ಡಿಕೆಶಿಗೆ ಮುಳುವಾಗುತ್ತಾ ಕಾಂಗ್ರೆಸ್ಸಿಗರ ಪಿಸುಮಾತು? – ACBಯಲ್ಲಿ 2 ಪ್ರತ್ಯೇಕ ದೂರು ದಾಖಲು

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ ಅಂತ ಉಗ್ರಪ್ಪ-ಸಲೀಂ ಪಿಸುಮಾತು ಇದೀಗ ಎಸಿಬಿವರೆಗೆ ತಲುಪಿದ್ದು, 2 ದೂರು ದಾಖಲಾಗಿದೆ.

ಸಾಮಾಜಿಕ ಹೋರಾಟಗಾರ, ವಕೀಲ ಆಲಂಪಾಷ ದೂರು ನೀಡಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಭ್ರಷ್ಟಾಚಾರದ ಬಗ್ಗೆ ಸಂಪೂರ್ಣ ಗೊತ್ತಿದೆ. ಡಿಕೆಶಿ ಜಲಸಂಪನ್ಮೂಲ ಸಚಿವರಾಗಿದ್ದಾಗ ಭ್ರಷ್ಟಾಚಾರ ನಡೆದಿದೆ. ಡಿಕೆಶಿ 8 ರಿಂದ 12 ಪರ್ಸೆಂಟೇಜ್ ಕಮಿಷನ್ ಪಡೆದಿದ್ದಾರೆ. 2023ರ ಚುನಾವಣೆಗಾಗಿ ಕೋಟಿ ಕೋಟಿ ರೂಪಾಯಿ ಭ್ರಷ್ಟಾಚಾರದ ಹಣ ಸಂಪಾದನೆ ಆಗಿದೆ. ಅಕ್ರಮ ಹಣ ಸಂಪಾದನೆ ಬಗ್ಗೆ ಗೊತ್ತಿದ್ದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ ಅಂತ ದೂರಿದ್ದಾರೆ.

ಇತ್ತೀಚೆಗೆ ಯಡಿಯೂರಪ್ಪ ಆಪ್ತ ಉಮೇಶ್ ಮತ್ತು ಮೂವರು ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧವೂ ದೂರು ನೀಡಿದ್ದಾರೆ. ಮತ್ತೋರ್ವ ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್ ಎಂಬವರು ಕೂಡ ಡಿಕೆಶಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಗುತ್ತಿಗೆದಾರರ ವಿರುದ್ಧ ದೂರು ಎಸಿಬಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ನನ್ನಿಂದ ತಪ್ಪಾಗಿದೆ, ಡಿಕೆಶಿ ಮುಖ ನೋಡಲು ಆಗ್ತಿಲ್ಲ: ಸಲೀಂ ಕಣ್ಣೀರು

ಈ ಮಧ್ಯೆ ಪಾವಗಡದ ಸೋಲಾರ್ ಪಾರ್ಕ್‍ಗಾಗಿ ಡಿಕೆಶಿ ತಮಗೆ ಧಮ್ಕಿ ಹಾಕಿ ಎಕರೆಗೆ ಕೇವಲ 21 ಸಾವಿರ ರೂ ನಿಗದಿ ಮಾಡಿದ್ರು. ಅದಾನಿ, ಟಾಟಾ ಪವರ್, ರಿಲಿ ಪವರ್ ಸೇರಿದಂತೆ ಹಲವು ಖಾಸಗಿ ಕಂಪನಿಗಳ ಜೊತೆ ಸೇರಿಕೊಂಡು ಅವ್ಯಹಾರ ನಡೆಸಿದ್ದಾರೆ ಅಂತ ಭೂಮಿ ಕೊಟ್ಟ ರೈತರು ದೂರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಸಲೀಂ 6 ವರ್ಷ ಉಚ್ಚಾಟನೆ- ಉಗ್ರಪ್ಪಗೆ ಶೋಕಾಸ್‌ ನೋಟಿಸ್‌ ಜಾರಿ

Comments

Leave a Reply

Your email address will not be published. Required fields are marked *