ನ್ಯಾಯಾಧೀಶೆಯನ್ನೇ ಅಪಹರಣಗೈಯಲು ಯತ್ನಿಸಿದ ಕ್ಯಾಬ್ ಡ್ರೈವರ್!

ನವದೆಹಲಿ: ಮಹಿಳೆಯರ ಜೊತೆ ಕ್ಯಾಬ್ ಡ್ರೈವರ್ ಗಳು ಅಸಭ್ಯವಾಗಿ ವರ್ತಿಸಿ ಸಿಕ್ಕಿಬಿದ್ದ ಘಟನೆಗಳನ್ನು ಕೇಳಿದ್ದೀರಿ. ಆದ್ರೆ ಇದೀಗ ಕ್ಯಾಬ್ ಡ್ರೈವರೊಬ್ಬ ನ್ಯಾಯಾಧೀಶೆಯನ್ನೇ ಅಪಹರಣ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಸದ್ಯ ಕ್ಯಾಬ್ ಡ್ರೈವರ್ ನನ್ನು ಬಂಧಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಕರ್ಕರ್ ಡೂಮ ಕೋರ್ಟ್ ಗೆ ಕ್ಯಾಬ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಡ್ರೈವರ್ ಮಾರ್ಗ ಬದಲಿಸಿ ರಾಷ್ಟ್ರೀಯ ಹೆದ್ದಾರಿ 24ರಲ್ಲಿ ಹಪುರ್ ಕಡೆ ಕ್ಯಾಬ್ ಚಲಾಯಿಸಲು ಮುಂದಾದ. ಈ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ನಾನು ನನ್ನ ಸಹೋದ್ಯೋಗಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ರವಾನಿಸಿದೆ ಅಂತ ನ್ಯಾಯಾಧೀಶೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಹಿಳೆ ಎದುರೆ ಹಸ್ತಮೈಥುನ ಮಾಡಿಕೊಂಡ ಉಬರ್ ಕ್ಯಾಬ್ ಡ್ರೈವರ್ ಅರೆಸ್ಟ್

ಸ್ವಲ್ಪ ಮುಂದಕ್ಕೆ ತನ್ನ ವಾಹನ ಚಲಾಯಿಸಿದ ಚಾಲಕ ಬಳಿಕ ದೆಹಲಿಯತ್ತ ಸಂಚರಿಸಲು ಯೂಟರ್ನ್ ತೆಗೆದುಕೊಂಡ. ಕೂಡಲೇ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಘಾಜಿಪುರ್ ಟೋಲ್ ಪಲಾಜಾದ ಬಳಿ ಕ್ಯಾಬ್ ಡ್ರೈರ್ ನನ್ನು ಬಂಧಿಸಿದ್ದಾರೆ.

ಚಾಲಕ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *