ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಪಘಾತವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆಯ ಹೊರವಲಯದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಗೆ ಡಿಕ್ಕಿಯಾಗಿ ನಾಲ್ಕು ಸುತ್ತು ಹೊಡೆದು ಕಾರು ಪಲ್ಟಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದವರ ಗುರುತು ಸಿಗಲಾರದಷ್ಟು ವಿಕಾರವಾಗಿದೆ. KA-17-Z-3614 ನಂಬರಿನ ಮಹೇಂದ್ರ ಎಕ್ಸ್ ಯುವಿ ಕಾರು ದಾವಣಗೆರೆ ಜಿಲ್ಲೆಯ ಡಾ. ಪ್ರಕಾಶ್ ಡಿ.ಬಿ. ಎಂಬವರಿಗೆ ಸೇರಿದೆ ಎನ್ನಲಾಗಿದೆ.

ಕಾರಿನಲ್ಲಿ ಇದ್ದವರು ಯಾರು ಎನ್ನುವುದು ಇದೂವರೆಗೂ ತಿಳಿದುಬಂದಿಲ್ಲ. ಕಾರು ಪಲ್ಟಿಯಾದ ಹಿನ್ನೆಲೆ ಕಾರಿನಲ್ಲಿದ್ದ ಯುವಕನೊಬ್ಬನ ಮೃತ ದೇಹ ಗುರುತು ಹಿಡಿಯಲು ಸಾಧ್ಯವಾಗದಷ್ಟು ವಿಕಾರವಾಗಿದೆ. ಮತ್ತೊಬ್ಬನ ಮೃತ ದೇಹ ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ಶಾಂತನಗೌಡ ರವರ ಸಂಬಂಧಿ ಎನ್ನಲಾಗಿದೆ.
ಸಂಚಾರಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply