು ಹೋಗುತ್ತಾನೆ. ಇದನ್ನೂ ಓದಿ: ನಮ್ಮ ಭೂಮಿ ಹೋದರೂ ಪರವಾಗಿಲ್ಲ, ಮೇಕೆದಾಟು ಯೋಜನೆ ಬೇಗ ಆರಂಭವಾಗಬೇಕು: ಡಿಕೆಶಿ

ಆ ವ್ಯಕ್ತಿ ಏಕೆ ಈ ರೀತಿ ಮಾಡಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಕರಣ ಕುರಿತು ತಡವಾಗಿ ಬೆಳಕಿಗೆ ಬಂದಿದ್ದು, ಪೂರ್ತಿಯಾಗಿ ತನಿಖೆಯಾಗಿಲ್ಲ. ಪ್ರಸ್ತುತ ವ್ಯಕ್ತಿ ವಿರುದ್ಧ ಮಾಣಿಕಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Comments

Leave a Reply

Your email address will not be published. Required fields are marked *