ಡಾ.ಬಿ.ಎಂ. ಹೆಗ್ಡೆಗೆ ಡಾ.ಅನುಪಮಾ ನಿರಂಜನ ವೈದ್ಯಕೀಯ,ವಿಜ್ಞಾನ ಸಾಹಿತ್ಯ ಪ್ರಶಸ್ತಿ ಪ್ರದಾನ

ಮಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಯನ್ನು ಡಾ. ಬಿ.ಎಂ. ಹೆಗ್ಡೆ ಅವರಿಗೆ ಮಂಗಳೂರಿನ ಅವರ ನಿವಾಸದಲ್ಲಿ ಇಂದು ಪ್ರದಾನ ಮಾಡಲಾಯಿತು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಸಮಾರಂಭ ಹಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು, ಆದರೆ ಅನಿವಾರ್ಯ ಕಾರಣಗಳಿಂದ ಡಾ. ಬಿ.ಎಂ. ಹೆಗ್ಡೆ ಅವರು ಆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಪ್ರಾಧಿಕಾರದ ಅಧ್ಯಕ್ಷರು ಮಂಗಳೂರಿನ ಅವರ ನಿವಾಸಕ್ಕೆ ಭೇಟಿ ನೀಡಿ ಪ್ರಶಸ್ತಿ ಪ್ರದಾನ ಮಾಡಿದರು. ಕೆಲ ದಿನಗಳ ಹಿಂದೆ ಡಾ. ಬಿ.ಎಂ.ಹೆಗ್ಡೆ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಭಾರತ ಸರ್ಕಾರ ಗೌರವಿಸಿತ್ತು. ಇದನ್ನೂ ಓದಿ: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ರಾಷ್ಟ್ರಪತಿಯ ದೃಷ್ಟಿ ತೆಗೆದ ಮಂಜಮ್ಮ ಜೋಗತಿ!

ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಹಾಗೂ ಪ್ರಾಧಿಕಾರದ ಸದಸ್ಯರಾದ ಟಿ.ಎ.ಎನ್. ಖಂಡಿಗೆ, ಕನ್ನಡ ಮತ್ತು ಸಾಮರ್ಥ್ಯ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಬಿ.ಎಂ. ಹೆಗ್ಡೆಯವರ ಕುಟುಂಬದ ಸದಸ್ಯರಾದ ಮಂಜುನಾಥ್ ಹೆಗ್ಡೆ, ಭುವನ ಪ್ರಸಾದ್ ಹೆಗ್ಡೆ, ನೆರೆಹೊರೆಯವರಾದ ಚೈತನ್ಯ ಕೆ ಶೆಟ್ಟಿ, ನಿರುಪಮಾ ಪ್ರಸಾದ್ ಶೆಟ್ಟಿ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ವಿಧಾನ ಪರಿಷತ್ ಕಲಾಪದಲ್ಲಿ ಪೊಲೀಸರ ವಿರುದ್ದ ಹಕ್ಕುಚ್ಯುತಿ ಮಂಡನೆ

Comments

Leave a Reply

Your email address will not be published. Required fields are marked *