ಏಕಾಏಕಿ ಅಡ್ಡ ಬಂದ ದನ – ತೋಡಿಗೆ ಬಿದ್ದ ಕಾರ್

ಮಡಿಕೇರಿ: ರಸ್ತೆಗೆ ಅಡ್ಡಬಂದ ದನದಿಂದ ಪಾರಾಗಲು ಯತ್ನಿಸಿ ವಿಫಲವಾದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತೋಡಿಗೆ ಬಿದ್ದಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಾಪುರ ಸಮೀಪದ ಮೂವತ್ತೊಕ್ಲುವಿನಲ್ಲಿ ನಡೆದಿದೆ.

ಗ್ರಾಮದ ನಿವಾಸಿಗಳಾದ ರಚನ್ ಹಾಗೂ ರಾಬಿನ್ ಎಂಬವರ ಕಾರಾಗಿದ್ದು, ಶನಿವಾರ ತಮ್ಮ ಮಾರುತಿ ಆಲ್ಟೋ ಕಾರಿನಲ್ಲಿ ಕುಶಾಲನಗರದಿಂದ ಸುಂಟಿಕೊಪ್ಪ ಕಡೆಗೆ ಹೋಗುತ್ತಿದ್ದರು. ಆಗ 7ನೇ ಹೊಸಕೋಟೆಯ ಕೆಳಭಾಗದಲ್ಲಿರುವ ಮಾರುತಿ ನಗರದ ಮುಖ್ಯರಸ್ತೆ ಬದಿಯಲ್ಲಿ ಇದ್ದಕ್ಕಿದ್ದಂತೆ ದನವೊಂದು ಅಡ್ಡಬಂದಿದೆ.

ದನಕ್ಕೆ ಅಪ್ಪಳಿಸುವುದನ್ನು ತಪ್ಪಿಸಲು ಯತ್ನಿಸಿದಾಗ ಚಾಲಕ ರಚನ್ ಗೆ ಕಾರ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತೋಡಿಗೆ ಬಿದ್ದಿದೆ. ಅದೃಷ್ಟವಶಾತ್ ಚಾಲಕ ರಚನ್ ಹಾಗೂ ಅವರೊಂದಿಗೆ ಕಾರಿನಲ್ಲಿದ್ದ ರಾಬಿನ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಅಪಘಾತದಿಂದ ಗಾಯಗೊಂಡ ಅವರಿಗೆ ಕೂಡಲೇ 7ನೇ ಹೊಸಕೋಟೆಯ ಆರೋಗ್ಯ ಉಪಕೇಂದ್ರದಲ್ಲಿ ತುರ್ತು ಚಿಕಿತ್ಸೆ ಕೊಡಿಸಲಾಗಿದೆ. ಇನ್ನೂ ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *