ಒಂದೇ ದಿನದಲ್ಲಿ ರೈತ ಸಂಘದ ಜಾಗ ಮಗಳ ಕಂಪನಿಗೆ -ಸಿಪಿ ಯೋಗೇಶ್ವರ್ ದರ್ಬಾರ್!

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ರೈತರ ಸಹಕಾರ ಸಂಘಕ್ಕೆ ಸೇರಿದ ಜಾಗ ಹಾಗೂ ಗೋಡೌನನ್ನು ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅಕ್ರಮವಾಗಿ ಕಬಳಿಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಸಿಪಿ ಯೋಗೇಶ್ವರ್ ತಮ್ಮ ಮಗಳು ನಿಶಾ ಒಡೆತನದ ಡೆಕನ್ ಫೀಲ್ಡ್ ಕಂಪನಿಗೆ 30 ವರ್ಷಕ್ಕೆ ಅಕ್ರಮವಾಗಿ ಜಾಗವನ್ನು ಅಗ್ರಿಮೆಂಟ್ ಮಾಡಿಸಿದ್ದಾರೆ ಎನ್ನಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಸಂರಕ್ಷಣೆಗೆ ಕೋಲ್ಡ್ ಸ್ಟೋರೇಜ್‍ಗೆ ಮೀಸಲಿಟ್ಟಿದ್ದ ಜಾಗಕ್ಕೆ ನಿಶಾ ಒಡೆತನದ ಡೆಕನ್ ಕಂಪನಿ ಕಳೆದ ಏಪ್ರಿಲ್ 11 ರಂದು ಟೆಂಡರ್‍ಗೆ ಅರ್ಜಿ ಸಲ್ಲಿಸಿತ್ತು. ಆದರೆ ಒಂದೇ ದಿನದಲ್ಲಿ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ಕಂಪನಿಗೆ ಬಾಡಿಗೆ ಕೊಡಲು ತೀರ್ಮಾನಿಸಿದೆ.

ಪ್ರತಿ ತಿಂಗಳು ಗೋಡೌನ್‍ಗೆ 80 ಸಾವಿರ ರೂಪಾಯಿ ಮತ್ತು ಪ್ರತಿ ವರ್ಷಕ್ಕೆ ಒಂದು ಎಕರೆ ಖಾಲಿ ನಿವೇಶನಕ್ಕೆ 30 ಸಾವಿರ ರೂಪಾಯಿ ಕೊಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷ ಶೇ.10ರಷ್ಟು ಬಾಡಿಗೆ ಹೆಚ್ಚಿಸುವ ಬದಲು ಪ್ರತಿ ಮೂರು ವರ್ಷಕ್ಕೊಮ್ಮೆ ಕೇವಲ ಶೇ.5ರಷ್ಟು ಬಾಡಿಗೆ ಹೆಚ್ಚಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ.

ಆದರೆ ಯಾವುದೇ ಅಕ್ರಮ ನಡೆದಿಲ್ಲ, ನಡೆದಿದ್ದರೆ ಯಾವುದೇ ತನಿಖೆಗೂ ನಾವು ಸಿದ್ಧರಿದ್ದೇವೆ ಎಂದು ಸಂಘದ ನಿರ್ದೇಶಕರು ಹೇಳುತ್ತಾರೆ.

Comments

Leave a Reply

Your email address will not be published. Required fields are marked *