ಸಿಎಎ ಕಾಯ್ದೆ ಭಾರತೀಯರಿಗೆ ಸಮಸ್ಯೆಯೆಂದು ಸಾಬೀತು ಪಡಿಸಿದ್ರೆ 1 ಕೋಟಿ ಬಹುಮಾನ

ತಮಿಳುನಾಡು: ಸಿಎಎ ಕಾಯ್ದೆಯಿಂದ ಭಾರತೀಯರಿಗೆ ಸಮಸ್ಯೆಯೆಂದು ಸಾಬೀತು ಪಡಿಸಿದರೆ ಒಂದು ಕೋಟಿ ರೂ. ಬಹುಮಾನ ಸಿಗಲಿದೆ.

ಹೌದು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಕಾಯ್ದೆಯಲ್ಲಿ ಭಾರತೀಯ ಪ್ರಜೆ ಪೌರತ್ವ ಕಳೆದುಕೊಳ್ಳುತ್ತಾನೆ ಎಂದು ಸಾಬೀತು ಪಡಿಸಿ ಒಂದು ಕೋಟಿ ಗೆಲ್ಲಿ ಎಂಬ ಚಾಲೆಂಜ್ ಅನ್ನ ವಕೀಲರೊಬ್ಬರು ಹಾಕಿದ್ದಾರೆ. ನಿಮ್ಮ ಬಳಿ ಯಾವುದಾದರೂ ದಾಖಲೆಯ ಸಮೇತ ಸಿಎಎ ಕಾಯ್ದೆಯೂ ಭಾರತದ ಪ್ರಜೆಗೆ ಪೌರತ್ವವನ್ನ ಕಳೆಯುತ್ತದೆ ಎಂದು ಸಾಬೀತು ಪಡಿಸಿ ಎಂದು ಚಾಲೆಂಜ್ ಹಾಕಿದ್ದಾರೆ.

ಒಂದು ಕೋಟಿ ಗಳಿಸುವ ಸುವರ್ಣಾವಕಾಶವನ್ನ ತಮಿಳುನಾಡಿನ ಬಿಜೆಪಿಯ ಲಿಗಲ್ ಸೇಲ್‍ನ ಜಿಲ್ಲಾ ಕಾರ್ಯದರ್ಶಿಯಾಗಿರುವ ಕೆ.ತಂಗವೇಲ್ ಅವರು ಈ ರೀತಿಯ ಚಾಲೆಂಜ್ ಹಾಕಿದ್ದಾರೆ. ಯಾರಾದರೂ ಭಾರತೀಯರಿಗೆ ಈ ಕಾಯ್ದೆ ತೊಂದರೆ ಆಗುತ್ತದೆ ಎಂದು ಸಾಬೀತು ಮಾಡಿದರೆ ಒಂದು ಕೋಟಿ ಹಣ ಬಹುಮಾನವಾಗಿ ಗಳಿಸಬಹುದು ಎಂದು ಭಿತ್ತಿಪತ್ರಗಳನ್ನ ಹೊರಡಿಸಿದ್ದಾರೆ.

ಪೌರತ್ವ ತಿದ್ದುಪಡಿ ನಿಷೇಧ ಕಾಯ್ದೆ 2019ರಲ್ಲಿ ಭಾರತೀಯ ಪೌರತ್ವದ ಪ್ರಮುಖ ಕಾಯ್ದೆಯಾಗಿದ್ದು, ಇದರಿಂದ ಅಕ್ರಮ ವಲಸಿಗರನ್ನ ತಡೆಯಲು ಸಾಧ್ಯವಾಗುತ್ತದೆ.

Comments

Leave a Reply

Your email address will not be published. Required fields are marked *