ಲವ್‌ ಜಿಹಾದ್‌ಗೆ ಬಲಿಯಾಗಲ್ಲ ಅಂದ್ರೆ ಅವಳ ಕುತ್ತಿಗೆಗೆ ಚಾಕು ಹಾಕಿ ಸಾಯಿಸ್ತಾರೆ.. ಸರ್ಕಾರ ಮೂಕಪ್ರೇಕ್ಷಕನಂತಿರುತ್ತೆ: ಸಿ.ಟಿ.ರವಿ

– ಇನ್ನಾದರೂ ಎದ್ದು ನಿಲ್ಲು ಹಿಂದೂ, ಸುಮ್ಮನಿದ್ದರೆ ದೇಶವೂ ಇರದು, ಜಾತಿಯು ಇರದು ಎಂದ ಬಿಜೆಪಿ ನಾಯಕ

ಬೆಂಗಳೂರು: ಹುಬ್ಬಳ್ಳಿಯಲ್ಲಿ ಯುವತಿ (Hubballi Murder) ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ (Congress) ಸರ್ಕಾರದ ವಿರುದ್ಧ ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ (C.T.Ravi) ಕಿಡಿಕಾರಿದ್ದಾರೆ. ಅವರು ಅವಳ ಕುತ್ತಿಗೆಗೆ ಚಾಕು ಹಾಕಿ ಸಾಯಿಸುತ್ತಾರೆ. ಸರ್ಕಾರ ಮೂಕಪ್ರೇಕ್ಷಕನಂತಿರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಸಿ.ಟಿ.ರವಿ, ರಾಜ್ಯದಲ್ಲಿ ಕಾಂಗ್ರೆಸ್ಸಿನ ತುಘಲಕ್ ದರ್ಬಾರ್‌ನಲ್ಲಿ ನಮ್ಮ ದುರ್ದೈವ. ಹನುಮಾನ್ ಚಾಲೀಸಾ ಕೇಳುತ್ತೀರಾ? ಅವರು ನಿಮ್ಮ ಮೇಲೆ ಹಲ್ಲೆ ಮಾಡುತ್ತಾರೆ ಮತ್ತು ಕಾಂಗ್ರೆಸ್ ಸರ್ಕಾರ ನಿಮ್ಮ ಮೇಲೆಯೇ ಕೇಸ್ ಹಾಕುತ್ತಾರೆ. ಇದನ್ನೂ ಓದಿ: ನೇಹಾ ಹತ್ಯೆಯಿಂದ ಕಟ್ಟೆಯೊಡೆದ ಆಕ್ರೋಶ; 3 ಕಿಮೀ ಪಾರ್ಥಿವ ಶರೀರ ಮೆರವಣಿಗೆಗೆ ಸಿದ್ಧತೆ – ಕಾಲೇಜು ಬಂದ್‌ಗೆ ಕರೆ!

ರಾಮಮಂದಿರ ಉದ್ಘಾಟನೆ ವಿಜೃಂಭಣೆಯಿಂದ ಮಾಡ್ತೀರಾ? ಅವರು ರಾಮೇಶ್ವರ ಕೆಫೆಗೆ ಬಾಂಬ್ ಇಡುತ್ತಾರೆ ಮತ್ತು ಕಾಂಗ್ರೆಸ್ ಸರ್ಕಾರ ಅದನ್ನು ಲೋ ಇಂಟೆನ್ಸಿಟಿ ಬಾಂಬ್ ಎಂದು ಮೂಲೆಗುಂಪು ಮಾಡುತ್ತದೆ.

ರಾಮನವಮಿ ದಿನ ಜೈ ಶ್ರೀರಾಮ್ ಅನ್ನುತ್ತೀರಾ? ಅವರು ಅಲ್ಲಾ ಅಕ್ಬರ್ ಘೋಷಣೆ ಕೂಗಿ ಎಂದು ಹಲ್ಲೆ ಮಾಡುತ್ತಾರೆ ಮತ್ತು ಸರ್ಕಾರ ಮಗುಮ್ಮಾಗಿ ಕುಳಿತುಕೊಳ್ಳುತ್ತದೆ. ಇದನ್ನೂ ಓದಿ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ!

ನಿಮ್ಮ ಮನೆ ಮಗಳು ನಿನ್ನ ಲವ್ ಜಿಹಾದ್‌ಗೆ ಬಲಿಯಾಗುವುದಿಲ್ಲ ಎಂದು ತಿರಸ್ಕರಿಸುತ್ತಾಳಾ? ಅವರು ಅವಳ ಕುತ್ತಿಗೆಗೆ ಚಾಕು ಹಾಕಿ ಸಾಯಿಸುತ್ತಾರೆ. ಮತ್ತು ಸರ್ಕಾರ ಮೂಕಪ್ರೇಕ್ಷಕನಂತಿರುತ್ತದೆ.

ಬಿಜೆಪಿ ಪರ ಚುನಾವಣಾ ಪ್ರಚಾರ ಕೈಗೊಳ್ಳುತ್ತೀರಾ ? ಅವರು ನಿಮ್ಮ ಮೇಲೆ ಕಾರು ಹರಿಸಿ ಸಾಯಿಸುತ್ತಾರೆ ಮತ್ತು ಎಲ್ಲರು ಮೌನವಾಗಿರುತ್ತಾರೆ. ನನಗಲ್ಲ ಎನ್ನುವ ಕಾಲ ಇದಲ್ಲ. ಪ್ರತಿಯೊಂದು ಬೆಳವಣಿಗೆಗೂ ನಮ್ಮ ಮೌನವು ಒಂದು ಕಾರಣ. ಇನ್ನಾದರೂ ಎದ್ದು ನಿಲ್ಲು ಹಿಂದೂ, ಸುಮ್ಮನಿದ್ದರೆ ದೇಶವೂ ಇರದು, ಜಾತಿಯು ಇರದು, ನಾನು ಇರೆನು, ನೀನು ಇರಲಾರೆ ಎಂದು ಸಿ.ಟಿ.ರವಿ ಬರೆದುಕೊಂಡಿದ್ದಾರೆ.