ಚಂದನವನದ ಹಿರಿಯ ನಿರ್ಮಾಪಕ ಸಿ.ಜಯರಾಮ್ ಇನ್ನಿಲ್ಲ

C. Jayaram

ಬೆಂಗಳೂರು: ಆಟೋ ರಾಜ, ನಾ ನಿನ್ನ ಬಿಡಲಾರೆಯಂತಹ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಹಿರಿಯ ನಿರ್ಮಾಪಕ ಸಿ. ಜಯರಾಮ್ ನಿಧನರಾಗಿದ್ದಾರೆ.

auto raja

ಸೆ.9ರ ಬೆಳಗಿನ ಜಾವ ಜಯರಾಮ್‍ರವರು ಕೊನೆಯುಸಿರೆಳೆದಿದ್ದು, ಇದೀಗ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವಾರು ಗಣ್ಯಾತಿ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. 70-80ರ ದಶಕದಲ್ಲಿ ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಅವರು ನಂತರ ಸಿನಿಮಾ ನಿರ್ಮಾಣದಿಂದ ದೂರ ಉಳಿದಿದ್ದರು. ಇದನ್ನೂ ಓದಿ: ಮುಂಬೈನಿಂದಲೇ ಕರೆ ಮಾಡಿ ವಕೀಲರ ಜೊತೆ ಅನುಶ್ರೀ ಮಾತು!

na ninna bidalare

ಶ್ರೀನಾಥ್ ಹಾಗೂ ಆರತಿ ಅಭಿನಯದ ಪಾವನ ಗಂಗ, ರಜನಿಕಾಂತ್ ಮತ್ತು ವಿಷ್ಣುವರ್ಧನ್ ಒಟ್ಟಿಗೆ ನಟಿಸಿದ್ದ ಗಲಾಟೆ ಸಂಸಾರ, ಆನಂತ್ ನಾಗ್‍ರವರ ‘ನಾ ನಿನ್ನ ಬಿಡಲಾರೆ’, ಶಂಕರ್ ನಾಗ್ ನಟಿಸಿದ್ದ ಆಟೋ ರಾಜ ಹೀಗೆ ಹಲವಾರು ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಜಯರಾಮ್ ನೀಡಿದ್ದಾರೆ. ಅಲ್ಲದೇ ಜಯರಾಮ್‍ರವರು ಪಾರ್ವತಮ್ಮ ರಾಜ್‌ ಕುಮಾರ್‌ರವರ ಸಹೋದರಿಯನ್ನೇ ವಿವಾಹವಾಗಿದ್ದರು. ಇದನ್ನೂ ಓದಿ: ತಲ್ವಾರ್‌ನಿಂದ ಕೇಕ್ ಕತ್ತರಿಸಿ ಬರ್ತ್‍ಡೇ ಆಚರಿಸಿಕೊಂಡ ಡಾಬಾ ಮಾಲೀಕ

prakash

ಸದ್ಯ ಜಯರಾಮ್ ಅವರ ಪುತ್ರ ಮಿಲನ ಪ್ರಕಾಶ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡು ದೊಡ್ಡ ಹೆಸರು ಮಾಡಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಅವರ ಮಿಲನ, ವಂಶಿ, ವಿನಯ್ ರಾಜ್ ಕುಮಾರ್ ಅವರ ಸಿದ್ದಾರ್ಥ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್, ಯಶ್ ಹಾಗೂ ವಿಜಯ್ ರಾಘವೇಂದ್ರರವರು ನಟಿಸಿರುವ ಗೋಕುಲ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *