ಅತ್ಯಾಚಾರ ಆರೋಪ – ಕ್ಯಾಬ್ ಚಾಲಕ ಪೊಲೀಸ್ ವಶಕ್ಕೆ

ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕ್ಯಾಬ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಯಾಬ್ ಚಾಲಕನನ್ನು ದೇವರಾಜ್ ಎಂದು ಗುರುತಿಸಲಾಗಿದ್ದು, ಈತ ಆಂಧ್ರ ಮೂಲದವನು. ಬೆಳಗ್ಗಿನ ಜಾವ ಸುಮಾರು 4 ಗಂಟೆಯ ವೇಳೆ ಘಟನೆ ನಡೆದಿದೆ. ಯುವತಿ ಗೆಳತಿಯ ಮನೆಗೆ ಹೋಗಿ ಬರುವಾಗ ಘಟನೆ ನಡೆದಿದೆ. ಸದ್ಯ ಸಂತ್ರಸ್ತೆಯನ್ನು ಮೆಡಿಕಲ್ ಟೆಸ್ಟ್ ಗೆ ಕರೆದುಕೊಂಡು ಹೋಗಲಾಗಿದೆ.

ಈ ಸಂಬಂಧ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಇಬ್ಬರ ನಡುವೆ ಮಾತುಕತೆ ನಡೆದಿದೆ. ಬಳಿಕ ಯುವತಿ ಈತನನ್ನ ತಳ್ಳಿ ಹೊರಟಿದ್ದಾಳೆ. ಮೊಬೈಲ್ ನಲ್ಲಿ ಕ್ಯಾಬ್ ರೇಟ್ ತೋರಿಸಿದ್ದಾರೆ. ಆ ಬಳಿಕ ಮೊಬೈಲ್ ಕಿತ್ತುಕೊಂಡು ಯುವತಿ ಹೋಗಿದ್ದಾರೆ. ಕ್ಯಾಬ್ ಹಣವನ್ನ ಯುವತಿಯಿಂದ ಚಾಲಕ ಪಡೆದಿಲ್ಲ. ಯುವತಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಾರೆ. ಆ ಬಳಿಕ ಇಬ್ಬರ ನಡುವೆ ಏನಾಗಿದೆ ಗೊತ್ತಿಲ್ಲ. ಚಾಲಕ ರೇಪ್ ಮಾಡಿಲ್ಲ ಅಂತಿದ್ದಾನೆ. ವಿಚಾರಣೆ ನಡೆಯುತ್ತಿದೆ. ಸತ್ಯಾಂಶ ಪರಿಶೀಲನೆ ನಡೆಸುತ್ತಿದ್ದೇವೆ. ಘಟನೆ ಸಂಬಂಧ ಇನ್ನೂ ಎಫ್‍ಐಆರ್ ದಾಖಲಾಗಿಲ್ಲ. ವಿಚಾರಣೆ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ತಿಳಿಸಿದ್ದಾರೆ.

ಜೀವನ್ ಭೀಮಾನಗರ ಠಾಣೆಗೆ ಸಂತ್ರಸ್ತ ಮಹಿಳೆ ದೂರಿನ ಮೇರೆಗೆ ದೂರು ದಾಖಲಾಗಿದೆ. ತಕ್ಷಣ ಪೊಲೀಸ್ ಕಾರ್ಯಪ್ರವೃತ್ತರಾಗಿದ್ದಾರೆ. ಮೂರು ತಂಡ ರಚಿಸಿ ಆರೋಪಿ ಪತ್ತೆ ಕೆಲಸ ಮಾಡಲಾಗಿದೆ. ಕಂಪ್ಲೆಂಟ್ ಬಂದಿದೆ ಐಪಿಸಿ ಸಿಆರ್ ಪಿಸಿ ಅಡಿ ತನಿಖೆ ನಡೆಸಲಾಗುತ್ತೆ. ತನಿಖೆ ನಡೆಸಿದ ನಂತ್ರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ತನಿಖೆ ಆದ ನಂತ್ರ ಕೆಲವು ವಿಷಯಗಳು ಗೊತ್ತಾಗಲಿದೆ ಎಂದರು. ಸದ್ಯ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕ್ಯಾಬ್ ಚಾಲಕನನ್ನು ಡಿಸಿಪಿ ಶರಣಪ್ಪ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಫೋಟೋ ಪಾಲಿಟಿಕ್ಸ್-ಮೋದಿ ಭಾವಚಿತ್ರ ಅಳವಡಿಕೆಗೆ ಜೆಡಿಎಸ್ ವಿರೋಧ

ಏನಿದು ಘಟನೆ..?
ಕ್ಯಾಬ್ ಚಾಲಕ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಈ ಘಟನೆ ಹೆಚ್ ಎಸ್ ಆರ್ ಲೇಔಟ್‍ನ ಮುರುಗೇಶ್ ಪಾಳ್ಯದಲ್ಲಿ ನಡೆದಿದೆ. ಆರೋಪ ಮಾಡಿರುವ ಯುವತಿ ಜೀವನ್ ಭೀಮಾನಗರದಲ್ಲಿ ಕೆಲಸ ಮಾಡುತ್ತಿದ್ದಾಳೆ. ನಿನ್ನೆ ರಾತ್ರಿ ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳಲು ಈಕೆ ಕ್ಯಾಬ್ ಬುಕ್ ಮಾಡಿದ್ದಳಂತೆ. ಹೀಗೆ ಕ್ಯಾಬ್ ಬಂದು ಯುವತಿ ಮುಂದೆ ಬಂದು ನಿಂತಿದ್ದು, ಆಕೆಯ ಕ್ಯಾಬ್ ಏರಿದ್ದಾಳೆ. ನಂತರ ಆಕೆ ಚಾಲಕನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾಳೆ.

ಇತ್ತ ಕ್ಯಾಬ್ ಚಾಲಕ, ಯುವತಿ ಕುಡಿದ ಮತ್ತಿನಲ್ಲಿದ್ದಳು. ಅರೆಪ್ರೆಜ್ಞೆ ಅವಸ್ಥೆಯಲ್ಲಿದ್ದ ಯುವತಿ, ಮನೆ ಜಾಗ ಬಂದರೂ ಇಳಿಯಲಿಲ್ಲ. ಹೀಗಾಗಿ ಆಕೆಯನ್ನು ಇಳಿಸಲು ಹೋದೆ. ಆಗ ಆಕೆ ನನ್ನ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ. ಸದ್ಯ ಘಟನೆ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *