ಕಾಯುವಂತೆ ಮಾಡಿದ ಎಂದು ವೃದ್ಧನ ಮೇಲೆ ಕಾಫಿ ಎರಚಿ, ಥಳಿಸಿದ

ತಲ್ಲಹಸ್ಸೀ: ಗ್ಯಾಸ್ ಸ್ಟೇಷನ್‍ನಲ್ಲಿ ಹೆಚ್ಚು ಸಮಯ ಕಾಯುವಂತೆ ಮಾಡಿದ ಎಂದು ವ್ಯಕ್ತಿಯೊಬ್ಬ ವೃದ್ಧನ ಮೇಲೆ ಕಾಫಿ ಎರಚಿ, ಥಳಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಫ್ಲೋರಿಡಾದ ಗ್ಯಾಸ್ ಸ್ಟೇಷನ್‍ನಲ್ಲಿ 76 ವರ್ಷದ ವೃದ್ಧ ಬಿಲ್ ಮಾಡಿಸಲು ತಡ ಮಾಡಿದ್ದಾರೆ. ಸರದಿಯಲ್ಲಿ ಕಾಯುತ್ತಿ ಸೀನ್ ರುಯೆಲ್(39) ಸಿಟ್ಟಿಗೆದ್ದು ಕಾಫಿ ಕಪ್ ವೃದ್ಧನ ಕಡೆಗೆ ಎಸೆದು ಗ್ಯಾಸ್ ಸ್ಟೇಷನ್‍ನಿಂದ ಹೊರಟು ಹೋಗುತ್ತಾನೆ. ಇದನ್ನು ಗಮನಿಸಿದ ವೃದ್ಧ ಅವನನ್ನು ಹುಡುಕಿಕೊಂಡು ಹೊರಗೆ ಬಂದಿದ್ದು, ರುಯೆಲ್ ಮತ್ತೆ ಬಂದು ವೃದ್ಧನ ಮುಖಕ್ಕೆ ನೆಲಕ್ಕೆ ಬೀಳುವಂತೆ ಹೊಡೆದಿದ್ದಾನೆ. ಇದನ್ನೂ ಓದಿ:  ರಾಮಮಂದಿರ ಸುತ್ತಮುತ್ತಲಿನ ಮದ್ಯ ಮಾರಾಟಗಾರರ ಪರವಾನಗಿ ರದ್ದು: ಯುಪಿ ಸರ್ಕಾರ 

ರುಯೆಲ್ ಹೊಡೆದಿದ್ದನ್ನು ನೋಡಿದ ಸ್ಥಳೀಯರು ವೃದ್ಧನ ಸಹಾಯಕ್ಕೆ ಧಾವಿಸಿದ್ದಾರೆ. ಈ ಎಲ್ಲ ದೃಶ್ಯಗಳು ಅಂಗಡಿ ಹೊರಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋವನ್ನ ಸೋಶಿಯಲ್ ಮೀಡಿಯೋದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಪರಿಣಾಮ ವೀಡಿಯೋ ನೋಡಿದ ನೆಟ್ಟಿಗರು ರುಯೆಲ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಘಟನೆಯ ಒಂದು ದಿನದ ನಂತರ, ರುಯೆಲ್‍ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು, ನಾನು ಹೆಚ್ಚು ಸಮಯ ಕಾಯುತ್ತಿದ್ದರಿಂದ ನನಗೆ ಕೋಪ ಬಂತು. ಅದನ್ನು ನಿಯಂತ್ರಿಸಲು ನನಗೆ ಸಾಧ್ಯವಾಗಲಿಲ್ಲ. ಅದಕ್ಕೆ ನಾನು ಅವರಿಗೆ ಹೊಡೆದೆ ಎಂದು ತಿಳಿಸಿದ್ದಾನೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ಕೊಟ್ಟ ಪೊಲೀಸರು, ಕ್ಯಾಲಿಫೋರ್ನಿಯಾದಲ್ಲಿ ರುಯೆಲ್ ಕುಡಿದು ವಾಹನ ಚಲಾಯಿಸಿದ್ದಾನೆ. ಇದೇ ರೀತಿ ಅವನ ವಿರುದ್ಧ ಮೂರು ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಎಲ್ಲ ನಾಮಪತ್ರಗಳು ಕ್ರಮಬದ್ಧ 

Comments

Leave a Reply

Your email address will not be published. Required fields are marked *