ನೀವೇನಾದರೂ ಆಪರೇಷನ್‌ ಅಂತ ಕೈ ಹಾಕಿದ್ರೆ, ಮುಟ್ಟಿ ನೋಡ್ಕೋಬೇಕು ಹಾಗೆ ಮಾಡ್ತೀವಿ: ಸಿ.ಟಿ. ರವಿ

C.T.RAVI

ಬೆಂಗಳೂರು: ನೀವೇನಾದರೂ ಆಪರೇಷನ್ ಅಂತ ಕೈ ಹಾಕಿದರೆ, ಮುಟ್ಟಿ ನೋಡ್ಕೋಬೇಕು ಹಾಗೆ ಮಾಡುತ್ತೇವೆ ಎಂದು ಕಾಂಗ್ರೆಸ್‌ಗೆ ಮಾಜಿ ಸಚಿವ ಸಿ.ಟಿ. ರವಿ (C.T. Ravi) ಎಚ್ಚರಿಕೆ ನೀಡಿದರು.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಎಸ್.ಟಿ. ಸೋಮಶೇಖರ್ ಅವರು ಹಿರಿಯ, ಅನುಭವಿ ಶಾಸಕರು. ಇತ್ತೀಚೆಗೆ ಕೇಳಿ ಬರುತ್ತಿರುವ ಊಹಾಪೋಹಾಗಳ‌ ಬಗ್ಗೆ ಚರ್ಚಿಸಿದ್ದಾರೆ. ಅವರ ಬೆಂಬಲಿಗರನ್ನು ಕಾಂಗ್ರೆಸ್‌ನವರು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬಿಬಿಎಂಪಿ, ಸ್ಥಳೀಯ ಚುನಾವಣೆಗಳಲ್ಲಿ ಕೆಟಗರಿ ಆಸೆ ತೋರಿಸಿ ಸೆಳೆಯುತ್ತಿದ್ದಾರೆ. ಕಾಂಗ್ರೆಸ್‌ನವರು ಗೆದ್ದರು, ಅಧಿಕಾರಕ್ಕೆ ಏರಿದರು. ಒಂದು ಸ್ಥಿರವಾದ ಸರ್ಕಾರ ಕೊಡಲಿ ಅವರು. ನಿಮಗೆ ಸ್ಪಷ್ಟ ಬಹುಮತ ಇದ್ದರೂ ಅತಿಯಾಗಿ ಮಾಡಲು ಹೋಗಬೇಡಿ. ನಾವೇನೂ ಸುಮ್ನೆ ಕೂರುವ ಜನ ಅಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಈಶ್ವರ್ ಖಂಡ್ರೆ ಕಾಲಿಗೆ ಶರಣು- ಕಾಂಗ್ರೆಸ್ ಸೇರ್ತಾರಾ ಬಿಜೆಪಿ ಶಾಸಕ ಸಲಗರ್?

‌ನಾವೇನಾದರೂ ಮಾಡಿದರೆ ನೀವು ಮೇಲೇಳಲೂ ಆಗಲ್ಲ. ನಿಮಗೆ ನಮ್ಮವರನ್ನು ಕರೆದುಕೊಳ್ಳುವ ಅನಿವಾರ್ಯತೆ ಏನಿದೆ? ನೀವೇನಾದರೂ ಆಪರೇಷನ್ ಅಂತ ಕೈ ಹಾಕಿದ್ರೆ ಮುಟ್ಟಿ ನೋಡ್ಕೋಬೇಕು ಹಾಗೆ ಮಾಡ್ತೇವೆ ಎಂದು ಹೇಳಿದರು.

ನಮ್ಮಿಂದ ಯಾರೂ ಕಾಂಗ್ರೆಸ್‌ಗೆ ಹೋಗಲ್ಲ. ಅವರ ಹಿರಿಯ ಸಚಿವರು, ಶಾಸಕರನ್ನೇ ಹಿಡಿದಿಟ್ಟುಕೊಳ್ಳಲು ಅವರಿಗೆ ಆಗ್ತಿಲ್ಲ. ಅವರು ಅತಿರೇಕಕ್ಕೆ ಕೈ ಹಾಕಿದರೆ ನಮಗೆ ಮುಂದೆ ಏನ್ ಮಾಡ್ಬೇಕು ಅಂತ ಗೊತ್ತು. ಚೆಸ್ ಆಟ ಏಕಮುಖ ಅಲ್ಲ. ನಮಗೆ ಚೆಕ್ ಮೇಟ್ ಕೊಡಲು ಬಂದ್ರೆ, ನಮಗೂ ಚೆಕ್ ಮೇಟ್ ಕೊಡಲು ಗೊತ್ತು. ನಾವು ಚೆಕ್ ಮೇಟ್ ಮಾಡಿದ್ರೆ ಸಣ್ಣಪುಟ್ಟ ಸೈನಿಕರಿಗೆ ಮಾಡಲ್ಲ. ನೇರ ರಾಜನಿಗೇ ಚೆಕ್ ಮೇಟ್ ಮಾಡ್ತೀವಿ ಎಂದು ಮಾರ್ಮಿಕವಾಗಿ ಮಾತನಾಡಿದರು. ಇದನ್ನೂ ಓದಿ: ಆ.30 ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿಗೆ ಚಾಲನೆ: ಲಕ್ಷ್ಮಿ ಹೆಬ್ಬಾಳ್ಕರ್

ನಾನು ಎಸ್. ಟಿ. ಸೋಮಶೇಖರ್ ಜತೆ ಫೋನಿನಲ್ಲಿ ಮಾತಾಡಿದ್ದೆ. ಅವರು ಇವತ್ತು ಸಿಕ್ತೀನಿ ಅಂದಿದ್ದರು. ಅದಕ್ಕಾಗಿ ಪಕ್ಷದ ಕಚೇರಿಯಲ್ಲಿ ಅವರ ಜತೆ ಒಂದೂವರೆ ಗಂಟೆ ಮಾತಾಡಿದ್ದೇನೆ. ಅವರು ಒಂದಷ್ಟು ಸಮಸ್ಯೆಗಳನ್ನು ಹೇಳಿಕೊಂಡರು. ಅದೇನು ಬಗೆಹರಿಸದಂಥ ಸಮಸ್ಯೆ ಅಲ್ಲ. ನಾಯಕತ್ವ ಇಲ್ಲದ ಸ್ಥಿತಿಗೆ ನಾವು ಬಂದಿಲ್ಲ. ನಿರ್ಣಯ ಕೈಗೊಳ್ಳದ ಸ್ಥಿತಿಗೆ ನಾವು ಬಂದಿಲ್ಲ ಎಂದರು.

ಕೇಂದ್ರದ ಕೆಲ ಯೋಜನೆಗಳಲ್ಲಿ ಅಕ್ರಮ‌ ಬಗ್ಗೆ ಸಿಎಜಿ ವರದಿ ವಿಚಾರವಾಗಿ ಮಾತನಡಿ, ರೀಡೂ ಪ್ರಕರಣದಲ್ಲಿ ನೀವು ಯಾವ ಕ್ರಮ ತಗೊಂಡ್ರಿ? ಮೊದಲು ರೀಡೂ ಕೇಸ್‌ನಲ್ಲಿ ಕ್ರಮ ವಹಿಸಿ. ರಾಜ್ಯದಲ್ಲೂ ಸಿಎಜಿ ವರದಿ ಕೊಟ್ಟಿದೆ, ಅಕ್ರಮ ಆಗಿದೆ ಅಂದಿದ್ದಾರೆ. ನೀವು ಇದರ ಬಗ್ಗೆ ಕ್ರಮ ಕೈಗೊಳ್ಳಿ ಮೊದಲು ಎಂದು ತಿಳಿಸಿದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]