ಎಲೆಕ್ಷನ್ ಇಯರ್‌ಗೆ ಕ್ಯಾಬಿನೆಟ್ ಪುನಾರಚನೆ ಬಹುತೇಕ ಖಚಿತ

ಬೆಂಗಳೂರು: ಎಲೆಕ್ಷನ್ ಇಯರ್ ಗೆ ಕ್ಯಾಬಿನೆಟ್ ಪುನಾರಚನೆ ಬಹುತೇಕ ಖಚಿತ ಆಗ್ತಿದೆ. ಹಾಗಾದ್ರೆ ಹೈಕಮಾಂಡ್ ಪ್ಲಾನ್ ಏನು..? ಫಾರ್ಮುಲಾ ಯಾವುದು..? ಸಂಪುಟದಿಂದ ಔಟ್ ಆಗುವವರು ಯಾರು..? ಕ್ಯಾಬಿನೆಟ್‍ಗೆ ಇನ್ ಆಗುವವರು ಯಾರು..? ಅನ್ನೋದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ಏಪ್ರಿಲ್‍ನಲ್ಲಿ ಸರ್ಕಾರದಲ್ಲಿ ದೊಡ್ಡ ಬದಲಾವಣೆ ಆಗಲಿದ್ದು, ಬೊಮ್ಮಾಯಿ ಕ್ಯಾಬಿನೆಟ್‍ನಲ್ಲಿ 5 ಮೂಲ ಬಿಜೆಪಿ, ಮೂವರು ವಲಸಿಗರು ಸೇರಿ ಒಟ್ಟು 8 ಮಂದಿ ಸಚಿವರಿಗೆ ಕೊಕ್ ಸಾಧ್ಯತೆ ಇದೆ. ಮೂಲ ಬಿಜೆಪಿಗರಲ್ಲಿ ಹಿರಿತನ, 4 ಸಿಎಂಗಳ ಕ್ಯಾಬಿನೆಟ್‍ನಲ್ಲಿ ಸಚಿವರಾದವರಿಗೆ ಕೊಕ್ ನೀಡಬಹುದು. ಇದನ್ನೂ ಓದಿ: ಮಗ MLA- ತಾಯಿ ಸರ್ಕಾರಿ ಶಾಲೆಯಲ್ಲಿ ಸ್ವೀಪರ್

ಬಿಎಸ್‍ವೈ, ಡಿವಿಎಸ್, ಶೆಟ್ಟರ್ ಕ್ಯಾಬಿನೆಟ್‍ನಲ್ಲೂ ಸಚಿವರಾಗಿ, ಬೊಮ್ಮಾಯಿ ಕ್ಯಾಬಿನೆಟ್‍ನಲ್ಲೂ ಸಚಿವರಾಗಿರುವ ಮೂವರಿಗೆ ಬಹುತೇಕ್ ಕೊಕ್‍ಗೆ ಪ್ಲಾನ್ ಮಾಡಲಾಗುತ್ತಿದೆ. ಬಿಎಸ್‍ವೈ ಕ್ಯಾಬಿನೆಟ್‍ನಲ್ಲಿ 2 ವರ್ಷ ಸಚಿವರಾಗಿದ್ದವರಲ್ಲಿ ಇಬ್ಬರಿಗೆ ಕೊಕ್ ನೀಡುವ ಸಾಧ್ಯತೆ ಇದೆ. ಬರೋಬ್ಬರಿ ಒಂದು ಡಜನ್ ಹೊಸ ಮುಖಗಳಿಗೆ ಸಂಪುಟದಲ್ಲಿ ಸ್ಥಾನಕ್ಕೆ ಪ್ಲಾನ್ ಮಾಡಲಾಗುತ್ತಿದೆ. ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂತು ನಾಲ್ಕು ಡಿಸಿಎಂಗಳ ರಚನೆಯ ಚರ್ಚೆ..!

ಜಾತಿ ಸಮೀಕರಣ, ಪ್ರಾದೇಶಿಕ ಸಮತೋಲನ, ಹಿಂದೂ ಫೈರ್ ಬ್ರಾಂಡ್, ಸಾಮೂಹಿಕ ನಾಯಕರಾಗುವ ಮುನ್ಸೂಚನೆ ಇರುವ ಶಾಸಕರಿಗೆ ಸ್ಥಾನ ನೀಡುವ ಲೆಕ್ಕಾಚಾರ ಹಾಕಲಾಗುತ್ತಿದೆ. ಶಾಸಕರು, ಪರಿಷತ್ ಸದಸ್ಯರು ಅಲ್ಲದ ಇಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *