ಬೆಕ್ಕಿಗಾಗಿಯೇ ಎಸಿ ರೂಮ್, ಮಿನಿ ಥಿಯೇಟರ್ ನಿರ್ಮಾಣ – ಗುಜರಾತಿನಲ್ಲೊಬ್ಬ ಕ್ಯಾಟ್ ಪ್ರಿಯ

ಗಾಂಧೀನಗರ: ಬೆಕ್ಕು ಪ್ರಿಯರೊಬ್ಬರು ಬೆಕ್ಕಿಗಾಗಿಯೇ ಆಧುನಿಕ ಸೌಲಭ್ಯ ಒಳಗೊಂಡ ಮನೆಯೊಂದನ್ನು ಖರೀದಿಸಿ ಅದಕ್ಕೆ ಕ್ಯಾಟ್ ಗಾರ್ಡನ್ ಎಂದು ನಾಮಕರಣ ಮಾಡಿದ್ದಾರೆ.

ಗುಜರಾತ್ ಕಚ್‍ನಲ್ಲಿರುವ ಗಾಂಧಿಧಾಮ ನಗರದಲ್ಲಿ ವಾಸಿಸುತ್ತಿರುವ ಕಸ್ಟಮ್ ಹೌಸ್ ಏಜೆಂಟ್ ಉಪೇಂದ್ರ ಗೋಸ್ವಾಮಿ, 2017ರಲ್ಲಿ ಕ್ಯಾಟ್ ಗಾರ್ಡನ್‍ನನ್ನು ಸ್ಥಾಪಿಸಿದರು. ಇದೀಗ ಆ ಗಾರ್ಡನ್‍ನಲ್ಲಿ 200ಕ್ಕೂ ಹೆಚ್ಚು ಬೆಕ್ಕುಗಳು ವಾಸವಾಗಿವೆ. 1994ರಲ್ಲಿ ನನ್ನ ಸಹೋದರಿ ನಿಧನರಾದರು. ಅವರಿಗಾಗಿಯೇ ಈ ಬೆಕ್ಕಿನ ಮನೆಯನ್ನು 2017ರಲ್ಲಿ ನಿರ್ಮಿಸಿದ್ದು, ಅಂದಿನಿಂದ ಇಂದಿನವರೆಗೂ ಬೆಕ್ಕುಗಳನ್ನು ಸಾಕುತ್ತಿದ್ದೇನೆ ಎಂದು ಗೋಸ್ವಾಮಿ ತಿಳಿಸಿದ್ದಾರೆ.

ನಾವು ಪ್ರತಿವರ್ಷ ನನ್ನ ಸಹೋದರಿ ಹುಟ್ಟುಹಬ್ಬವನ್ನು ಆಚರಿಸುತ್ತೇವೆ. ಆದರೆ ಒಮ್ಮೆ ನನ್ನ ಸಹೋದರಿಯ ಹುಟ್ಟುಹಬ್ಬದ ದಿನ ಮನೆಗೆ ಪ್ರವೇಶಿಸಿದ ಬೆಕ್ಕು ಕೇಕ್ ತಿಂದಿತು. ಅಂದಿನಿಂದ ಅದು ನಮ್ಮೊಟ್ಟಿಗೆ ಇದೆ. ನಾವು ಆ ಬೆಕ್ಕನ್ನು ನಮ್ಮ ಸಹೋದರಿಯ ರೂಪದಲ್ಲಿ ಕಾಣುತ್ತೇವೆ ಎಂದಿದ್ದಾರೆ. ಇದನ್ನೂ ಓದಿ:ಆರಂಭದ ದಿನ ಕೆಲ ಶಾಲೆಗಳಿಗೆ ಭೇಟಿ: ಬೊಮ್ಮಾಯಿ

ಬೆಕ್ಕಿಗಾಗಿಯೇ ನಿರ್ಮಿಸಿರುವ ಈ ಮನೆಯಲ್ಲಿ ಎಸಿ, ಮಿನಿ ಥಿಯೇಟರ್ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಬೆಕ್ಕು ಈ ಎಲ್ಲಾ ಸೌಕರ್ಯಗಳನ್ನು ಆನಂದಿಸುತ್ತಿದೆ. ಬೆಕ್ಕಿಗಾಗಿಯೇ ನಾಲ್ಕು ಎಸಿ ಕೊಠಡಿಗಳು 16 ಕಾಟೆಂಜ್‍ಗಳೊಂದಿಗೆ 12 ಬೆಡ್, ಬಾತ್ ರೂಮ್, ಮಿನಿ ಥಿಯೇಟರ್‌ಗಳನ್ನು ನಿರ್ಮಿಸಲಾಗಿದೆ. ಸಂಜೆ ವೇಳೆ ಬೆಕ್ಕುಗಳು ಥಿಯೇಟರ್‌ನ್ನು ವೀಕ್ಷಿಸುತ್ತದೆ ಮತ್ತು ಪ್ರತಿ ನಿತ್ಯ ಬೆಕ್ಕಿಗೆ ಮೂರು ಬಾರಿ ಅತ್ಯುತ್ತಮ ಬ್ರಾಂಡ್‍ನ ಆಹಾರವನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಗೋಸ್ವಾಮಿಯವರ ಪತ್ನಿ ಶಾಲಾ ಮುಖ್ಯೋಪಾಧ್ಯಾಯಿನಿಯಾಗಿದ್ದು, ಬೆಕ್ಕುಗಳ ಆರೈಕೆ ಹಾಗೂ ಮನೆಯ ನಿರ್ವಹಣೆಗೆ ಪ್ರತಿ ತಿಂಗಳು 1.5 ಲಕ್ಷ ವೆಚ್ಚವಾಗುತ್ತದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಷರಿಯತ್ ಕಾನೂನು ಎಂದರೇನು? ಅಫ್ಘಾನ್ ತಾಲಿಬಾನ್ ಹೇಗೆ ಅರ್ಥೈಸುತ್ತದೆ?

Comments

Leave a Reply

Your email address will not be published. Required fields are marked *