ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದೇ ರೀತಿ ಈಗ ನೋಡಲು ಕಾಗೆ ರೀತಿ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಫೋಟೋವನ್ನು ಅಕ್ಟೋಬರ್ 27 ರಂದು ಸಂಶೋಧಕ ನಿರ್ದೇಶಕ ರಾಬರ್ಟ್ ಮ್ಯಾಕ್ಗುಯಿರ್ ಎಂಬವರು ತನ್ನ ಟ್ಟಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಫೋಟೋ ಜೊತೆಗೆ “ಕಾಗೆಯ ಈ ಫೋಟೋ ಕುತೂಹಲಕಾರಿಯಾಗಿದೆ. ಆದರೆ ಇದು ನಿಜಕ್ಕೂ ಕಾಗೆಯಲ್ಲ, ಬೆಕ್ಕು” ಎಂದು ಬರೆದುಕೊಂಡಿದ್ದಾರೆ.
ಈ ಫೋಟೋವನ್ನ ನೋಡಿದರೆ ನಿಮಗೂ ಕಾಗೆಯ ರೀತಿಯೇ ಕಾಣಿಸುತ್ತದೆ. ಆದರೆ ಇದು ನಿಜವಾಗಿಯೂ ಕಾಗೆಯಲ್ಲ. ಕಾಗೆ ರೀತಿ ಕಾಣುವ ಕಪ್ಪು ಬೆಕ್ಕಾಗಿದೆ. ರಾಬರ್ಟ್ ಅವರು ಈ ಫೋಟೋ ಪೋಸ್ಟ್ ಮಾಡಿದ ತಕ್ಷಣ ಅನೇಕರು ರೀಟ್ವೀಟ್ ಮಾಡಿದ್ದಾರೆ. ಕೆಲವು ಆಶ್ಚರ್ಯವಾಗಿ ಮಾಡಿದರೆ, ಇನ್ನು ಕೆಲವರು ಕಾಮಿಡಿ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇದುವರೆಗೂ ಈ ಫೋಟೋವನ್ನು 1.5 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದು, 52 ಸಾವಿರಕ್ಕೂ ಅಧಿಕ ಮಂದಿ ಈ ಫೋಟೋವನ್ನು ರೀಟ್ವೀಟ್ ಮಾಡಿದ್ದಾರೆ. ಈ ಫೋಟೊವನ್ನು ಗಮನಿಸಿದರೆ ಬೆಕ್ಕು ನೆಲದ ಮೇಲೆ ಕುಳಿತ್ತಿದ್ದು, ಹಿಂದೆಯಿಂದ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಹಾಗೆ ಕಾಣುತ್ತಿದೆ.
ಬೆಕ್ಕು ಫೋಟೋ ತೆಗೆಯುವಾಗ ತನ್ನ ತಲೆಯನ್ನ ಸ್ವಲ್ಪ ಹಿಂದೆ ತಿರುಗಿಸಿರುವ ಕಾರಣ ಅದರ ಕಣ್ಣುಗಳು ಕಾಣುತ್ತವೆ. ಆದರೆ ಒಂದು ಕಣ್ಣು ಮಾತ್ರ ಲೈಟ್ ಬೆಳಕಿನಿಂದ ಫೋಟೋದಲ್ಲಿ ಕಾಣಿಸುತ್ತದೆ. ಜೊತೆಗೆ ಅದರ ಒಂದು ಕಿವಿಯೇ ಕೊಕ್ಕಿನ ರೀತಿ ಕಾಣುತ್ತದೆ. ಆದ್ದರಿಂದ ಇದು ನೋಡಲು ಕಾಗೆ ರೀತಿ ಕಾಣಿಸುತ್ತದೆ. ಒಟ್ಟಿನಲ್ಲಿ ಈಗ ಈ ಬೆಕ್ಕಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://twitter.com/RobertMaguire_/status/1056365216009740289

Leave a Reply