Tumkur | ಗೌರಿ-ಗಣೇಶ ಹಬ್ಬ ಮುಗಿಸಿಕೊಂಡು ಬರುತ್ತಿದ್ದ ವೇಳೆ ಕಾರು ಅಪಘಾತ – ಐವರು ದಾರುಣ ಸಾವು!

ತುಮಕೂರು: ಗೌರಿ-ಗಣೇಶ ಹಬ್ಬ ಮುಗಿಸಿಕೊಂಡು ವಾಪಸ್‌ ಮನೆಗೆ ಬರುತ್ತಿದ್ದ ವೇಳೆ ಭೀಕರ ಕಾರು ಅಪಘಾತದಲ್ಲಿ (Car Accident) ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಐವರು ದಾರುಣ ಸಾವಿಗೀಡಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಒಂದು ಕಾರಿನಲ್ಲಿ ಮೂವರು, ಮತ್ತೊಂದು ಕಾರಿನಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.

ತುಮಕೂರು (Tumkur) ಜಿಲ್ಲೆಯ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಹಾಗೂ ಕಾಟಗಾನಹಟ್ಟಿ ಬಳಿ ಘಟನೆ ನಡೆದಿದ್ದು, ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಇನ್ನುಳಿದವರ ಹೆಸರು ಪತ್ತೆಯಾಗಿಲ್ಲ, ಅಪಘಾತಕ್ಕೀಡಾದವರ ಪೈಕಿ ಕಾರಿನಲ್ಲಿದ ಮತ್ತೋರ್ವ ಮಹಿಳೆ ಮತ್ತು ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕುಸ್ತಿಪಟುಗಳ ಬಗ್ಗೆ ಮಾತನಾಡಬೇಡಿ – ಬ್ರಿಜ್ ಭೂಷಣ್ ಸಿಂಗ್‍ಗೆ ಬಿಜೆಪಿ ಎಚ್ಚರಿಕೆ

ತುಮಕೂರು ಕಡೆಯಿಂದ ಬರುತ್ತಿದ್ದ ಸಿಯಾಜ್ ಮಾರುತಿ ಕಾರು ಹಾಗೂ ಮಧುಗಿರಿ ಕಡೆಯಿಂದ ತುಮಕೂರು ಕಡೆಗೆ ಹೊರಟಿದ್ದ ಟಾಟಾ ಟಿಯಾಗೋ ಕಾರಿನ ನಡುವೆ ಅಫಘಾತ ಸಂಭವಿಸಿದೆ. ಸ್ಥಳಕ್ಕೆ ತುಮಕೂರು ಎಸ್ಪಿ ಕೆ.ವಿ ಅಶೋಕ್ ಹಾಗೂ ಮಧುಗಿರಿ ಠಾಣೆ ಪಿಎಸ್‌ಐ ವಿಜಯ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಅಪಘಾತಕ್ಕೀಡಾದ ಕಾರುಗಳನ್ನ ಸ್ಥಳದಿಂದ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.  ಇದನ್ನೂ ಓದಿ: ಕ್ರಿಶ್ಚಿಯನ್ ಧರ್ಮದ ಉನ್ನತೀಕರಣಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ – 5 ಕೋಟಿ ಅನುದಾನ ಘೋಷಿಸಿದ ಸಿಎಂ

ಐವರ ದಾರುಣ ಸಾವು:
ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಐವರು ಸಾವನ್ನಪ್ಪಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ. ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದ ಯೋಗೆಶ್, ಯೋಗೆಶ್ ಪುತ್ರಿ ಸಿಂಧೂ (12) ಸೇರಿ ಒಂದೇ ಕುಟುಂಬದ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಇಂದು ರಾತ್ರಿಯೇ ಡಿಸಿಎಂ ಡಿಕೆಶಿ ಅಮೆರಿಕ ಪ್ರವಾಸ – ಕಮಲಾ ಹ್ಯಾರಿಸ್‌ರಿಂದ ಬಂತು ವಿಶೇಷ ಆಹ್ವಾನ?

ಅಪಘಾತ ಆಗಿದ್ದು ಹೇಗೆ?
ಮೃತ ಯೋಗೇಶ್‌ ಕುಟುಂಬಸ್ಥರು ಗೌರಿ-ಗಣೇಶ ಹಬ್ಬಕ್ಕೆಂದು ಊರಿಗೆ ತೆರಳಿದ್ದರು. ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಾಗಿದ್ದ ಯೋಗೇಶ್‌ ಕುಟುಂಬ ಭಾನುವಾರ ಹಬ್ಬ ಮುಗಿಸಿಕೊಂಡು ವೈ.ಎನ್ ಹೊಸಕೋಟೆ ಕಡೆಯಿಂದ ಬೆಂಗಳೂರಿಗೆ ಹೊರಟಿತ್ತು. ಇತ್ತ ಮೃತ ನಾಗರಾಜ್ ಕೊರಟಗೆರೆ ಕಡೆಯಿಂದ ಮಧುಗಿರಿ ಕಡೆಗೆ ತೆರಳಿದ್ದರು. ಮಧುಗಿರಿ ತಾಲೂಕಿನ ಕಾಟಗಾನಹಟ್ಟಿ ಹಾಗೂ ಕೆರೆಗಳಪಾಳ್ಯ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಎರಡು ಕಾರಗಳು ಸಂಪೂರ್ಣ ಜಖಂ ಆಗಿವೆ.