ನಂಬಲು ಸಾಧ್ಯವಿಲ್ಲದ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದೇನೆ: ಟಿಬಿ ಜಯಚಂದ್ರ

ಬೆಂಗಳೂರು: ನಂಬಲು ಸಾಧ್ಯವಿಲ್ಲದ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದು ಶಿರಾ ಕ್ಷೇತ್ರದ ಕಾಂಗ್ರೆಸ್‍ನ ಮಾಜಿ ಸಚಿವ ಟಿಬಿ ಜಯಚಂದ್ರ ಅವರು ವೀಡಿಯೋ ಮೂಲಕ ತಿಳಿಸಿದ್ದಾರೆ.

ಘಟನೆ ಕುರಿತು ಖಾಸಗಿ ಆಸ್ಪತ್ರೆಯಿಂದಲೇ ವೀಡಿಯೋ ಕಳುಹಿಸಿರುವ ಅವರು, ರಾತ್ರಿ ನಾನು ಸಂಚರಿಸುತ್ತಿದ್ದ ಕಾರಿನ ಟಯರ್ ಬ್ಲಾಸ್ಟ್ ಆಗಿ ಅಪಘಾತ ಆಗಿದೆ ಎಂದು ಮಾಹಿತಿ ನೀಡಿದರು.

ನಂಬಲು ಸಾಧ್ಯವಿಲ್ಲದ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಭಯ ಪಡುವ ಅಗತ್ಯವಿಲ್ಲ. ಸಣ್ಣ ಗಾಯವಾಗಿದ್ದು 3-4 ವಾರ ಆಸ್ಪತ್ರೆಯಲ್ಲಿ ಇರಬೇಕು ಅಂತ ವೈದ್ಯರು ಹೇಳಿದ್ದಾರೆ. ನನ್ನನ್ನು ನೋಡಲು ಯಾರು ಬರುವುದು ಬೇಡ ಎಂದು ವೀಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನುಗ್ಗಿಕೇರಿ ಕಲ್ಲಂಗಡಿ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್

ನಡೆದಿದ್ದು ಏನು?
ಶಿರಾ ಕ್ಷೇತ್ರದ ಕಾಂಗ್ರೆಸ್‍ನ ಮಾಜಿ ಸಚಿವ ಟಿಬಿ ಜಯಚಂದ್ರ ಅವರು ಫಾರ್ಚುನರ್ ಕಾರಿನಲ್ಲಿ ಪ್ರಯಾಣಿಸುತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಉರುಳಿ ಬಿದ್ದ ಘಟನೆ ತುಮಕೂರು ತಾಲೂಕಿನ ಸಿಬಿ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ರಾತ್ರಿ ಸುಮಾರು 1 ಗಂಟೆಗೆ ನಡೆದಿದೆ. ಇದನ್ನೂ ಓದಿ:  ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ

ಘಟನೆಯಲ್ಲಿ ಜಯಚಂದ್ರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗನ್ ಮ್ಯಾನ್ ಹಾಗೂ ಕಾರು ಚಾಲಕ ಕೂಡ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಜಯಚಂದ್ರ ಅವರಿಗೆ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Comments

Leave a Reply

Your email address will not be published. Required fields are marked *