ಶಿಮ್ಲಾ: ರಸ್ತೆ ಅಪಘಾತದಲ್ಲಿ ಮಿಲಿಟರಿ ನರ್ಸಿಂಗ್ ಕ್ಯಾಪ್ಟನ್ ನಿಧನರಾದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.
ರೋಹಿಣಿ(29) ನಿಧನರಾದ ಕ್ಯಾಪ್ಟನ್. ರೋಹಿಣಿ ಆರ್ಮಿ ಕ್ಯಾಂಪ್ ಜಲಂಧರ್ ನಲ್ಲಿ ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಕ್ಯಾಪ್ಟನ್ ಆಗಿದ್ದರು. ರೋಹಿಣಿ ತನ್ನ ಸ್ಕೂಟಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಸ್ಕೂಟಿಯಲ್ಲಿ ರೋಹಿಣಿ ಕೆಲಸಕ್ಕೆ ತೆರಳುತ್ತಿದ್ದಾಗ ಟ್ರಕ್‍ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ರೋಹಿಣಿ ತಲೆಗೆ ಗಂಭೀರವಾಗಿ ಗಾಯವಾಗಿದ್ದ ಪರಿಣಾಮ ಅವರು ಕೋಮಾಗೆ ಜಾರಿದ್ದರು. ಬುಧವಾರ ರೋಹಿಣಿ ಕೊನೆಯುಸಿರೆಳೆದಿದ್ದಾರೆ.

ಇಂದು ಕ್ಯಾಪ್ಟನ್ ರೋಹಿಣಿ ಅವರ ಅಂತಿಮ ಸಂಸ್ಕಾರವನ್ನು ಕುಲುವಿನ ಪಟ್ಲಿಕುಹಾಲ್‍ನಲ್ಲಿರುವ ಡುವಾಡಾದಲ್ಲಿ ಮಾಡಲಾಗಿದೆ. ಲಾಹೌಲ್ ಬುಡಕಟ್ಟು ಪ್ರದೇಶದ ಗೌಶಾಲ್ ಗ್ರಾಮದಲ್ಲಿ ರೋಹಿಣಿ ಅವರ ಕುಟುಂಬಸ್ಥರು ವಾಸಿಸುತ್ತಿದ್ದಾರೆ.
ಯುವ ಕ್ಯಾಪ್ಟನ್ ರೋಹಿಣಿ ಸಾವಿನ ಸುದ್ದಿ ತಿಳಿದ ಲಾಹೌಲ್ ಕಣಿವೆ ಶೋಕದಲ್ಲಿ ಮುಳುಗಿದೆ.

Leave a Reply