ಮನಸ್ಸು ಮಾಡಿದ್ರೆ ಒಂದೇ ನಿಮಿಷದಲ್ಲಿ ಸಿಎಂ ಆಗುತ್ತೇನೆ: ಹೇಮಾ ಮಾಲಿನಿ

ನವದೆಹಲಿ: ನನಗೆ ಮುಖ್ಯಮಂತ್ರಿ ಆಗುವ ಆಸೆ ಇಲ್ಲ. ಆದರೆ ಮನಸ್ಸು ಮಾಡಿದರೆ ಒಂದೇ ಕ್ಷಣದಲ್ಲಿ ಸಿಎಂ ಆಗುತ್ತೇನೆ ಎಂದು ನಟಿ, ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.

69 ವರ್ಷದ ಹೇಮಾ ಮಾಲಿನಿ ಅವರು ಉತ್ತರಪ್ರದೇಶದ ಮಥುರಾ ಸಂಸದೆಯಾಗಿದ್ದಾರೆ. ರಾಜಸ್ಥಾನದ ಬನ್ಸ್ವಾರ ಪ್ರದೇಶದ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸಿಎಂ ಆಗುವ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. `ಸಿಎಂ ಆಗುವುದು ನನಗೆ ಕಷ್ಟದ ಕೆಲಸವಲ್ಲ. ಆದರೆ ಇಂತಹ ಹುದ್ದೆಗಳಲ್ಲಿ ನಾನು ಸಿಕ್ಕಿಹಾಕಿಕೊಂಡು ಇರುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಬಯಸುವುದಿಲ್ಲ’ ಎಂದು ಹೇಳಿದ್ದಾರೆ.

2003 ರಾಜ್ಯಸಭೆಗೆ ಬಿಜೆಪಿ ಪಕ್ಷ ಹೇಮಮಾಲಿನಿ ಅವರನ್ನು ನಾಮನಿರ್ದೇಶನ ಮಾಡಿತ್ತು. ಬಳಿಕ 2004ರಲ್ಲಿ ಅವರು ಬಿಜೆಪಿ ಸೇರ್ಪಡೆಯಾದರು. ಬಳಿಕ 2010ರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸುವ ಮೂಲಕ ಸಂಸದರಾಗಿ ಆಯ್ಕೆಯಾದರು. ಸದ್ಯ ಯೋಗಿ ಆದಿತ್ಯನಾಥ್ ಅವರು ಉತ್ತರಪ್ರದೇಶ ಸಿಎಂ ಆಗಿದ್ದು, ಹೇಮಾ ಮಾಲಿನಿ ಅವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

 ಹೇಮಾ ಮಾಲಿನಿ ರಾಜಕೀಯ ಪ್ರವೇಶ ಮಾಡಿದ್ದರೂ ಸಹ ಚಿತ್ರರಂಗದ ಮೂಲಕವೇ ಹೆಚ್ಚು ಹೆಸರು ಗಳಿಸಿದ್ದಾರೆ. 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು, 1ಸಾವಿರಕ್ಕೂ ಹೆಚ್ಚು ಶೋ ಗಳನ್ನು ಭಾರತದಾದ್ಯಂತ ನೀಡಿದ್ದಾರೆ.

Comments

Leave a Reply

Your email address will not be published. Required fields are marked *