ಆಂಧ್ರಪ್ರದೇಶ-ತೆಲಂಗಾಣ ನಡುವೆ ಕೃಷ್ಣಾ ನದಿ ನೀರು ಹಂಚಿಕೆ ವಿವಾದ- ಕೃಷ್ಣಾ ನ್ಯಾಯಧಿಕರಣ 2 ರಚನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ನವದೆಹಲಿ: ಆಂಧ್ರಪ್ರದೇಶ (Andhra Pradesh) ಮತ್ತು ತೆಲಂಗಾಣ (Telangana) ನಡುವೆ ಕೃಷ್ಣಾ ನದಿ (Krishna  River) ನೀರು ಹಂಚಿಕೆ ವಿವಾದ ಪರಿಹರಿಸಲು ನ್ಯಾಯಧಿಕರಣ (Tribunal) ರಚನೆಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಬುಧವಾರ ನಡೆದ ಸಭೆಯಲ್ಲಿ ಕೃಷ್ಣಾ ಟ್ರಿಬ್ಯುನಲ್ 2 ರಚನೆಗೆ ಒಪ್ಪಿಗೆ ಸೂಚಿಸಲಾಗಿದೆ.

ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಕೃಷ್ಣಾ ನ್ಯಾಯಧಿಕರಣ ಕರ್ನಾಟಕ, ಮಹರಾಷ್ಟ್ರ, ಅವಿಭಜಿತ ಆಂಧ್ರಪ್ರದೇಶಕ್ಕೆ ನೀರು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಆದರೆ ಆಂಧ್ರಪ್ರದೇಶದಿಂದ ಹೊರ ಬಂದ ತೆಲಂಗಾಣ ನೀರು ಮರು ಹಂಚಿಕೆಗೆ ಆಗ್ರಹಿಸಿ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿತ್ತು.

ಪ್ರಕರಣ ವಿಚಾರಣೆ ವೇಳೆ ತೆಲಂಗಾಣ ಮನವಿಗೆ ಕರ್ನಾಟಕ-ಮಹಾರಾಷ್ಟ್ರ ವಿರೋಧ ವ್ಯಕ್ತಪಡಿಸಿದ್ದವು, ನಮ್ಮ ನೀರಿನ ಪ್ರಮಾಣದಲ್ಲಿ ಕಡಿಮೆ ಮಾಡುವಂತಿಲ್ಲ, ಆಂಧ್ರಪ್ರದೇಶಕ್ಕೆ ಹಂಚಿಕೆಯಾಗಿರುವ ನೀರಿನ ಪ್ರಮಾಣದಲ್ಲಿ ತೆಲಂಗಾಣಕ್ಕೆ ಪಾಲು ನೀಡಬೇಕು ಎಂದು ಒತ್ತಾಯಿಸಿದ್ದವು, ಇದಕ್ಕೆ ತೆಲಂಗಾಣವೂ ಒಪ್ಪಿದ ಹಿನ್ನೆಲೆ ಎರಡು ರಾಜ್ಯಗಳ ನಡುವೆ ನೀರು ಹಂಚಲು ನ್ಯಾಯಧಿಕರಣ ಸ್ಥಾಪಿಸಲು ಸುಪ್ರೀಂಕೋರ್ಟ್ (Supreme Court) ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಸುಪ್ರೀಂಕೋರ್ಟ್ ನಿರ್ದೇಶನ ಅನ್ವಯ ಅಂತರ-ರಾಜ್ಯ ನದಿ ನೀರಿನ ವಿವಾದಗಳ (ISRWD) ಕಾಯ್ದೆ, 1956ರ ಅಡಿಯಲ್ಲಿ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-II ಗೆ ಅನುಮೋದನೆ ನೀಡಿದೆ. ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಇದನ್ನು ಅಧಿಕೃತವಾಗಿ ಹೇಳಿದ್ದಾರೆ. ಇದನ್ನೂ ಓದಿ: ಉಜ್ವಲ ಫಲಾನುಭವಿಗಳಿಗೆ ಸಬ್ಸಿಡಿ ಹೆಚ್ಚಳ- 600 ರೂ.ಗೆ ಸಿಗಲಿದೆ ಸಿಲಿಂಡರ್

ಕೃಷ್ಣಾ ನ್ಯಾಯಧಿಕರಣದಲ್ಲಿ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524.26 ಮೀಟರುಗಳಿಗೆ ಏರಿಸಲು ಅವಕಾಶ ನೀಡಿ ಕರ್ನಾಟಕಕ್ಕೆ 911 ಟಿಎಂಸಿ, ಮಹಾರಾಷ್ಟ್ರಕ್ಕೆ 666 ಟಿಎಂಸಿ ಹಾಗೂ ಆಂಧ್ರಪ್ರದೇಶಕ್ಕೆ 1001 ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶಿಸಿತ್ತು. ಕರ್ನಾಟಕಕ್ಕೆ ಎ ಸ್ಕೀಮಿನಲ್ಲಿ 734, ಬಿ ಸ್ಕೀಮಿನಲ್ಲಿ 177 ಟಿಎಂಸಿ ನೀರು. ಮಹಾರಾಷ್ಟ್ರಕ್ಕೆ ಬಿ. ಸ್ಕೀಮಿನಲ್ಲಿ 81 ಟಿಎಂಸಿ, ಆಂಧ್ರಕ್ಕೆ ಬಿ ಸ್ಕೀಮಿನಲ್ಲಿ 190 ಟಿಎಂಸಿ ನೀರು ನೀಡಿತ್ತು.

ಕರ್ನಾಟಕ ಹೆಚ್ಚುವರಿಯಾಗಿ 170 ಟಿಎಂಸಿ ನೀರು ಸಂಗ್ರಹಿಸಬಹುದು. ಪ್ರತಿ ವರ್ಷ ರಾಜ್ಯದಿಂದ ಆಂಧ್ರಕ್ಕೆ 8-10 ಟಿಎಂಸಿ ಹರಿಸಬೇಕು, ಕೃಷ್ಣಾ ಮೇಲ್ದಂಡೆ ಯೋಜನೆಗೆ 303 ಟಿಎಸಿ ನೀರು ಬಳಸಲು ಸಮ್ಮತಿ ನೀಡಿ ಈ ತೀರ್ಪು 2050ರವರೆಗೆ ಅನ್ವಯವಾಗುತ್ತದೆ ಎಂದು ಹೇಳಿತ್ತು. ಸದ್ಯ ಕರ್ನಾಟಕ ಮಹರಾಷ್ಟ್ರ ತಮ್ಮ ಪಾಲಿನ ನೀರಿನ ಬಳಕೆಗೆ ಗೆಜೆಟ್ ಹೊರಡಿಸಲು ನಿರ್ದೇಶಿಸುವಂತೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿವೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]